ಶೈಕ್ಷಣಿಕ ಮೌಲ್ಯದಿಂದ ಸಾಹಿತ್ಯದಲ್ಲಿ ಮಾನವೀಯತೆ- ಡಾ.ಜಯದೇವಿ ಗಾಯಕವಾಡ

ಶೈಕ್ಷಣಿಕ ಮೌಲ್ಯದಿಂದ ಸಾಹಿತ್ಯದಲ್ಲಿ ಮಾನವೀಯತೆ- ಡಾ.ಜಯದೇವಿ ಗಾಯಕವಾಡ

ಚಕೋರ-೫

ಶೈಕ್ಷಣಿಕ ಮೌಲ್ಯದಿಂದ ಸಾಹಿತ್ಯದಲ್ಲಿ ಮಾನವೀಯತೆ- ಡಾ.ಜಯದೇವಿ ಗಾಯಕವಾಡ

ಕಲಬುರಗಿ: ಕನ್ನಡ ಸಾಹಿತ್ಯ ಬಹುಮುಖಿ ನೆಲೆಯಿಂದ ಕೂಡಿದೆ.ಸಾಹಿತ್ಯದಲ್ಲಿ ಪಂಪನಿಂದ ಶರಣರು,ದಾಸರು,

ಮತ್ತು ಆಧುನಿಕ ಸಾಹಿತ್ಯದಲ್ಲಿ ಲೇಖಕರು ಶೈಕ್ಷಣಿಕ ಮೌಲ್ಯ ದಿಂದಾಗಿ ಮಾನವೀಯತೆ ಬಿತ್ತಿದ್ದಾರೆ ಇಂದಿಗೂ ಜೀವಪರ

ಸಾಹಿತ್ಯದ ಮುಖವಾಣಿ ಶೈಕ್ಷಣಿಕ ಮೌಲ್ಯಗಳಾಗಿವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಅಭಿಪ್ರಾಯ ಪಟ್ಟರು

      ಮಾನ್ಯವರ ದಾದಾಸಾಹೇಬ್ ಕಾನ್ಸಿರಾಮ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಚಕೋರ ಸಾಹಿತ್ಯ ವೇದಿಕೆ ಏರ್ಪಡಿಸಿದ ಕನ್ನಡ ಸಾಹಿತ್ಯದಲ್ಲಿ ಶೈಕ್ಷಣಿಕ ಮೌಲ್ಯಗಳು ಎಂಬ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿ ಸಾಹಿತ್ಯ ಸಮಾಜದ ಪ್ರತಿಬಿಂಬ ಹಾಗೆಯೇ ಶೈಕ್ಷಣಿಕ ವಿಚಾರಗಳಿಂದ ಸಂಸ್ಕೃತಿ, ಮಾನಸಿಕ, ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆಂದರು.

         ಮುಖ್ಯ ಅತಿಥಿ ಕನ್ನಡ ಉಪನ್ಯಾಸಕ ಡಾ.ಸಿದ್ಧಪ್ಪ ಹೊಸಮನಿ ಮಾತನಾಡಿ ಭಾರತೀಯ ಪರಂಪರೆಯಲ್ಲಿ ಮೊದಲಿಗೆ ಸಮಾನ ಶಿಕ್ಷಣ ನಮ್ಮಲ್ಲಿರಲಿಲ್ಲ.ಬ್ರಿಟಿಷರು ಬಂದ ಮೇಲೆ ಸ್ವಾತಂತ್ರ್ಯ ನಂತರ ಸಮಾನ ಶಿಕ್ಷಣ ಹೊಂದಿ ರುವುದರಿಂದ ಲೇಖಕರು ಸಾಹಿತ್ಯ ಮುಖಿಯಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.

          ಅಧ್ಯಕ್ಷತೆ ವಹಿಸಿದ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಟಿ.ಕಾಂಬಳೆಯವರು ನಮ್ಮ ಜೀವನದ ಭದ್ರಬುನಾದಿ ಶಿಕ್ಷಣ ಅಂಬೇಡ್ಕರ್ ಅವರು ಶಿಕ್ಷಣದ ಅಡಿ ಪಾಯದಿಂದಲೇ ಏನೆಲ್ಲಾ ಸಾಧಿಸಬಹುದೆಂದು ಹೇಳಿ ಸಾಹಿತ್ಯಕಾರರು ಶೈಕ್ಷಣಿಕ ಮೌಲ್ಯಗಳಿಗೆ ಬೆಲೆ ನೀಡಿದ್ದಾರೆಂದರು.

    ‌‌ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಚಂದ್ರಕಲಾ ಬಿದರಿಯವರು ಅಕಾಡೆಮಿಯ ಉದ್ದೇಶ ವಿದ್ಯಾರ್ಥಿಗಳಿಗೆ ಮತ್ತು ಯುವ ಜನತೆಗೆ ಸಂದೇಶ ನೀಡುವ ಕಾರ್ಯಕ್ರಮ ಲಕ್ಕಣ್ಣ ದಂಡೇಶನ ಕೃತಿಯ ಶೈಕ್ಷಣಿಕ ವಿಚಾರ ಪ್ರಸ್ತುತ ಎಂದರು.ಅಕಾಡೆಮಿ ಹಲವು ಯೋಜನೆ ಹಾಕಿದೆ ಅವು ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದೆಂದರು. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನವರಂಗ ಮತ್ತಿತರರು ಇದ್ದರು

 ಸೌಭಾಗ್ಯಶ್ರೀ ಪ್ರಾರ್ಥನೆ ,ಚಕೋರ ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು. ಡಾ.ರಾಜಕು ಮಾರ ಮಾಳಗೆ ನಿರೂಪಿಸಿದರು.ಕನ್ಮಡ ಕರಿಯರ್ ಸಂಚಾಲಕ ಡಾಕಪ್ಪ ಮೋತಿಲಾಲ ವಂದಿಸಿದರು.