ನಾನು ಸುಭಾಷ್

ನಾನು ಸುಭಾಷ್
ಅಮರ ಸೇನಾನಿ, ದೇಶಪ್ರೇಮಿ ಸುಭಾಷ್ ಚಂದ್ರ ಬೋಸ್ ಅವರನ್ನು ಕುರಿತಾದ ಇಂತಹ ಬೃಹತ್ ಗ್ರಂಥ ನನ್ನಿಂದ ಕನ್ನಡಕ್ಕೆ ಅನುವಾದಗೊಳ್ಳಲಿದೆ ಎಂದು ನಾನು ಊಹಿಸಿಯೂ ಇರಲಿಲ್ಲ. ಬಂಗಾಳಿ ಕಲಿತಿದ್ದು ಒಂದು ಕ್ಷಣ ಸಾರ್ಥಕ ಎನ್ನಿಸಿದ್ದರಲ್ಲಿ ಬಹುಶಃ ಆಶ್ಚರ್ಯವೇನಿಲ್ಲ.
ಬಹುಶಃ ಇದು ಸುಭಾಷ್ ಚಂದ್ರ ಬೋಸ್ ಬಗ್ಗೆ ಕನ್ನಡದಲ್ಲಿ ಪ್ರಕಟವಾಗಿರುವ ಇದುವರೆಗಿನ ಅತಿ ದೊಡ್ಡ ಗ್ರಂಥ ಇರಬಹುದು. ದೊಡ್ಡ ಆಕಾರ(1/4 ಕ್ರೌನ್)ದ ಬರೋಬ್ಬರಿ 1,370 ಪುಟಗಳನ್ನು ಇದು ಒಳಗೊಂಡಿದೆ.
ಖ್ಯಾತ ಬಂಗಾಳಿ ಲೇಖಕರಾದ ಶ್ರೀಯುತ ಶೈಲೇಶ್ ದೇ ಅವರು ವಿವಿಧ ಆಕರ ಗ್ರಂಥಗಳು ಹಾಗೂ ಸುಭಾಷ್ ಅವರನ್ನು ವೈಯಕ್ತಿಕವಾಗಿ ಬಲ್ಲವರಿಂದ ಅನೇಕ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ ಮೂರು ಬೃಹತ್ ಸಂಪುಟಗಳಲ್ಲಿ ಪ್ರಕಟಿಸಿದರು. ಆ ಮೂರೂ ಸಂಪುಟಗಳು ಕನ್ನಡದಲ್ಲಿ ಒಂದೇ ಸಂಪುಟವಾಗಿ ಇದೀಗ ಪ್ರಕಟಗೊಂಡಿದೆ. ಸುಭಾಷ್ ಕುರಿತು ವಿಸ್ಮೃತಿಗೆ ಒಳಗಾದ ಸತ್ಯವನ್ನು ಮರುಸ್ಥಾಪಿಸುವ ಸವಾಲಿನ ಕೆಲಸವನ್ನು ದೇ ಅವರು ಬಹಳ ಶ್ರದ್ಧೆಯಿಂದ ಮಾಡಿದ್ದಾರೆ.
ಇದನ್ನು ಕನ್ನಡಕ್ಕೆ ತರುವ ಸವಾಲಿನ ಕಾರ್ಯವನ್ನು ನನಗೆ ವಹಿಸಿದವರು ಪ್ರತಿಷ್ಠಿತ ಕುವೆಂಪು ಭಾಷಾ ಭಾರತಿಯ ಅಂದಿನ ಅಧ್ಯಕ್ಷರಾಗಿದ್ದ ಡಾ. ಗಿರೀಶ್ ಭಟ್ ಅಜಕ್ಕಳರವರು. ಈ ಕೃತಿ ಕನ್ನಡಕ್ಕೆ ಬರಲೇಬೇಕು ಎಂದು ಅವಿರತವಾಗಿ ಪ್ರಯತ್ನಿಸಿದವರು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿ ಶ್ರೀಯುತ ಶಾಂತಕುಮಾರ್ ದೇಸಾಯಿಯವರು. ಈಗ ಇದನ್ನು ಆಸಕ್ತಿಯಿಂದ ಕೈಗೆತ್ತಿಕೊಂಡು ಪ್ರಕಟಿಸಿದವರು ಪ್ರಾಧಿಕಾರದ ಇಂದಿನ ಅಧ್ಯಕ್ಷರಾದ ಡಾ. ಚನ್ನಪ್ಪ ಕಟ್ಟಿ, ರಿಜಿಸ್ಟ್ರಾರ್ ಶ್ರೀ ಈಶ್ವರ ಮಿರ್ಜಿಯವರು ಮತ್ತು ಪ್ರಾಧಿಕಾರದ ಗೌರವಾನ್ವಿತ ಸದಸ್ಯರು. ಎಲ್ಲರಿಗೂ ನನ್ನ ಧನ್ಯವಾದಗಳು.
ಈ ಕಾರ್ಯಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕಾರ ನೀಡಿದ ಪ್ರತಿಯೊಬ್ಬರನ್ನೂ ಈ ಸಂದರ್ಭದಲ್ಲಿ ನೆನೆಯುತ್ತೇನೆ.
ನನ್ನನ್ನು ಅನುವಾದ ಕ್ಷೇತ್ರಕ್ಕೆ ಪರಿಚಯಿಸಿದ ಹಿರಿಯರಾದ ಪ್ರೊ. ಮರುಳಸಿದ್ದಪ್ಪ, ಪ್ರೊ. ಕೆವಿ ನಾರಾಯಣ ಮುಂತಾದವರಿಗೆ ಶರಣು.ಓದುಗರಾದ ನಿಮ್ಮ ಬೆಂಬಲಕ್ಕೆ ಸದಾ ಆಭಾರಿಯಾಗಿದ್ದೇನೆ.
- ಡಾ. ನಾಗ ಎಚ್. ಹುಬ್ಳಿ
(ಒಂದು ವೇಳೆ ಖರೀದಿಸಬಯಸಿದರೆ ನನ್ನನ್ನು 80022 03153 ಅಥವಾ ಪ್ರಕಾಶ್, ಸುಪ್ರ ಪುಸ್ತಕ,70914 88490 ಗೆ ವಾಟ್ಸಪ್ ಮಾಡಲು ಕೋರುತ್ತೇನೆ)