ಲೋಕೋಪಯೋಗಿ ಭವನದಲ್ಲಿ ಜಕಣಚಾರಿ ಜಯಂತಿ ಮತ್ತು ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ಲೋಕೋಪಯೋಗಿ ಭವನದಲ್ಲಿ ಜಕಣಚಾರಿ ಜಯಂತಿ ಮತ್ತು ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ಲೋಕೋಪಯೋಗಿ ಭವನದಲ್ಲಿ ಜಕಣಚಾರಿ ಜಯಂತಿ ಮತ್ತು ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ಕಲಬುರಗಿ: ನಗರದ ಲೋಕೋಪಯೋಗಿ ಭವನ ಕಚೇರಿಯಲ್ಲಿ ಅಮರಶಿಲ್ಪಿ ಜಕಣಚಾರಿ ಜಯಂತಿ ಹಾಗೂ ಹೊಸ ವರ್ಷದ ಕರ್ನಾಟಕ ರಾಜ್ಯ ಲೋಕೋಪಯೋಗಿ ನೌಕರರ ಸಂಘ, ಬೆಂಗಳೂರು ಜಿಲ್ಲಾ ಘಟಕ ಕಲಬುರಗಿ ಇವರ ಕ್ಯಾಲೆಂಡರ್ ಬಿಡುಗಡೆ ಸಮಾರಂಭವು ನಡೆಯಿತು.

ಸಂಪರ್ಕ ಮತ್ತು ಕಟ್ಟಡ ಈಶಾನ ಮುಖ್ಯ ಇಂಜಿನಿಯರರಾದ ಶರಣಪ್ಪ ಸುಲುಗಂಟೆ ಅವರು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಅಮರಶಿಲ್ಪಿ ಜಕಣ ಚಾರಿ ಅವರ ಶಿಲ್ಪಕಲಾ ಪರಂಪರೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಅಮೂಲ್ಯ ಸಂಪತ್ತಾಗಿದೆ ಎಂದು ಹೇಳಿದರು. ನೌಕರರ ಸಂಘದ ಕಾರ್ಯಚಟುವಟಿಕೆಗಳಿಗೆ ಈ ಕ್ಯಾಲೆಂಡರ್ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ವೃತ್ತ ಅಧೀಕ್ಷಕ ಅಭಿಯಂತರರಾದ ಅಮೀನ್ ಮುಕ್ತಾರ್ ಅಹಮದ್,ಸುರೇಶ ಶರ್ಮಾ,ಸುರೇಶ್ ಮೇದ, ಕಾರ್ಯನಿರ್ವಕ ಅಭಿಯಂತರರಾದ ರಾಹುಲ್ ಕಾಂಬಳೆ,ಸೂರ್ಯಕಾಂತ್ ಕಾರ್ಬಾರಿ,ಎಂ.ಡಿ. ಇಬ್ರಾಮ್,ಶ್ರೀಮಂತ ಬೆನ್ನೂರ್,ಶ್ರೀಮಂತ ಕೋಟೆ,ಬಸವರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯನಿರ್ವಕ ಅಭಿಯಂತರರು, ಸಹಾಯಕ ಹಾಗೂ ಕಿರಿಯ ಅಭಿಯಂತರರು, ತಾಂತ್ರಿಕ ಸಿಬ್ಬಂದಿ ಮತ್ತು ಕರ್ನಾಟಕ ರಾಜ್ಯ ಲೋಕೋಪಯೋಗಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶರಣರಾಜ ಛಪ್ಪರಬಂದಿ, ಹಿರಿಯ ಉಪಾಧ್ಯಕ್ಷ ಭೀಮಣ್ಣ ನಾಯಕ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕಟ್ಟಿಮನಿ, ಖಜಾಂಚಿ ಉಮಾಕಾಂತ ಹಿರೋಳ್ಳಿ, ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.