ಕಾಂಗ್ರೇಸ್ ಪಕ್ಷದಿಂದ ಅನಿಲಕುಮಾರ್ ಜಮಾದಾರ್ ಹಲಚೇರಾ ಅವರಿಗೆ ಅನ್ಯಾಯ

ಕಾಂಗ್ರೇಸ್ ಪಕ್ಷದಿಂದ ಅನಿಲಕುಮಾರ್ ಜಮಾದಾರ್ ಹಲಚೇರಾ ಅವರಿಗೆ ಅನ್ಯಾಯ

ಕಾಂಗ್ರೇಸ್ ಪಕ್ಷದಿಂದ ಅನಿಲಕುಮಾರ್ ಜಮಾದಾರ್ ಹಲಚೇರಾ ಅವರಿಗೆ ಅನ್ಯಾಯ.

ಕಲಬುರಗಿ ತೊಗರಿ ಮಂಡಳಿ ಅಧ್ಯಕ್ಷ ಸ್ಥಾನದಿಂದ ವಂಚಿತಗೊಳಿಸಿದಕ್ಕೆ ಗುಡುಗಿದ ಕೋಲಿ ಸಮಾಜ

ಚಿಂಚೋಳಿ : ಕಳೆದವಾರವಷ್ಟೇ ನವದೆಹಲಿ ಎಐಸಿಸಿ ಪಕ್ಷದ ಕಛೇರಿಯಿಂದ ಬಿಡುಗಡೆಗೊಳಿಸಿರುವಂತಹ ನಾಮ ನಿರ್ದೇಶಕರ ಪಟ್ಟಿಯಲ್ಲಿ ಅನೀಲಕುಮಾರ ಜಮಾದಾರ ಅವರನ್ನು ಕಲಬುರಗಿ ತೊಗರಿ ಬೆಳೆ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಆದೇಶ ಹೊರಡಿಸಲಾಗಿತ್ತು. ಆದರೆ ಈಗ ಏಕಾಏಕಿ ಅಧ್ಯಕ್ಷ ಸ್ಥಾನ ಬದಲಿಸಿ ಆದೇಶ ಬದಲಾವಣೆ ಆಗಿರುವುದು ಚಿಂಚೋಳಿ ಕೋಲಿ ಸಮಾಜವನ್ನು ನೋವುಂಟು ಮಾಡಿದೆ ಎಂದು ತಾಲೂಕಾ ಕೋಲಿ ಸಮಾಜದ ಅಧ್ಯಕ್ಷ ಅನೀಲಕುಮಾರ ಹುಡದಳ್ಳಿ ಕಾಣದ ಕೈಗಳ ವಿರುದ್ಧ ಗುಡುಗಿದ್ದಾರೆ.

ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು,ಚಿಂಚೋಳಿ ಮತಕ್ಷೇತ್ರಕ್ಕೆ ಮೂರು ಬಾರಿಗ ಶಾಸಕರಾಗಿ, 3 ಬಾರಿ ಮಂತ್ರಿಗಳಾಗಿ ಚಿಂಚೋಳಿ ಮತಕ್ಷೇತ್ರಕ್ಕೆ ಅಭಿವೃದ್ಧಿ ಸೇವೆ ಸಲ್ಲಿಸಿರುವ ದಿವಂಗತ ದೇವೀಂದ್ರಪ್ಪ ಘಾಳಪ್ಪ ಜಮಾದಾರ ಅವರ ಪುತ್ರ ಅನಿಲಕುಮಾರ್ ದೇವೀಂದ್ರಪ್ಪ ಜಮಾದಾರ್ ಹಲಚೇರಾ ಅವರಿಗೆ ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ಅನ್ಯಾಯ ಮುಂದುವರೆಯುತ್ತಲೇ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಕಳೆದ ಎರಡುವರೇ ವರ್ಷದಿಂದ ಅಧಿಕಾರದ ಕಾರ್ಯಭಾರದಲ್ಲಿದ್ದರೂ, ಅನಿಲ್ ದೇವೀಂದ್ರಪ್ಪ ಜಮಾದಾರ್ ಹಲಚೇರಾ ಅವರನ್ನು ಕಡೆಗಣಿಸಲಾಗುತ್ತಿದೆ.

ಕೆಲವು ಕಾಣದ ಕಾಣದ ಕೈಗಳ ಚಳಕದಿಂದ ಅನೀಲಕುಮಾರ ಅವರಿಗೆ ಕಲಬುರಗಿ ತೊಗರಿ ಬೆಳೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟು. ಈಗ ಜವಾಹರ ಬಾಲ ಭವನ ಸೊಸೈಟಿಯ ಉಪಾಧ್ಯಕ್ಷ ಎಂದು ನೇಮಿಸಿ ಬದಲಾಯಿಸಿ ಆದೇಶ ಹೊರಡಿಸಿರುವುದಕ್ಕೆ ಚಿಂಚೋಳಿ ತಾಲೂಕ ಕೋಲಿ ಸಮಾಜವನ್ನು ನೋವುಂಟು ಮಾಡಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತದೆ.

ಹಿಂದೆ ದಿ. ದೇವೀಂದ್ರಪ್ಪ ಘಾಳಪ್ಪ ಅವರು ಮಂತ್ರಿ ಇರುವಾಗಲೇ ಶಾಸಕ ಸ್ಥಾನದ ಟಿಕೆಟ್ ಕೈ ತಪ್ಪಿಸಿ ಅವರ ಕುಟುಂಬಕ್ಕೆ ಅನ್ಯಾಯ ಮಾಡಲಾಗಿತ್ತು. ಈಗ ಮತ್ತೆ ಅದೇ ಚಾಡಿ ಮುಂದುವರೆಸಿ ದೇವೀಂದ್ರಪ್ಪ ಘಾಳಪ್ಪನವರ ಸುಪುತ್ರರಾದ ಅನಿಲಕುಮಾರ್ ಜಮಾದಾರ್ ಹಲಚೇರಾ ಅವರನ್ನು ಕಲಬುರಗಿ ತೊಗರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೈ ತಪ್ಪಿಸುವ ಮೂಲಕ ಇತಿಹಾಸ ಮರುಕಳಿಸುವಂತೆ ಕಾಂಗ್ರೆಸ್ ಪಕ್ಷ ಮಾಡಿದೆ.

ಕಾಂಗ್ರೆಸ್ ಪಕ್ಷ ಚಿಂಚೋಳಿ ತಾಲೂಕಿನ ಕೋಲಿ ಸಮುದಾಯದವರನ್ನು ಹೀಗೆ ಕಡೆಗಣಿಸುತ್ತಾ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಸಮಾಜದ ವಿರೋಧವನ್ನು ಪಕ್ಷ ಎದುರಿಸಬೇಕಾಗುತ್ತದೆ ಅಧ್ಯಕ್ಷ ಅನೀಲಕುಮಾರ ಹುಡದಳ್ಳಿ ಎಚ್ಚರಿಸಿ, ಆಕ್ರೋಶ ಹೋರಾಹಾಕಿದ್ದಾರೆ.