ವಿಧಾನ ಪರಿಷತ್ ಸದಸ್ಯ ಶ್ರೀ ಶಶೀಲ್ ಜಿ ನಮೋಶಿಯವರ ಮನವಿಗೆ ಸ್ಪಂದಿಸಿದ ಆರ್ಥಿಕ ಇಲಾಖೆ
ವಿಧಾನ ಪರಿಷತ್ ಸದಸ್ಯ ಶ್ರೀ ಶಶೀಲ್ ಜಿ ನಮೋಶಿಯವರ ಮನವಿಗೆ ಸ್ಪಂದಿಸಿದ ಆರ್ಥಿಕ ಇಲಾಖೆ
ರಾಜ್ಯದ ಶಿಕ್ಷಣ ಇಲಾಖೆಯ ಸರ್ಕಾರಿ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಬೋಧಕೇತರ ಸಿಬ್ಬಂದಿಗೆ ಸಂಭಂದಿಸಿದಂತೆ ಹಿಂದಿನ ಕೆಲವು ತಿಂಗಳುಗಳ ವೇತನ ಡಿಎ ಬಾಕಿ ಹಣ ಹಾಗೂ ಗಳಿಕೆ ರಜೆ ನಗದೀಕರಣ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಖಜಾನೆ ಇಲಾಖೆಯವರು ಬಾಕಿ ಹಣವನ್ನು ಸೆಳೆಯಲು ಸಾಧ್ಯವಿಲ್ಲ ಏಕೆಂದರೆ ಖಜಾನೆ ಇಲಾಖೆಯವರು ಬಾಕಿ ಹಣವನ್ನು ಸೆಳೆಯಲು ಆರ್ಥಿಕ ಇಲಾಖೆಯ ಅನುಮತಿ ಅಗತ್ಯವೆಂದು ತಿಳಿಸಿದ್ದರು ಇದರಿಂದಾಗಿ ಸಿಬ್ಬಂದಿಗಳಿಗೆ ಹಲವು ತಿಂಗಳ ವೇತನ ಇತ್ಯಾದಿಗಳನ್ನು ಸೆಳೆಯಲು ಸಾಧ್ಯವಾಗುತ್ತಿರಲಿಲ್ಲ ಇದನ್ನು ಗಮನಿಸಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ ನಮೋಶಿಯವರು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಆರ್ಥಿಕ ಇಲಾಖೆಯವರಿಗೆ ಪತ್ರ ಬರೆದು
ಶಿಕ್ಷಣ ಇಲಾಖೆಯ ಸರ್ಕಾರಿ ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗು ಉಪನ್ಯಾಸಕರುಗಳ ಬಾಕಿ ವೇತನ, ಡಿ.ಎ.ಬಾಕಿ ವೇತನ, ಗಳಿಕೆ ರಜೆ ನಗದೀಕರಣ ಮಾಡಿಕೊಳ್ಳಲು ಹಣ ಬಿಡುಗಡೆ ಮಾಡಿ ದಿನಾಂಕ ವಿಸ್ತರಣೆ ಮಾಡಿ ಖಜಾನೆ ಇಲಾಖೆಗೆ ನಿರ್ದೇಶನ ನೀಡ ಬೇಕೆಂದು ವಿನಂತಿಸಿದ್ದರು ಇದನ್ನು ಪರಿಗಣಿಸಿದ ಆರ್ಥಿಕ ಇಲಾಖೆಯು ಇಂದು ಆದೇಶ ಹೊರಡಿಸಿದೆ ಶಿಕ್ಷಕರು ಹಾಗೂ ಇತರ ಸಿಬ್ಬಂದಿಗಳಿಗೆ ಆಗುತ್ತಿದ್ದ ತೊಂದರೆಯನ್ನು ನಿವಾರಿದ ಆರ್ಥಿಕ ಇಲಾಖೆಗೆ ಕ್ರಮಕ್ಕೆ ಸಿಬ್ಬಂದಿಗಳ ಪರವಾಗಿ ಅಭಿನಂದನೆಗಳು ತಿಳಿಸಿದ್ದಾರೆ