ಅ.2 ರಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ. ಅ. 13 ರಂದು ಕಲಬುರಗಿ ಬಂದ್ ಕರೆ ದುಂಡು ಮೇಜಿನ ಸಭೆಯಲ್ಲಿ ತಿರ್ಮಾನ

ಅ.2 ರಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ. ಅ. 13 ರಂದು ಕಲಬುರಗಿ ಬಂದ್ ಕರೆ ದುಂಡು ಮೇಜಿನ ಸಭೆಯಲ್ಲಿ ತಿರ್ಮಾನ
ಕಲಬುರಗಿ: ರೈತ,ದಲಿತ,ಕನ್ನಡ,ವಿಧ್ಯಾರ್ಥಿ,ಮಹಿಳಾ,ಕಾರ್ಮಿಕ,ಪರ ಸಂಘಟನೆಗಳು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ನಗರದ ಐ ವಾನ್ ಶಾಹಿ ಅತಿಥಿಗ್ರಹದಲ್ಲಿ ದುಂಡು ಮೇಜಿನ ಸಭೆ ನಡೆಯಿತು.
ಹಸಿ ಬರಗಾಲ ಘೋಷಿಸಿ ರಾಷ್ಟ್ರೀಯ ವಿಪತ್ತು ಪರಿಹಾರ ಕೊಡಿ ರೈತರ ಸಾಲ ಮನ್ನಾ ಮಾಡಿ ನದಿಗಳು ನೀರಿನಿಂದ ಜಲಾವೃತ ಮುಳುಗಡೆ ಪ್ರದೇಶ ಶಾಶ್ವತ ಪರಿಹಾರ ನಿರ್ಮಿಸಿ, ದನಕರುಗಳು ಮೃತಪಟ್ಟ ಕುಟುಂಬಕ್ಕೆ ಪರಿಹಾರ ಕೊಡಿ, ಹಿಂಗಾರು ಬಿತ್ತನೆಗಾಗಿ ಬಿಜ ರಸಗೊಬ್ಬರ ಉಚಿತವಾಗಿ ಕೊಡಬೇಕು, ನಗರದಲ್ಲಿ ದುಂಡು ಮೇಜಿನ ಸಭೆ ನಡಸಿ ಒಮ್ಮತದ ತಿರ್ಮಾನಿಸಲಾಯಿತು
ದಿನಾಂಕ 2/10/2025 ರಿಂದ ಅನಿರ್ದಿಷ್ಟ ವಾಧಿ ಧರಣಿ ಸತ್ಯಾಗ್ರಹ ಸ್ಥಳ ಕೆರಿ ಬಂಡ್ ರೊಡ್ ಜಗತ್ ಸರ್ಕಲ್ ದಿನಾಂಕ 13/10/2025 ರಂದು ಕಲಬುರಗಿ ಬಂದ್ ಕರೆ ನಿಡಲಾಗಿದೆ. ಕಲಬುರಗಿ ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ. ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗುವಂತೆ ಮಾಡಿದೆ.
ಈ ಸಭೆಯಲ್ಲಿ ಶಿವಶರಣಪ್ಪಾ ಮುಳೆಗಾಂವ, ಎ ಬಿ ಹೊಸಮನಿ, ಅರ್ಜುನ್ ಗೊಬ್ಬುರು, ಶರಣು ಪಪ್ಪಾ, ಶರಣಬಸ್ಸಪ್ಪಾ ಮಮಶೆಟ್ಟಿ, ದಯಾನಂದ ಪಾಟಿಲ್, ಭಿಮಶೆಟ್ಟಿ ಯಂಪಳ್ಳಿ, ಜಗದೀಶ್ ಪಾಟೀಲ್, ಉಮಾಪತಿ ಪಾಟೀಲ್, ಬಸವರಾಜ ಇಂಗಿನ, ಮೌಲಾ ಮುಲ್ಲಾ, ಭಿಮಾಶಂಕರ ಮಾಡಿಯಾಳ, ಮಾಹಾಂತ ಗೌಡ ಪಾಟಿಲ್, ಮಂಜುಳಾ ಬಜಂತ್ರಿ, ಜಗದೆವಿ, ರವಿ ದೆಗಾಂವ, ದಿವ್ಯಾ ಹಾಗರಗಿ, ಸಂದಿಪ್ ಭರಣಿ, ಚಂದ್ರಶೆಖರ ಪಾಟಿಲ್, ಎಂ ಬಿ ಸಜ್ಜನ್, ಪದ್ಮಿನಿ ಕಿರಣಗಿ, ಅಶ್ವಿನಿ, ಸುಮಾ, ಸಿದ್ದು ಸೇರಿದಂತೆ ಇತರರು ಇದ್ದರು.