ರಿಪಬ್ಲಿಕನ್ ಯೂತ್ ಫೆಡರೆಷನ್‌ಯಿಂದ ಪ್ರತಿಭಟನೆ

ರಿಪಬ್ಲಿಕನ್ ಯೂತ್ ಫೆಡರೆಷನ್‌ಯಿಂದ ಪ್ರತಿಭಟನೆ

ರಿಪಬ್ಲಿಕನ್ ಯೂತ್ ಫೆಡರೆಷನ್‌ಯಿಂದ ಪ್ರತಿಭಟನೆ

ಕಲಬುರಗಿ: ಸುಪ್ರೀಂಕೋರ್ಟ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಆರೋಪಿಯನ್ನು ಅತ್ಯಂತ ಕಠಿಣ ಶಿಕ್ಷೆ ಆಗಬೇಕೆಂದು ರಿಪಬ್ಲಿಕನ್ ಯೂತ್ ಫೆಡರೆಷನ್ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಕೀಲ ಕಿಶೋರ ರಾಜೇಶ ಅವರ ಭಾವ ಚಿತ್ರ ಸುಟ್ಟು ಹಾಕಿ ಪ್ರತಿಭಟನೆ ನಡಿಸಿ ಜಿಲ್ಲಾಧಿಕಾರಿಳ ಮುಖಾಂತರ ಘನತೆವೆತ್ತ ಗೌರವಾನಿತ್ವ ರಾಷ್ಟ್ರಪತಿಗಳು, ಅವರಿಗೆ ಮನವಿ ಸಲ್ಲಿಸಿದರು.  

ದಿನಾಂಕ : 06-10-2025 ರಂದು ಎಂದಿನAತೆ ಸುಪ್ರೀಂಕೋರ್ಟ ಕಲಾಪ ನಡೆಯುತ್ತಿರುವಾಗ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿ ಶ್ರೀ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿರುವುದು ಅತ್ಯಂತ ಖಂಡನೀಯವಾಗಿದೆ. ಈ ಘಟನೆ ನ್ಯಾಯಾಂಗ ಗೌರವಕ್ಕೆ ಧಕ್ಕೆಯುಂಟು ಮಾಡುವ ಸಂಗತಿಯಾಗಿದೆ. ಇಂತಹ ಕೃತ್ಯಗಳು ಕಾನೂನು ಹಾಗೂ ನ್ಯಾಯಾಂಗ ಗೌರವವನ್ನು ಹಾಳು ಮಾಡುತ್ತಿದೆ.

ಸನಾತನಕ್ಕೆ ಅವಮಾನ ಸಹಿಸೋದಿಲ್ಲ ಎಂದು ವಕೀಲ ಕಿಶೋರ ರಾಜೇಶ ಈ ಕೃತ್ಯ ಎಸಗಿದ್ದು, ಅತ್ಯಂತ ಕೆಳಜಾತಿಯ ಪ್ರತಿಭಾವಂತನೊಬ್ಬ ಉನ್ನತ ಹುದ್ದೆಯಲ್ಲಿ ಕುಳಿತಿರುವುದು ಸನಾತನವಾದಿಗಳಾದ ನಾವು ಸಹಿಸುವುದಿಲ್ಲವೆಂಬುದು ಜಾತಿವಾದಿಗಳು ನಡೆಸಿರುವ ಕೃತ್ಯ ಈ ಘಟನೆಯೇ ಜಾತಿ ಪ್ರತಿಜ್ಞೆಗೆ ಸಾಕ್ಷಿಯಾಗಿದೆ. ಡಾ. ಬಿ.ಆರ್. ಅಂಬೇಡ್ಕರ ರವರು ಬರೆದ ಸಂವಿಧಾನ ಒಪ್ಪುವುದಿಲ್ಲ. ಮನು ಸಂವಿಧಾನವೇ ನಮಗೆ ಬೇಕು ಎನ್ನುವ ಸನಾತನಿಗಳ ಇಂದಿನ ಘಟನೆಯ ಕೃತ್ಯವಾಗಿದೆ.

ಸುಪ್ರೀಂಕೋರ್ಟ ಮುಖ್ಯ ನ್ಯಾಯಮೂರ್ತಿ ಶ್ರೀ ಬಿ.ಆರ್. ಗವಾಯಿ ಅವರು ಈ ಹಿಂದೆ ಮಾಜಿ ಉಪರಾಷ್ಟ್ರಪತಿ ಧನಕರ್ ರವರು ಸಂಸತ ದೊಡ್ಡದು. ಸಂವಿಧಾನ ದೊಡ್ಡದಲ್ಲ ಎಂದು ಹೇಳಿದರು 'ಇದಕ್ಕೆ ಬಿ.ಆರ್. ಗವಾಯಿ ರವರು ಸಂಸತ ದೊಡ್ಡದಲ್ಲ. ದೇಶದ ಸಂವಿಧಾನ ಸರ್ವೋಚ್ಛ ಎಂಬ ಹೇಳಿಕೆ ಕೊಟ್ಟಿದ್ದರು. ಅದೇ ರೀತಿಯಾಗಿ ಮೊನ್ನೆ ಅಮರಾವತಿಯಲ್ಲಿ ನಡೆದ ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಅವರ ತಾಯಿಯಾದ ಕಮಲತಾಯಿ ಗವಾಯಿ ರವರಿಗೆ ನೀಡಿದ ಆವ್ಹಾನವನ್ನು ಅವರು ನಿರಾಕರಿಸಿದ್ದಾರೆಂಬ ಕಾರಣಕ್ಕೆ ಈ ಕೃತ್ಯ ಎಸಗಿರಬಹುದು.

ಆದ್ದರಿಂದ ಸುಪ್ರೀಂಕೋರ್ಟ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆತದ ಘಟನೆಯ ಆರೋಪಿ ವಕೀಲ ಕಿಶೋರ ರಾಕೇಶ ಇತನನ್ನು ದೇಶದ್ರೋಹಿ ಎಂದು ಘೋಷಿಸಿ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. 

ಜಿಲ್ಲಾ ಸಂಚಾಲಕ ಹನುಮಂತ ಇಟಗಿ, ಗೌರವ ಸಂಚಾಲಕ ಸಂತೋಷ ಮೇಲ್ಮನಿ, ವಿನೋದ ಕಾಂಬಳೆ, ಮುತ್ತಣ್ಣ ನಾಡಗೀರಿ, ಕಾನೂ ಕೋವಿ, ವಿಜಯಕುಮಾರ ಸಿಂಧೆ, ಬಾಳು ಬಿಕೆ, ಸಿದ್ದು ಬೇಲಸೂರ, ಗೀತಾ ಮುದಗಲ್, ಮಲ್ಲಿಕ ಕಟ್ಟಿಮನಿ, ಅರುಣ ಸಾಗರ, ರಾಣು ಮುದ್ಧನಕರ್, ಮಿಲಿಂದ್ ಸನಗುಂದಿ, ಮಲ್ಲಿಕಾರ್ಜುನ್ ಹೊಸಮನಿ, ಶಿವಕುಮಾರ ಜಾಲವಾದ, ವಿಜಯಕುಮಾರ ಸಿಂಧೆ, ಶಿವಾನಂದ ಬುಕ್ಕನ, ಅಶೋಕ ಶರ್ಮಾ, ನವೀನ ಸಾರ್ಮಾಟ್, ಜಗದೀಶ ಅಷ್ಟಗಿ ಇತರರು ಉಪಸ್ಥಿತರಿದ್ದರು.