ಸಮಾಜಿಕ ಶೈಕ್ಷಣಿಕ ಸಮೀಕ್ಷಾ ವರದಿಗೆ ಶೋಷಿತ ಸಮುದಾಯಗಳಿಂದ ಹರ್ಷಭರಿತ ಸ್ವಾಗತ

ಸಮಾಜಿಕ ಶೈಕ್ಷಣಿಕ ಸಮೀಕ್ಷಾ ವರದಿಗೆ ಶೋಷಿತ ಸಮುದಾಯಗಳಿಂದ ಹರ್ಷಭರಿತ ಸ್ವಾಗತ

ಸಮಾಜಿಕ ಶೈಕ್ಷಣಿಕ ಸಮೀಕ್ಷಾ ವರದಿಗೆ ಶೋಷಿತ ಸಮುದಾಯಗಳಿಂದ ಹರ್ಷಭರಿತ ಸ್ವಾಗತ 

ಮಹಾಂತೇಶ್ ಎಸ್. ಕೌಲಗಿ, ಜಿಲ್ಲಾ ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಕಲಬುರ್ಗಿ

ಕಲಬುರ್ಗಿ:  ಕಾಂಗ್ರೆಸ್ ನೇತೃತ್ವದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರ ಕರ್ನಾಟಕ ಸರ್ಕಾರವು ಇಂದು ಮಹತ್ವದ ಹೆಜ್ಜೆ ಇಟ್ಟಿದೆ. 2015 ರಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಆರಂಭಿಸಲಾದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಲಾಗಿದೆ. ಈ ವರದಿ ರಾಜ್ಯದ ಎಲ್ಲ ಜಾತಿ-ಜನಾಂಗಗಳ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಕೌಟುಂಬಿಕ, ಮೀಸಲಾತಿ, ರಾಜಕೀಯ ಹೀಗೆ ಸುಮಾರು 55 ಅಂಶಗಳನ್ನು ಒಳಗೊಂಡ ಪ್ರಶ್ನಾವಳಿಯ ಆಧಾರವಾಗಿ ಸಿದ್ಧಪಡಿಸಲಾಗಿದೆ.

ಹಿರಿಯ ನ್ಯಾಯವಾದಿ ಹೆಚ್ ಕಾಂತರಾಜ್ ಅವರ ನೇತೃತ್ವದ ಆಯೋಗವು ಸುಮಾರು 162 ಕೋಟಿ ರೂ.ಗಳನ್ನು ಖರ್ಚು ಮಾಡಿ, ಒಂದು ಲಕ್ಷ ಮೂವತ್ತು ಸಾವಿರ ಗಣತಿದಾರರೊಂದಿಗೆ ಒಂದು ಕೋಟಿ 27 ಲಕ್ಷ ಮನೆಗಳಿಗೆ ಭೇಟಿಯೊಂದಿಗೆ ಸಮೀಕ್ಷೆ ನಡೆಸಿ ಅತ್ಯಂತ ವೈಜ್ಞಾನಿಕ ವರದಿಯನ್ನು ತಯಾರಿಸಿದೆ. ಈ ವರದಿಯನ್ನು ಸರ್ಕಾರ ಈಗಾಗಲೇ ಸ್ವೀಕರಿಸಿದ್ದು, ಇವತ್ತು ಸಂಪುಟದಲ್ಲಿ ಮಂಡನೆಯಾಗಿದೆ.

ಇದು ರಾಜ್ಯದ ಶೋಷಿತ, ಹಿಂದುಳಿದ ಸಮುದಾಯಗಳಿಗೆ ನೈಜ ನ್ಯಾಯ ಒದಗಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಇಡೀ ಸಮುದಾಯದಿಂದ ಹರ್ಷಭರಿತ ಸ್ವಾಗತ ದೊರಕಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿ ಹಾಗೂ ಸಂಪುಟದ ಎಲ್ಲಾ ಸಚಿವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು 

ಮಹಾ ಒಕ್ಕೂಟದಿಂದ ಸರ್ಕಾರಕ್ಕೆ ಮನವಿಯಿರುವುದು ಏನೆಂದರೆ, ಈ ವರದಿಯನ್ನು ಬರುವ ಸಚಿವ ಸಂಪುಟಗಳಲ್ಲಿ ತಕ್ಷಣ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.