ಅಕ್ಷರ ಕ್ರಾಂತಿ ಶಿಕ್ಷಕಿ ಶ್ರೀಮತಿ ಮಹಾದೇವಿ ಬಂಧು

ಅಕ್ಷರ ಕ್ರಾಂತಿ ಶಿಕ್ಷಕಿ ಶ್ರೀಮತಿ ಮಹಾದೇವಿ ಬಂಧು

ಅಕ್ಷರ ಕ್ರಾಂತಿ ಶಿಕ್ಷಕಿ ಶ್ರೀಮತಿ ಮಹಾದೇವಿ ಬಂಧು

ನಮ್ಮ ಭಾರತೀಯ ಪರಂಪರೆಯಲ್ಲಿ ಶಿಕ್ಷಣಕ್ಕೆ ಬಹು ಮಹತ್ವವಿದೆ.ಪ್ರಾಚೀನ ಕಾಲದಲ್ಲಿ ಗುರುಕುಲ ಪದ್ಧತಿ ಇತ್ತು.ಹಾಗೆ ಪ್ರಾಚೀನ ಬೌದ್ಧ ವಿದ್ಯಾ ಕೇಂದ್ರಗಳು ಇದ್ದವು ಅಂತಹ ಹೊತ್ತಿನಲ್ಲಿ ಘಟಿಕಾ ಕೇಂದ್ರ,ಅಗ್ರಹಾ ರಗಳು ಕೆಲವೇ ವರ್ಗದ ಜನರಿಗೆ ಮಾತ್ರ ಮೀಸಲಾಗಿ ತ್ತು ಅಂತಹ ಹೊತ್ತಿನಲ್ಲಿ ಶಿಕ್ಷಣ ಗಗನ ಕುಸುಮವಾಯಿ ತು.ಮುಂದೆ ಬ್ರಿಟಿಷ್ ರು,ನಿಜಾಮರ ಆಡಳಿತ ಹೊತ್ತಿಗೆ ಶಿಕ್ಷಣ ಸಾರ್ವತ್ರಿಕ ವಾದವು.ಇದನ್ನು ಸಂಪ್ರದಾಯ ವಾದಿಗಳು ವಿರೋಧಿಸಿದರು.ಆ ಕಾಲದಲ್ಲಿ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣಕ್ಕೆ ಆ ದ್ಯತೆ ನೀಡಿದ್ದರು.ಮೊದಲ ಭಾರತದ ಮೊದಲ ಶಿಕ್ಷಕರಾ ದರು.

     ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಬಹಳಷ್ಟು ಹಿಂದೆ ಬಿದ್ದರು ತದನಂತರ ಮೆಕಾವಲಿ ಅವರ ಶಿಕ್ಷಣ ಪದ್ಧತಿ ಸಾರ್ವತ್ರಿಕವಾಯಿತು. ಇಂತಹ ಪತಿ- ಪತ್ನಿಯರು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದವರು ಇದ್ದಾರೆ.ಅ ವರಲ್ಲಿ ಕಲಬುರಗಿಯ ಶ್ರೀಮತಿ ಮಹಾದೇವಿ ಮತ್ತು ಡಾ.ಕೆ.ಎಸ್.ಬಂಧು ಸಿದ್ಧೇಶ್ವರ ಒಬ್ಬರು.ಇಬ್ಬರು ಆದ ರ್ಶ ಶಿಕ್ಷಕ ದಂತಿಗಳು.ಮೂಲತಃ ಇಬ್ಬರು ಬೀದರ ಜಿಲ್ಲೆ ಯವರು.ಭಲ್ಲುಂಕಿಯ ಕಾಮಣ್ಣ,ಬಸವಕಲ್ಯಾಣ ತಾಲೂಕಿನ ಮಹಾದೇವಿಯವರು.ಇರ್ವರು ಕಲಬುರಗಿ ಗೆ ಬಂದು ನೆಲೆಸಿದರು

     ಮಹಾದೇವಿ ಅವರು ಬಸವಕಲ್ಯಾಣ ತಾಲೂಕಿನ ಹಂದ್ರಾಳ ಗ್ರಾಮದ ದಲಿತ ನಾವದಗಿ ಕುಟುಂಬದ ಕೃಷಿಕ ಮನೆತನದ ಶಿವರಾಮ ನಾವದಗಿ ಮತ್ತು ಶಿವ ಮ್ಮರ ಮಗಳಾಗಿ ದಿನಾಂಕ:೨೬-೦೭-೧೯೬೭ರಂದು ಜನಿಸಿದರು.ಬಾಲ್ಯದಲ್ಲಿಯೇ ಚೂಟಿಯಾದವರು.ನಾವ ದಗಿಯ ಇವರ ಅಣ್ಣನ ಪ್ರೀತಿಯ ತಂಗಿ ಆದಳು.ಹಂ ದ್ರಾಳದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ೧ನೆಯ ತರಗತಿಯಿಂದ ೪ನೆಯ ತರಗತಿವರೆಗೆ,ರಾಜೇಶ್ವರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೫ರಿಂದ ೭ ನೇ ತರಗತಿವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಕಲಿತು ಅಲ್ಲಿಯ ಸತ್ಯಾಶ್ರಯ ಪದವಿ ಪೂರ್ವ ಕಾಲೇಜಿನಲ್ಲಿ ೮ನೇ ತರಗತಿಯಿಂದ ೧೦ ನೇ ತರಗತಿವ ರೆಗೆ ಕಲಿತು ಮೆಟ್ರಿಕ್ ಪಾಸಾದರು.ಅದೇ ಕಾಲೇಜಿನಲ್ಲಿ ಪಿಯುಸಿಯನ್ನು ೧೯೮೫-೮೭ರಲ್ಲಿ ಪಾಸಾದರು.ನಂತ ರ ಸರಕಾರಿ ಕನ್ಯಾ ಸರಕಾರಿ ಪದವಿ ಪೂರ್ವ ಕಾಲೇಜಿ ನಿಂದ ಇಂಟರ್ ಶಿಫ್ ಶಿಕ್ಷಕರ ತರಬೇತಿಯನ್ನು ೧೯೮ ೭-೮೮ರಲ್ಲಿ ತರಬೇತಿ ಪಡೆದರು.

     ಪದವಿಯನ್ನು ಶ್ರೀಮತಿ ವೀರಮ್ಮ ಗಂಗಶ್ರೀ ಮಹಿ ಳಾ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎ.ಪದವಿ ಪಡೆ ದವರು.ಮಹ್ಮದಿ ಬಿಇಡಿ ಕಾಲೇಜಿನಿಂದ ಬಿಇಡಿ ತರಬೇ ತಿ ಪಡೆದವರು.ಶಿಕ್ಷಣದ ಮಹತ್ವ ಅರಿತು ಬಾಳಿದವರು.

     ‌ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಅತನೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾ ಲೆಯಲ್ಲಿ ವೃತ್ತಿ ಜೀವನಕ್ಕೆ ೧೭-೦೩-೧೯೯೭ರಲ್ಲಿ ಕರ್ತ ವ್ಯಕ್ಕೆ ಹಾಜರಾಗಿ ಅಲ್ಲಿಯೇ ಹನ್ನೆರಡು ವರ್ಷಗಳ ಕಾಲ

ಮಕ್ಕಳ ಭವಿಷ್ಯ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿ ಸಿದರು.೨೦೦೯ರಿಂದ ಸಹ ಶಿಕ್ಷಕರಾಗಿ ಬಡ್ತಿ ಹೊಂದಿ ಇಲ್ಲಿಯವರೆಗೆ ಹದಿನೈದು ವರ್ಷಗಳ ಕಾಲ ಇಂದಿನ ಕಮಲಾಪುರ ತಾ ಲೂಕಿನ ಸರಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇಪ್ಪತ್ತೇಳು ವರ್ಷಗಳ ಬೋಧನನಾನುಭವ ಹೊಂದಿದವರು.ಸದಾ ಕ್ರಿಯಾಶೀ ಲ ವ್ಯಕ್ತಿತ್ವ ಹೊಂದಿದ ಟೀಚರ್ ಎಂದು ಎಲ್ಲರಿಂದ ಜನ ಮೆಚ್ಚುಗೆ ಗಳಿಸಿದರು.

     ಇವರು ಮಹತ್ವದ ಶಿಕ್ಷಕರಾಗಿ, ಸದಾ ಶಾಲೆಯಲ್ಲಿ ಮಗ್ನರಾಗಿ ಕೊಟ್ಟ ಕೆಲಸವನ್ನು ಕಾಯಕವೆಂದು ಭಾವಿ ಸಿದರು.ಸರಕಾರ, ಶಿಕ್ಷಣ ಇಲಾಖೆಯ ಯೋಜನೆಗೆ ತಕ್ಕಂತೆ ಕರ್ತವ್ಯ ನಿಭಾಯಿಸಿದರು.ಇಂದಿಗೂ ಅದೇ ತನ್ಮಯತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಸಾವಿರಾ ರು ವಿದ್ಯಾರ್ಥಿಗಳು ಅವರ ಪ್ರೀತಿಯ ಗುರು-ಶಿಷ್ಯರ ಮಧ್ಯ ಬಾಳಿದವರು.

      ಮಹಾದೇವಿ ಅವರು ಕಾಮಣ್ಣನವರನ್ನು ದಿನಾಂಕ ೦೭-೦೭-೧೯೮೭ರಲ್ಲಿ ಹಂದ್ರಾಳದಲ್ಲಿ ವಿವಾಹವಾಗಿ ದಾಂಪತ್ಯಕ್ಕೆ ಕಾಲಿಟ್ಟರು.ಆಗ ಅವರು ಕಾಮಣ್ಣನವರ ಬಾಳ ದೀಪವನ್ನು ಬೆಳಗಿದವರು.ಸದಾ ಹುಟ್ಟಿದ ಮನೆ ಗೆ; ಗಂಡನ ಮನೆಗೂ ಹುಲ್ಲ ತಾರದೇ ಹೂ ತಂದವರು.ಅವರು ಸದಾ ಮೌನವಾಗಿ ಮನೆ-ಮನ ಬೆಳಗಿದವರು.

ಮದುವೆಯಾದ ಮೇಲೆ ಬಿ.ಎ.ಬಿಇಡಿ ಪದವಿ ಪಡೆದು ತಮ್ಮ ಜೀವನ ಮಕ್ಕಳು ಗಂಡ ಕೆಲಸ ನಿರ್ವಹಿಸಿ, ಓದಿ ದವರು.ಇವರಿಗೆ ಪತಿಯ ಬೆನ್ನ ಹಿಂದಿನ ಬೆಳಕಾಗಿ ಬಂದವರು ಮಹಾದೇವಿಯವರು; ಹಾಗೆ ಪತ್ನಿಯ ಬೆನ್ನ ಹಿಂದಿನ ಕಣ್ಣ ಮುಂದಿನ ಬೆಳಕಾಗಿ ಕಂಗೊಳಿಸಿ ದವರು.ಇವರ ದಾಂಪತ್ಯ ಮಧುರ ಜೇನಿನಂತೆ ಸತಿ ಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂಬ ವಚನದಂತೆ ಬದುಕಿದವರು.

   ಇವರ ದಾಂಪತ್ಯ ಜೀವನದಲ್ಲಿ ಸಿದ್ಧಾರ್ಥ ಬಿ.ಇ.ಎಂಟೆಕ್.,ಡಾ.ಕರುಣಾರತ್ನ ಬಿಎಚ್ಎಂಎಸ್., ಎಂಡಿ. ಸುಮೇಧರತ್ನ ಬಿ.ಇ.ಸಿವಿಲ್ ಹೊಂದಿದವರು.

ವಾತ್ಸಲ್ಯ ಸೊಸೆ,ಮೊಮ್ಮಗ ಶಾಕ್ಯರತ್ನ ತುಂಬು ಸಂಸಾ ರ,ಮಕ್ಕಳು ಸೊಸೆ,ಮೊಮ್ಮಗ,ಪತಿಯ ಜೊತೆಗೆ ಅನ್ಯೋನ್ಯ ಸಂಬಂಧ ಹೊಂದಿ.ಬಂಧು ಬಳಗವನ್ನು, ಮನೆಗೆ ಬರುವ ಅತಿಥಿಗಳನ್ನು ಸದಾ ಸ್ವಾಗತಿಸಿ, ಅನ್ನಪೂರ್ಣೆಯಾಗಿದ್ದಾರೆ. ಅವರ ಎಲ್ಲರ ಮನ ಮನೆಯ ಮಹಾದೇವಿ ಆಗಿದ್ದಾರೆ.

      ಇವರು ಸಾಮಾಜಿಕ ಕ್ರಾಂತಿ ಪುರುಷರ ಜೀವನ ಚರಿತ್ರೆ ಓದಿದವರು.ಅವನ್ನು ಮಕ್ಕಳಿಗೆ ಪಾಠ ಮಾಡಿ ಅವರಲ್ಲಿ ಜೀವನ ಮೌಲ್ಯವನ್ನು ಸಾಬೀತುಪಡಿಸಿದ್ದಾರೆ.

ನಡೆ,ನುಡಿ,ಬೋಧನೆ,ಒಂದೇ ಆಗಿದೆ.ಅಲ್ಲದೇ ಅವರು ದಿನಪತ್ರಿಕೆ, ಸಾಮಾನ್ಯಜ್ಞಾನ,ಮೂಡನಂಬಿಕೆ,ಅಂಧ ಶ್ರ ದ್ಧೆ ಇವನ್ನು ತೊಲಗಿಸಲು ಮುಕ್ತವಾದ ಬುದ್ಧ,ಬಸವ, ಅಂಬೇಡ್ಕರ್ ಹಾಗೂ ತತ್ತ್ವ ಜ್ಞಾನಿಗಳ,ಚಾರಿತ್ರಿಕ ಚಿಂತ ಕರ ವಿಛಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿ ಕೊಂಡಿದ್ದಾರೆ.

    ಇವತ ಸಾಧನೆಯನ್ನು ಪರಿಗಣಿಸಿ ಅಪ್ಪ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಅಕ್ಷರದ ಅವ್ವ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಲಭಿಸಿವೆ.ತಾಲೂಕಾ,ಜಿಲ್ಲಾ,

ವಿಭಾಗ ಜೊತೆಗೆ ಹಲವು ಪ್ರಶಸ್ತಿ, ಮಠಾಧೀಶರು ಇವ ರಿಗೆ ಸನ್ಮಾನಿಸಿದ್ದಾರೆ.ಇವರ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇವೆ ಪರಿಗಣಿಸಿ ತಾಲೂಕಾ ಮಟ್ಟದ ಉತಗತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾ ಗಿದ್ದಾರೆ.ವಿ.ಕೆ.ಸಲಗರ ಸರಕಾರಿ ಪ್ರೌಢ ಶಾಲೆ ಯಲ್ಲಿ ಅಭಿನಂದಿಸುತ್ತಿರುವುದು ಸ್ವಾಗತಾರ್ಹ ಸಂಗತಿ.

ಹಿರಿಯ ಸಾಹಿತಿ,ನಿವೃತ್ತ ಉಪನ್ಯಾಸಕರಾದ ಡಾ.ಕೆ.ಎಸ್.ಬಂಧು ಅವರ ಬೆಳಕಾದಂತೆ,ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕಾದ ಅಕ್ಷರ ಕ್ರಾಂತಿಯ ಶೀಮತಿ ಮಹಾದೇವಿ ಡಾ.ಕೆ.ಎಸ್.ಬಂಧು ಅವರ ಸೇವೆ ಅನನ್ಯ.

ಲೇಖಕರು: ಡಾ.ಗವಿಸಿದ್ಧಪ್ಪ ಎಚ್.ಪಾಟೀಲ, ಸಾಹಿತಿ

ಕಲಬುರಗಿ