ಸದಾಶಿವನಗರದಲ್ಲಿ ವಿಶ್ವ ಕುಟುಂಬ ವೈದ್ಯರ ದಿನಾಚರಣೆ

ಸದಾಶಿವನಗರದಲ್ಲಿ ವಿಶ್ವ ಕುಟುಂಬ ವೈದ್ಯರ ದಿನಾಚರಣೆ

ಸದಾಶಿವನಗರದಲ್ಲಿ ವಿಶ್ವ ಕುಟುಂಬ ವೈದ್ಯರ ದಿನಾಚರಣೆ

ಕಲಬುರಗಿ:ಸದಾಶಿವನಗರ, 19 ಮೇ 2025 ರಂದು ಅಂಡಗಿ ಪ್ರತಿಷ್ಠಾನ ಟೆಂಗಳಿ ವತಿಯಿಂದ ವಿಶ್ವ ಕುಟುಂಬ ವೈದ್ಯರ ದಿನಾಚರಣೆ ಅಂಗವಾಗಿ ಸದಾಶಿವನಗರದ ಪಿ.ಎನ್.ಟಿ. ಕ್ವಾಟರ್ಸ್‌ನಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಐವರು ವಿಶಿಷ್ಟ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಿತ ವೈದ್ಯರಲ್ಲಿದ್ದುದು:

* ಡಾ. ಸಚ್ಚಿದಾನಂದ ಕೊಡುಗೆ (ಬೀದರ್)

* ಡಾ. ಅಶ್ವಿನಿ ವ್ಹಿ. (ಪುಣೆ)

* ಡಾ. ಪ್ರಶಾಂತ ಪುಣ್ಯಶೆಟ್ಟಿ (ಏಮ್ಸ್, ದಿಲ್ಲಿ)

* ಡಾ. ಅನುಪ್ ನಿಷ್ಟಿ (ಕಿದ್ವಾಯಿ, ಬೆಂಗಳೂರು)

* ಡಾ. ಸುಪ್ರಿಯಾ ಕೆ.ಬಿ.

ಅವರನ್ನು ಅಂಡಗಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಶಿವರಾಜ ಅಂಡಗಿ ಹಾಗೂ ವಿನೋದ ಕುಮಾರ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಗಣೇಶ ಮಂದಿರ ಅಧ್ಯಕ್ಷ ನಿವೃತ್ತ ಎ.ಇ.ಇ. ಹಾವೇಂದ್ರ ಪುಣ್ಯಶೆಟ್ಟಿ, ನಿವೃತ್ತ ಕೃಷಿ ಅಧಿಕಾರಿ ಬಸವರಾಜ ಎನ್. ಪುಣ್ಯಶೆಟ್ಟಿ, ಮಲ್ಲಿಕಾರ್ಜುನ ಕಾಂಬಳೆ, ವಿಜಯಕುಮಾರ ಟಕ್ಕಳಕಿ, ಜಗದೀಶ ಮಾಲಿ, ರಿತೀಶ ರೆಡ್ಡಿ, ಅಖಿಲ್ ರಾಯಕೋಟೆ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.