ಹಳೆ ಬ್ರಹ್ಮಪುರದ ಲೀಲಾಬಾಯಿ ಗುಡಿ ಅವರಿಗೆ ನುಡಿ ನಮನ

ಹಳೆ ಬ್ರಹ್ಮಪುರದ ಲೀಲಾಬಾಯಿ ಗುಡಿ ಅವರಿಗೆ ನುಡಿ ನಮನ
ಕಲಬುರಗಿ: ಇಂದು ವಿಶ್ವ ಹೃದಯ ದಿನದಂದು ಹಳೆ ಬ್ರಹ್ಮಪುರದ ನಿವಾಸಿಯಾದ ದಿ. ಶ್ರೀಮತಿ ಲೀಲಾಬಾಯಿ ದಿ. ಗೋಪಾಲರಾವ್ ಗುಡಿ ಅವರ ನುಡಿ ನಮನ ಕಾರ್ಯಕ್ರಮ ಜರುಗಿತು. ಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀನಿವಾಸ್ ಗುಡಿ ಅವರ ಸೊಸೆ ಹಾಗೂ ಕಾರ್ಮಿಕ ನಾಯಕ, ಹೈದರಾಬಾದ್ ಕರ್ನಾಟಕ ಹೋರಾಟಗಾರ ದಿವಂಗತ ಗೋಪಾಲರಾವ್ ಗುಡಿ ಅವರ ಧರ್ಮಪತ್ನಿಯಾಗಿದ್ದ ಲೀಲಾಬಾಯಿ ಅವರು ನಾಲ್ಕು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗನನ್ನು ಅಗಲಿದ್ದಾರೆ.
ನುಡಿನಮನದ ಅಂಗವಾಗಿ ನ್ಯಾಯವಾದಿ ವಿನೋದಕುಮಾರ್ ಮಾತನಾಡಿ, ಲೀಲಾಬಾಯಿ ಅವರ ಆತ್ಮೀಯ ನೆನಪುಗಳನ್ನು ಹಂಚಿಕೊಂಡರು. ನಂತರ ಕರ್ನಾಟಕ ಸಂಧ್ಯಾಕಾಲ ಪತ್ರಿಕೆಯ ಸಂಪಾದಕರಾದ ಡಿ. ಶಿವಲಿಂಗಪ್ಪ ಅವರು ಭಾವುಕರಾಗಿ ಮಾತನಾಡಿ, “ಲೀಲಾಬಾಯಿ ನನ್ನ ತಾಯಿ ಸಮಾನರಾಗಿದ್ದು, ಮನೆಗೆ ಬಂದವರನ್ನು ತಮ್ಮ ಮಕ್ಕಳೆಂದು ಕಾಣುತ್ತಿದ್ದರು, ತಾಯಿ ಮಮತೆ ನೀಡುತ್ತಿದ್ದರು” ಎಂದು ಹೇಳಿದರು.
ಈ ನುಡಿನಮನ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಕೃಷ್ಣ ನಾಯಕ, ಗುರುರಾಜ್ ದೇಶಪಾಂಡೆ, ಕಿಶನರಾವ್ ಕುಲಕರ್ಣಿ (ಅಂಕಲಗಿ), ಶಿಕ್ಷಕ ಸಂತೋಷ್ ಪಂಚಾಳ, ಶರಣಪ್ಪ ರೋಜಾ, ವಿಜೇಂದ್ರ, ಬಾಹುಬಲಿ ಕಾಸರ, ಸಂಗು ಹತ್ತಿ ಸೇರಿದಂತೆ ಅನೇಕರು ಭಾಗವಹಿಸಿ ಸಂತಾಪ ವ್ಯಕ್ತಪಡಿಸಿದರು.