ಕಲ್ಯಾಣ ಕರ್ನಾಟಕ ಶಾಶ್ವತ ನೀರಾವರಿಗಾಗಿ ಹೋರಾಟ : ಭೀಮಶೆಟ್ಟಿ

ಕಲ್ಯಾಣ ಕರ್ನಾಟಕ ಶಾಶ್ವತ ನೀರಾವರಿಗಾಗಿ ಹೋರಾಟ : ಭೀಮಶೆಟ್ಟಿ
.ಕಲಬುರಗಿ: ಕಲ್ಯಾಣ ಕರ್ನಾಟಕ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಶ್ರಯದಲ್ಲಿ ರೈತರ ಹಿತದೃಷ್ಠಿಯಿಂದ ಮತ್ತು ನೀರಾವರಿಯ ಮಹತ್ವವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಜನರಿಗೆ ಸಮರ್ಪಕ ಕಾಲುವೆ ವ್ಯವಸ್ಥೆ, ಶಾಶ್ವತ ನೀರಾವರಿ ಯೋಜನೆಗಳು ಮತ್ತು ರೈತರ ಪಾಲಿಗೆ ನಿರಂತರ ನೀರು ಪೂರೈಕೆಯ ಅಗತ್ಯತೆಯ ಬಗ್ಗೆ ಮಾಹಿತಿ ನೀಡುವುದು.
ಭೀಮಾ ಏತ ನೀರಾವರಿ, ಅಮರ್ಜಾ, ಚುಳೂಕಿ ನಾಲ, ಕಾರಂಜ, ಚಂದ್ರಂಪಳ್ಳಿ, ಕೆಳದಂಡೆ ಮುಲ್ಲಾಮಾರಿ, ಮೇಲ್ದಂಡೆ ಮುಲ್ಲಾಮಾರಿ, ಗಂಡೂರಿನಾಲ, ಬೆಣ್ಣೆ ತೊರೆ ಮತ್ತು ಹತ್ತಿಕುಣಿ ಅಣೆಕಟ್ಟುಗಳಂತಹ ಪ್ರಮುಖ ನೀರಾವರಿ ಯೋಜನೆಗಳ ಸಂಪೂರ್ಣ ಪ್ರಯೋಜನ ರೈತರಿಗೆ ತಲುಪಿಸಬೇಕು ಎಂಬುದು ಸಮಿತಿಯ ಪ್ರಮುಖ ಉದ್ದೇಶವಾಗಿದೆ.
ಸಮಿತಿಯ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಅವರು “ಹಸಿವು ನೀಗಿಸುವ ಭೂಮಿಯು ಬೀಳು ಬಿಟ್ಟು ಫಲವೇನು? ಮಧ್ಯಮ ಮತ್ತು ಸಣ್ಣ ಕೆರೆಗಳಲ್ಲಿ ನೀರು ಇದ್ದರೂ ರೈತರಿಗೆ ಅದರಿಂದ ಲಾಭವೇನು? ಅನ್ನದಾತನಿಗೆ ಜೀವಜಲ ಸಿಗದಿದ್ದರೆ ನೀರಾವರಿ ಯೋಜನೆಗಳ ಅಸ್ತಿತ್ವದಿಂದ ಪ್ರಯೋಜನವೇನು?” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
“ಹಸಿದವರಿಗೆ ಅನ್ನ ನೀಡಿ, ದಣಿದವರಿಗೆ ನೀರು ಕೊಟ್ಟರೆ ಮಾತ್ರವೇ ನಾಡು ಹಸಿರಿನಿಂದ ಕಂಗೊಳಿಸುವುದು ಸಾಧ್ಯ. ರೈತ ದೇಶದ ಅಸ್ತಿ; ಅವನ ಏಳಿಗೆಯೇ ದೇಶದ ಸಂಪತ್ತು” ಎಂದು ಭೀಮಶೆಟ್ಟಿ ಮುಕ್ಕಾ ಹೇಳಿದರು.
ಜಾಗೃತಿ ಕಾರ್ಯಕ್ರಮದಲ್ಲಿ ರೈತರು, ನೀರಾವರಿ ತಜ್ಞರು, ಗ್ರಾಮಸ್ಥರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದ ಮೂಲಕ ನೀರಿನ ಸಮರ್ಪಕ ಬಳಕೆ, ಕಾಲುವೆಗಳ ನಿರ್ವಹಣೆ ಮತ್ತು ನೀರಾವರಿ ಯೋಜನೆಗಳ ಸದುಪಯೋಗಗಳ ಬಗ್ಗೆ ತಲೆದೋರಿಸುವುದು ಸಮಿತಿಯ ಪ್ರಮುಖ ಉದ್ದೇಶವಾಗಿದೆ.
(ಭೀಮಶೆಟ್ಟಿ ಮುಕ್ಕಾ - 9740487699)
ವರದಿ -ಶರಣಗೌಡ ಪಾಟೀಲ ಪಾಳಾ