ನವರಾತ್ರಿ ಉತ್ಸವ ನಿಮಿತ್ತ 350 ಕ್ಕೂ ಮುತ್ತೈದೆಯರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮ

ನವರಾತ್ರಿ ಉತ್ಸವ ನಿಮಿತ್ತ 350 ಕ್ಕೂ ಮುತ್ತೈದೆಯರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮ

ನವರಾತ್ರಿ ಉತ್ಸವ ನಿಮಿತ್ತ 350 ಕ್ಕೂ ಮುತ್ತೈದೆಯರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮ

ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಸ್ವಸ್ತಿಕ ನಗರದ ಶ್ರೀ ಮಹಾಲಕ್ಷ್ಮಿ ದೇವಾಲಯದ ಅವರಣದಲ್ಲಿ ಸ್ವಸ್ತಿಕನಗರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಸೆ.22 ರಿಂದ ವೈಭವದಿಂದ ನವರಾತ್ರಿ ಉತ್ಸವ ವಿಶಿಷ್ಟವಾಗಿ ನಡೆಸಲಾಗುತ್ತಿದೆ. 

ಮಾತೋಶ್ರೀ ಸಜ್ಜಲಗುಡ್ಡದ ಶರಣಮ್ಮ ತಾಯಿಯ ಜೀವನಗಾಥೆಯನ್ನು ಅಷ್ಟಗಿಯ ಪೂಜ್ಯರಾದ ಶ್ರೀ ನಿಜಲಿಂಗ ಶಿವಾಚಾರ್ಯರು ಪ್ರವಚನ ರೂಪದಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ಇವರಿಗೆ ಜೊತೆಯಾಗಿ ಸಂಗೀತ ಸೇವೆಯನ್ನು ಶ್ರೀ ಕಲ್ಲಿನಾಥ ಹಿರೇಮಠ ಮತ್ತು ರವಿ ಸ್ವಾಮಿ ಗೋಟೂರ ಅವರು ನೀಡುತ್ತಿದ್ದಾರೆ. 

ಈ ಕಲ್ಯಾಣದ ನಾಡು, ಅನೇಕ ಜನ ಶರಣರು, ಸಂತರು, ಮಹಾಂತರು, ಶಿವಯೋಗಿಗಳು, ಸೂಫಿ ಸಾಧಕರಿಗೆ, ನೆಲೆಯಾಗಿ ನಿಂತಿದೆ.ಅAತಹಾ ಮೇರು ವ್ಯಕ್ತಿತ್ವದ ಶರಣರಾದ ಅಣ್ಣಾ ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಕ್ರೀಯೆ, ಅಲ್ಲಮನ ವೈರಾಗ್ಯ, ಸಿದ್ಧರಾಮನ ಶಿವಯೋಗದೃಷ್ಠಿ , ಮತ್ತು ಅಕ್ಕಮಹಾದೇವಿಯ ಪ್ರತಿರೂಪದಂತೆ, ತೋರುವ ಸಜ್ಜಲಗುಡ್ಡದ ಶಿವಶರಣೆ ಶ್ರೀಶರಣಮ್ಮನವರು, 18-19ನೇ ಶತಮಾನದಲ್ಲಿ ಬೆಳಗಿದ ಬಸವಜ್ಯೋತಿಯೆಂದೇ ಹೇಳಬಹುದು.

ಈ ಕಾರ್ಯಕ್ರಮದ ಅಂಗವಾಗಿ ನಗರದ 350 ಕ್ಕೂ ಮುತ್ತೈದೆಯರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಸಮಾರಂಭದಲ್ಲಿ ಶಾಂತಾಬಾಯಿ ಹಾಲಮಠ, ಕಮಲಾ ಪಾಟೀಲ್ ಹೇರೂರ್, ಮಧುಮತಿ ರಮೇಶ ಮರಗೋಳ, ನೀಲಂಬಿಕಾ ಮಂಗಶೆಟ್ಟಿ, ಸೀಮಾ ಶಶಿಶೇಖರರೆಡ್ಡಿ, ಕಮಲಾ ಜವಳಿ, ಅನುರಾಧ ನರಸಿಂಗರಾವ, ಸುನಂದಾ ಸ್ವಾಮಿ, ಜಗದೇವಿ ಅವಂಟಿ, ಜಗದೇವಿ ಚಿಟ್ಟಾ, ರೇಣುಕಾ ಜೆ ಪಾಟೀಲ್, ರೇಣುಕಾ ವಿ ಪಾಟೀಲ್, ಶಶಿಕಲಾ ಶಿರಗೊಂಡ, ಮಹಾದೇವಿ ದುಕಾನದಾರ್, ಮಹೇಶ್ವರಿ ಕೋಕಟ್, ಶೈಲಜಾ ಗುರುಮಿಟ್ಕಲ್, ಗುರುಸಿದ್ದಮ್ಮ ಪಾಟೀಲ್, ಜರಿತ ದುದನಿ, ಪದ್ಮಾ ಯಾದವ್, ಪ್ರೇಮಿಲಾ ಹಲ್ಚೇರಿ, ವಿಜಯಲಕ್ಷ್ಮೀ ಕೊತ್ತಂಬರಿ, ಜಯಶ್ರೀ ಹಿರೇಗೌಡರ, ರಾಜೇಶ್ವರಿ ಡೆಂಗಿ, ಶೋಭಾ ಬಿರಾದಾರ, ಗಾಯತ್ರೀ ಚಿಟ್ಟಾ, ಗಂಗಮ್ಮ ರಾಯಕೋಡಿ, ಶಾಂತ ಪಾಟೀಲ್ ಯಲ್ಹೇರಿ, ಸುಧಾ ಪತ್ತಿ, ಉಷಾ ಉಪ್ಪಿನ್, ಶಿಲ್ಪರಾಣಿ ಪಾಟೀಲ್, ಅರುಣಾ ಭಾವಿ, ನಂದಿನಿ ಹುಂಡೇಕಾರ್,ಜಿನ್ ವಾಣಿ ಪಂಡಿತ್ ಹಾಗೂ ಸ್ವಸ್ತಿಕ ನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಬಿ.ಕೆ.ಸ್ವಾಮಿ, ಜಿಲ್ಲಾ ಪಂಚಾಯತ್ ಮಾಜಿ ಅದ್ಯಕ್ಷರಾದ ಶ್ರೀ ರಮೇಶ ಮರಗೋಳ, ಚಂದ್ರಶೇಖರ ನಾಗೂರ, ರಾಜಶೇಖರ ಕೋಕಟ್, ಶಾಂತಪ್ಪ, ದೇವಿಂದ್ರಪ್ಪ ಮಾಳಾ, ಬಸವರಾಜ, ಕಲ್ಯಾಣರಾವ, ಶಿವಶರಣಪ್ಪ, ವೀರಣ್ಣ ಇದ್ದರು. ಡಾ.ಶಶಿಶೇಖರ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.