ವಿಶ್ವಾತ್ಮಕ ಭಾವದ ಕವಿತೆ ಹೊರಹೊಮ್ಮಲಿ: ಡಾ.ಸದಾನಂದ ಪೆರ್ಲ

ವಿಶ್ವಾತ್ಮಕ ಭಾವದ ಕವಿತೆ ಹೊರಹೊಮ್ಮಲಿ: ಡಾ.ಸದಾನಂದ ಪೆರ್ಲ

ವಿಶ್ವಾತ್ಮಕ ಭಾವದ ಕವಿತೆ ಹೊರಹೊಮ್ಮಲಿ: ಡಾ.ಸದಾನಂದ ಪೆರ್ಲ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಕಾಲಿನ ಪ್ರಜ್ಞೆಗೆ ಸ್ಪಂದಿಸಿದ 10 ಕವಿಗಳು

ಕಲಬುರಗಿ : ಪ್ರಭುತ್ವದಿಂದ ಪ್ರಜಾಪ್ರಭುತ್ವಡೆಗೆ ಕಾಲಿಟ್ಟ ಸಮಕಾಲಿನ ಸಮಾಜದಲ್ಲಿ ವಿಶ್ವಾತ್ಮಕ ಭಾವದ ಕಾವ್ಯ ಹೊರಹೊಮ್ಮಲಿ ಎಂದು ಸಾಹಿತಿ ಮತ್ತು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹೇಳಿದರು. 

   ಕಲ್ಬುರ್ಗಿ ಜಿಲ್ಲಾ 22ನೆಯ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಫೆ. 16ರಂದು "ಕಾವ್ಯಧೇನು" ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯ ಮತ್ತು ಬದುಕು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಕಾವ್ಯದ ಸಾಕ್ಷಾತ್ಕಾರ ವಿಶ್ವಾತ್ಮಕ ಭಾವದಿಂದ ಕೂಡಿದರೆ ಪರಿವರ್ತನೆಯ ಸಮ ಸಮಾಜವನ್ನು ಸೃಷ್ಟಿಸಲಿಕ್ಕೆ ಸಾಧ್ಯವಿದೆ. ಸಾಹಿತ್ಯದ ಬರವಣಿಗೆಗೆ ಬೇಕಾದದ್ದು ಸೃಜನಶೀಲ ಮನಸ್ಸು. ಅದೇ ಸಾಹಿತ್ಯದ ಜೀವಾಳವಾಗಿದ್ದು ಏನು ಬರೆಯಬೇಕೆಂಬುದರ ಬಗ್ಗೆ ಕವಿಗೆ ಸ್ಪಷ್ಟತೆ ಇದ್ದಾಗ ಬರವಣಿಗೆ ಸುಲಭ ಸಾಧ್ಯವಾಗುತ್ತದೆ. ಸೃಜನಶೀಲತೆ ಇಲ್ಲವಾದರೆ ಭಾವ ಅರಳುವುದಿಲ್ಲ, ಭಾಷೆ ಕಟ್ಟುವುದಿಲ್ಲ, ಸಾಹಿತ್ಯದ ಚೌಕಟ್ಟು ತುಂಬುವುದಿಲ್ಲ. ನಮ್ಮೊಳಗೆ ಮೌನಕ್ಕೆ ದ್ವನಿಯಾಗುವ ಪ್ರಕ್ರಿಯೆ ಸೃಜನಶೀಲ ಕಾವ್ಯದ ಸಾಕ್ಷಾತ್ಕಾರವಾಗಿದೆ ಎಂದು ಹೇಳಿದರು. 

    ಹಿರಿಯ ಮುಖಂಡರಾದ ಮಾಲಿಕಯ್ಯ ವಿ ಗುತ್ತೇದಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕವಿತಾ ಶಕ್ತಿ ವರ್ಣನೆಗೆ ನಿಲುಕದ್ದು. ಡಾ. ರಾಜಕುಮಾರ್ ಅಭಿನಯದ ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಕಾಳಿದಾಸ ತನ್ನ ಮೇರು ಕವಿತಾ ಸಾಮರ್ಥ್ಯದಿಂದ ಭೋಜರಾಜನ ಮನಸ್ಸನ್ನು ಗೆಲ್ಲಲು ಸಾಧ್ಯವಾಗಿರುವುದು ನಮಗೆಲ್ಲಾ ಆದರ್ಶ.ಹಾಗೆ ಕಲ್ಯಾಣ ಕರ್ನಾಟಕ ಭಾಗದ ಕವಿಗಳು ರಾಷ್ಟ್ರ ಮತ್ತು ವಿಶ್ವಮಟ್ಟದಲ್ಲಿ ಸ್ಥಾನ ಪಡೆಯಲಿ ಎಂದು ಹಾರೈಸಿದರು.

   ಕಾವ್ಯಧೇನು ಕವಿಗೋಷ್ಠಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ಸಂಶೋಧಕ ಮುಡಬಿ ಗುಂಡೇರಾವ್ ಉಪಸ್ಥಿತರಿದ್ದರು. ನರಸಿಂಗ ರಾವ ಹೇಮನೂರು ಆಶಯ ಭಾಷಣ ಮಾಡಿದರು.

ಕವಿಗಳಾದ ರೇಣುಕಾಚಾರ್ಯ ಸ್ಥಾವರಮಠ (ನಾಯಕರು) ವಿಜಯಲಕ್ಷ್ಮಿ ಪತ್ತಾರ ( ನನ್ನ ಉಸಿರು ಕನ್ನಡ) ಶಿವಯ್ಯ ಮಠಪತಿ (ಜಾತ್ರೆ), ರವೀಂದ್ರ ಬಿ ಕೆ (ನನ್ನವಳಿಗೆ ಕೋಪ ಬಂದಾಗ) ರವಿಕುಮಾರ್ (ಹಸಿರೇ ಉಸಿರು) ಲಲಿತ ಎಸ್ ರೇಷ್ಮೆ (ಸುಂದರ ಸೃಷ್ಟಿ) ಶಿವಲಿಂಗಯ್ಯ ಸ್ವಾಮಿ (ದೇಶ ರಕ್ಷಣೆ) ಗುಂಡಪ್ಪ ವೈ ಗೋಟ್ಕರ್ (ಅಜ್ಞಾನದ ಅಂಗಳ) ಕವಿತಾ ಶೀಲವಂತ (ವೀರ ಸಿಂಧೂರ) ಮೋಹನ ಕಟ್ಟಿಮನಿ (ನಗೆಯು ಬರುತಿದೆ) ಕವನಗಳ ಮೂಲಕ ಕಾವ್ಯಗಂಗೆ ಹರಿಸಿದರು. ಸಹೃದಯಿ ಪ್ರೇಕ್ಷಕರು ಕವಿಗಳ ಕವಿತೆಗಳಿಗೆ ತಲೆದೂಗಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ ಧರ್ಮಣ್ಣ ಧನ್ನಿ, ಗೌರವ ಕೋಶದ ಅಧ್ಯಕ್ಷ ಧರ್ಮರಾಜ ಜವಳಿ ಉಪಸ್ಥಿತರಿದ್ದರು. ಪ್ರಭಾವತಿ ಮೇತ್ರೆ ಸ್ವಾಗತಿಸಿದರು ನಾಗಪ್ಪ ಸಜ್ಜನ್ ಧನ್ಯವಾದವಿತರು ಜಯಶ್ರೀ ಜಮಾದಾರ್ ಮತ್ತು ಮಲ್ಲಿಕಾರ್ಜುನ ಇಬ್ರಾಹಿಂಪುರ್ ನಿರೂಪಣೆ ಮಾಡಿದರು.