ಡಾ.ಪ್ರಣವಾನಂದ ಶ್ರೀಗಳ ಪಾದಯಾತ್ರೆ 21ನೇ ದಿನಕ್ಕೆ ಮಧ್ಯಸ್ಥಿಕೆ ವಹಿಸಲು ಡಿಕೆ ಸಹೋದರರಿಗೆ ಆಗ್ರಹ
ಈಡಿಗರ ಪಾದಯಾತ್ರೆ ಮಧ್ಯಸ್ಥಿಕೆ ವಹಿಸುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅತಿ ಹಿಂದುಳಿದ ಸ್ವಾಮೀಜಿಗಳ ನಿಯೋಗಕ್ಕೆ ಭರವಸೆ
ಡಾ.ಪ್ರಣವಾನಂದ ಶ್ರೀಗಳ ಪಾದಯಾತ್ರೆ 21ನೇ ದಿನಕ್ಕೆ ಮಧ್ಯಸ್ಥಿಕೆ ವಹಿಸಲು ಡಿಕೆ ಸಹೋದರರಿಗೆ ಆಗ್ರಹ
ಬೆಂಗಳೂರು : ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಬೇಡಿಕೆಗಳನ್ನು ಒತ್ತಾಯಿಸಿ ಡಾ. ಪ್ಪ್ರಣವಾನಂದ ಶ್ರೀಗಳು ನಡೆಸುತ್ತಿರುವ ಐತಿಹಾಸಿಕ ಪಾದಯಾತ್ರೆಯನ್ನು ಮಧ್ಯಸ್ಥಿಕೆ ವಹಿಸಿ ಬಗೆಹರಿಸಲು ಪ್ರಯತ್ನಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಅವರ ನಿವಾಸದಲ್ಲಿ ಭೇಟಿಯಾದ ಅತಿ ಹಿಂದುಳಿದ ಸ್ವಾಮೀಜಿಗಳ ರಾಷ್ಟ್ರೀಯ ಅಧ್ಯಕ್ಷರಾದ ಬಸವನಾಗಿ ದೇವ ಶರಣರು ನೇತೃತ್ವದ ಜೊತೆ ಮಹತ್ವದ ಚರ್ಚೆ ನಡೆಸಿ ಪಾದಯಾತ್ರೆಯನ್ನು ಸುಖಾಂತ್ಯಗೊಳಿಸಲು ಚಿತ್ರದುರ್ಗದಲ್ಲಿ ತಾನು ವೈಯಕ್ತಿಕವಾಗಿ ಅಥವಾ ಉಸ್ತುವಾರಿ ಸಚಿವರ ಮೂಲಕ ಸ್ವಾಮೀಜಿಗಳ ಜೊತೆ ಮತ್ತೆ ವಹಿಸಲಾಗುವುದು. ಸಮಸ್ಯೆ ಬಗೆಹರಿಸಲು ಸಾಧ್ಯವಿರುವ ಬೇಡಿಕೆಗಳನ್ನು ಆದ್ಯತೆಯ ಮೇಲೆ ಪರಿಗಣಿಸಿ ಸ್ವಾಮೀಜಿಯವರು ಪಾದಯಾತ್ರೆ ಕೈ ಬಿಡುವಂತೆ ಮನವೊಲಿಸಲಾಗುವುದು. ಅತಿ ಹಿಂದುಳಿದ ಸ್ವಾಮೀಜಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 60-40 ನಿವೇಶನ ನೀಡುವುದಾಗಿ ತಾನು ನೀಡಿದ ಭರವಸೆಯನ್ನು ಕೂಡಲೇ ಈಡೇರಿಸಲಾಗುವುದು. ಈಗಾಗಲೇ 22 ಸ್ವಾಮೀಜಿಗಳಿಗೆ ನಿವೇಶನ ನೀಡುವ ಹಳೆಯ ಪ್ರಸ್ತಾಪ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಅತಿ ಹಿಂದುಳಿದ ವರ್ಗಗಳ ಸಮಸ್ಯೆ ಹಾಗೂ ಡಾ. ಪ್ರಣವಾನಂದ ಶ್ರೀಗಳ ಪಾದಯಾತ್ರೆಯ ಕುರಿತಾಗಿ ಕೂಡಲೇ ಕ್ರಮ ಕೈಗೊಳ್ಳಲು ಆಪ್ತ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಉಪಮುಖ್ಯಮಂತ್ರಿಗಳನ್ನು ಭೇಟಿಯಾಗುವ ಪೂರ್ವದಲ್ಲಿ ಮಾಜಿ ಲೋಕಸಭಾ ಸದಸ್ಯರಾದ ಡಿ.ಕೆ ಸುರೇಶ್ ಅವರನ್ನು ಭೇಟಿಯಾಗಿ ಅತಿ ಹಿಂದುಳಿದ ಸ್ವಾಮೀಜಿಗಳ ಹೋರಾಟ ಮತ್ತು ಡಾ. ಪ್ರಣವಾನಂದ ಶ್ರೀಗಳ ಪಾದಯಾತ್ರೆಯ ಬಗ್ಗೆ ಗಮನ ಸೆಳೆಯಲಾಯಿತು.
ಉಪಮುಖ್ಯಮಂತ್ರಿಗಳನ್ನು ಭೇಟಿಯಾದ ಅತಿ ಹಿಂದುಳಿದ ಸ್ವಾಮೀಜಿಗಳ ರಾಷ್ಟ್ರೀಯ ಅಧ್ಯಕ್ಷರಾದ ಬಸವನಾಗಿ ದೇವ ಶರಣರು ನಿಯೋಗದ ನೇತೃತ್ವ ವಹಿಸಿದ್ದು ಡಾ. ಪ್ರಣವಾನಂದ ಶ್ರೀಗಳು ನಡೆಸುತ್ತಿರುವ ಪಾದಯಾತ್ರೆ ಕೇವಲ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಸಮಸ್ಯೆಯಲ್ಲ. ಅತಿ ಹಿಂದುಳಿದವರು ಅನುಭವಿಸುತ್ತಿರುವ ಸಮಸ್ಯೆಯಾಗಿರುವುದರಿಂದ ಅತಿ ಹಿಂದುಳಿದ ಸ್ವಾಮೀಜಿಗಳು ಕೂಡಾ ಅವರೊಂದಿಗೆ ಪಾದಯಾತ್ರೆಯಲ್ಲಿ ಕೈಜೋಡಿಸಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಜ.6ರಂದು ಪ್ರಾರಂಭಗೊಂಡ ಪಾದಯಾತ್ರೆಯು 21 ದಿನಗಳನ್ನು ಪೂರೈಸಿ ಈಗ ಮಧ್ಯ ಕರ್ನಾಟಕಕ್ಕೆ ತಲುಪಿದೆ. ಪಾದಯಾತ್ರೆ ಇನ್ನೂ ಮುಂದುವರಿದರೆ ಮುಜುಗರ ಉಂಟಾಗುವ ಸಾಧ್ಯತೆ ಇದೆ. 18 ಬೇಡಿಕೆಗಳಲ್ಲಿ ಕನಿಷ್ಠ ಐದು ಬೇಡಿಕೆಗಳನ್ನಾದರೂ ಇತ್ಯರ್ಥಪಡಿಸಲು ಸರಕಾರವು ಮುಂದಾಗ ಬೇಕಾಗಿದೆ. ಸರಕಾರವು ಇನ್ನೂ ಯಾವುದೇ ಸ್ಪಂದನೆ ನೀಡದಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ಆದುದರಿಂದ ತಕ್ಷಣವೇ ಉಪಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ಪಾದಯಾತ್ರೆಯನ್ನು ನಿಲ್ಲಿಸುವಂತೆ ಸ್ವಾಮೀಜಿಗಳ ಜೊತೆ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಪತ್ರ ನೀಡಿ ಆಗ್ರಹಿಸಿದರು.
ನಿಯೋಗದ ಜೊತೆ ಅತಿ ಹಿಂದುಳಿದ ಸ್ವಾಮೀಜಿಗಳ ಖಜಾಂಚಿ ದೊಡ್ಡೆಂದ್ರ ಸ್ವಾಮೀಜಿ, ಉಪಾಧ್ಯಕ್ಷರಾದ ಕುಂಬಾರ ಗುಂಡಯ್ಯ ಸ್ವಾಮೀಜಿ ಹಾಗೂ ಸಂಘಟನಾ ಕಾರ್ಯದರ್ಶಿ ಶಿವಮೂರ್ತಿ ಶಿವಾಚಾರ್ಯರು ಇದ್ದರು.
