ಮಹಿಬೂಬ್ ಸುಭಾನಿ ದರ್ಗಾದ ಉರುಸ್ ಏ ಶರೀಫ

ಮಹಿಬೂಬ್ ಸುಭಾನಿ ದರ್ಗಾದ ಉರುಸ್ ಏ ಶರೀಫ
ಶಹಾಬಾದ : - ನಗರದ ಮಡ್ಡಿ ನಂಬರ್ 2 ರ ಮೆಹಬೂಬ್ ಸುಭಾನಿ ದರ್ಗಾದ 81ನೇ ಹಾಗೂ ಸೈಯದ ಶಾ ಗೌಸ್ ಮೈನೋದ್ದೀನ ಖಾದ್ರಿ ಯವರ 53ನೇ ಉರುಸ್ ಇ ಶರೀಫ್ ಜರುಗುವದು ಎಂದು ಸಜ್ಜಾದೆ ನಷೀನ ಅಲ್ ಹಜ್ ಸೈಯದ ಆರೀಪ್ ಶಾ ಖಾದ್ರಿ ಜುನೇದಿ ಸಾಹೇಬ್ ತಿಳಿಸಿದ್ದಾರೆ. ಅವರು ಮಾದ್ಯಮದ ಜೊತೆ ಮಾತನಾಡಿ,
ಅ.3 ರಂದು ಸಂದಲ್ (ಗಂಧ) ದ ಮೆರವಣಿಗೆ ನಡೆಯುವದು, ಅ.4 ರಂದು ಚಿರಾಗ್(ದೀಪ)ಅರ್ಪಿಸಲಾಗುವದು ಮತ್ತು ಅ.5 ರಂದು ಜಿಯಾರತ ನಡೆಯಲಿದೆ ಎಂದಿದ್ದಾರೆ.
ಉರುಸ್ ನ ಕಾರ್ಯಕ್ರಮಕ್ಕೆ ಹಜರತ್ ಅಲ್ ಹಜ್ ಶೇಖ ಶಾ ಮಹ್ಮದ ತಾಜೋದ್ದಿನ ಜುನೈದಿ, ಹಜರತ್ ಡಾ.ಆಲ್ ಹಜ್ ಶೇಖ ಶಾ ಮಹ್ಮದ ಹಫ್ಜಾಲುದ್ದಿನ ಜುನೈದಿ, ಹಜರತ್ ಅಲ್ ಹಜ್ ಸೈಯದ್ ಮಹ್ಮದ ಗೇಸ್ದುರಾಜ ಹುಸೇನಿ, ಹಜರತ್ ಡಾ.ಅಲ್ ಹಜ್ ಸೈಯದ್ ಅಹ್ಮದ ಹುಸೇನಿ ಖಾದ್ರಿ ಯವರು ಭಾಗವಹಿಸಲಿದ್ದಾರೆ ಎಂದು ದರ್ಗಾದ ಆರೀಫ ಸಾಹೇಬ ರವರು ತಿಳಿಸಿದ್ದಾರೆ.
ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ