ಸ್ವದೇಶಿ ವಸ್ತುಗಳಿಗೆ ಒತ್ತು ಕೊಡಿ - ಪ್ರಧಾನಿ ನರೇಂದ್ರ ಮೋದಿ

ಸ್ವದೇಶಿ ವಸ್ತುಗಳಿಗೆ ಒತ್ತು ಕೊಡಿ - ಪ್ರಧಾನಿ ನರೇಂದ್ರ ಮೋದಿ
ಶಹಪುರ : ಈ ಬಾರಿಯ ದಸರಾ ಹಾಗೂ ದೀಪಾವಳಿ ಹಬ್ಬಗಳನ್ನು ವಿಶೇಷವಾಗಿ ಆಚರಿಸುವುದರ ಜೊತೆಗೆ ಸ್ವದೇಶಿ ವಸ್ತುಗಳು ಉಪಯೋಗಿಸುಬೇಕು,ಅಂದಾಗ ಮಾತ್ರ ಭಾರತ ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಇದಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.
ತಾಲೂಕಿನ ಸಗರ ಗ್ರಾಮದ ಶ್ರೀ ಕರಿಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಆಯೋಜಿಸಿದ
126 ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ,ಭಾರತದ ಇಬ್ಬರು ಮಹಿಳೆಯರು ಸಮುದ್ರದಲ್ಲಿ ಪ್ರಯಾಣ ಮಾಡುವುದರ ಜೊತೆಗೆ 17 ದೇಶಗಳನ್ನು ಸುತ್ತಿದ್ದಾರೆ.ಅವರ
ಧೈರ್ಯ,ಸಾಹಸ,ನಿಜಕ್ಕೂ ಮೆಚ್ಚುವಂತದ್ದು,ಈ ರೀತಿಯಾಗಿ ಹೆಣ್ಣು ಮಕ್ಕಳು ಪ್ರಬಲಶಾಲಿಗಳಾಗಿ ಮುಂದೆ ಬರಬೇಕು ಎಂದು ಆಶಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕುಡಚಿಯ ಮಾಜಿ ಶಾಸಕರು ಹಾಗೂ ಮನ್ ಕೀ ಬಾತ್ ಕಾರ್ಯಕ್ರಮದ ರಾಜ್ಯ ಉಸ್ತುವಾರಿಗಳಾದ ಪಿ.ರಾಜೀವ್ ಮಾತನಾಡಿ ಪ್ರತಿ ಸಣ್ಣ ವಿಷಯಗಳು ಜಾಗತಿಕ ಮಟ್ಟದಲ್ಲಿ ವಿಸ್ತಾರ ಗೊಳಿಸುವ ಉದ್ದೇಶ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೆ,ಆದ್ದರಿಂದ ಇಂತಹ ಕಾರ್ಯಕ್ರಮಗಳು ಆಯೋಜಿಸುವ ಆಲೋಚನೆ ಅವರಿಗಿದೆ ಎಂದು ನುಡಿದರು.
ಸಂಕಷ್ಟಗಳಿಗೆ ಸ್ಪಂದಿಸದ ಸಚಿವ ದರ್ಶನಾಪುರ ಅವರು ಮಳೆಯಿಂದ ಹಾನಿಗೊಳಿಗಾದ ರೈತರ ಜಮೀನುಗಳಿಗೆ,ಭೇಟಿ ನೀಡದೆ,ಸಿಟಿ ರೌಂಡ್ ಹಾಕುತ್ತಾ ತಾವೇ ಮಾಡುವ ಕೆಲಸಗಳಿಗೆ ತಾವೇ ಭೇಟಿ ನೀಡುತ್ತಿದ್ದಾರೆ ಎಂದು ಕಠೋರವಾಗಿ ಟೀಕಿಸಿದರು.ಇದೇ ಸಂದರ್ಭದಲ್ಲಿ ಮಳೆಯಿಂದ ಹಾನಿಗೊಳಗಾಗಿ ಮನೆಯನ್ನು ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿಗಳು,ಪ್ರತಿ ಎಕರೆಗೆ 30,000 ಸಾವಿರ ರೂಪಾಯಿ ಬೆಳೆ ಪರಿಹಾರ ನೀಡಬೇಕು ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಬಿಜೆಪಿಯ ಯುವ ಮುಖಂಡ ಅಮೀನರೆಡ್ಡಿ ಪಾಟೀಲ ಯಾಳಗಿ ಮಾತನಾಡಿ,ಬಿಜೆಪಿ ಯಾವಾಗಲೂ ರೈತರ ಪರವಾಗಿದೆ ರೈತರ ಕಷ್ಟಗಳಿಗೆ ಸ್ಪಂದಿಸದೆ ಹೋದರೆ,ಮುಂದಿನ ದಿನಗಳಲ್ಲಿ ಅದರ ನೋವು ಅನುಭವಿಸಬೇಕಾಗುತ್ತದೆ ಎಂದು ತೀವ್ರವಾಗಿ ಹೇಳಿದರು.ಈ ಸಂಧರ್ಭದಲ್ಲಿ ಸುಮಾರು 10ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಗೌರವಿಸಲಾಯಿತು,
ಒಕ್ಕಲಿಗೇರಿ ಹಿರೇಮಠದ ಪರಮಪೂಜ್ಯ ಮರುಳಮಾಂತ ಶಿವಾಚಾರ್ಯರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು,ಈ ಸಮಾರಂಭದ ವೇದಿಕೆ ಮೇಲೆ ಬಿಜೆಪಿಯ ಮುಖಂಡರಾದ ಡಾ. ಚಂದ್ರಶೇಖರ ಸುಬೇದಾರ,ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ,ತಿರುಪತಿ ಹತ್ತಿಕಟಗಿ,ತಿರುಪತಿ ಸೇರಿ,ರಾಜಶೇಖರ್ ನಗನೂರ, ಲಲಿತಾ ಅನಪುರ,ಶಿವರಾಜ್ ದೇಶಮುಖ,ಭೀಮರಾಯ ಸೇರಿ ದೇವೇಂದ್ರನಾಥ್ ನಾದ, ರಾಚನಗೌಡ ಮುದ್ನಾಳ ಸೇರಿದಂತೆ ಬಿಜೆಪಿ ಪಕ್ಷದ ನೂರಾರು ಕಾರ್ಯಕರ್ತರು ಹಾಜರಿದ್ದರು.