ಸದೃಢ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವ: ದತ್ತಾತ್ರೇಯ ಪಾಟೀಲ

ಸದೃಢ  ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವ: ದತ್ತಾತ್ರೇಯ ಪಾಟೀಲ
ಸದೃಢ  ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವ: ದತ್ತಾತ್ರೇಯ ಪಾಟೀಲ

ಸದೃಢ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವ: ದತ್ತಾತ್ರೇಯ ಪಾಟೀಲ 

ಕಲಬುರಗಿ: ಸದೃಢ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವ ಎಂದು ಮಾಜಿ ಶಾಸಕ ದತ್ತಾತ್ರೇ ಪಾಟೀಲ್ ರೇವೂರ್ ಹೇಳಿದರು.

ಇಂದು ಕಲ್ಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನ ಸೇಂಟ್ ಮೇರಿ ಚರ್ಚ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕಲ್ಬುರ್ಗಿ ಜಿಲ್ಲೆಯ 10 ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ,ಪದವಿ, ಸ್ನಾತಕೋತ್ತರ ಪದವಿಯ 75 ಶಿಕ್ಷಕರಿಗೆ ಅವರ ಸೇವೆಯನ್ನು ಗುರುತಿಸಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತ ಇವತ್ತಿನ ಕಾರ್ಯಕ್ರಮ ತುಂಬಾ ಶಿಸ್ತಿನಿಂದ ಹಾಗೂ ಜವಾಬ್ದಾರಿಯಿಂದ ನಿರಗುಡಿ ಸರ್ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದ್ದು ಎಂದು ದತ್ತಾತ್ರೇಯ ಪಾಟೀಲ್ ರೇವೂರ್ ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಡಾ ಮಾಜಿ ಅಧ್ಯಕ್ಷರಾದ ಶರಣಪ್ಪ ತಳವಾರ್ ಅವರು ಮಾತನಾಡುತ್ತಾ ಮಕ್ಕಳ ಸಮಗ್ರ ವಿಕಾಸಕ್ಕೆ ಶಿಕ್ಷಕನೆ ಕಾರಣ ಶಿಕ್ಷಕ ಮಾನವ ಜನಾಂಗಕ್ಕೆ ದಾರಿ ದೀಪ ಎಂದು ಕರೆ ಕೊಟ್ಟರು. ತಂದೆ ತಾಯಿ ಮಗುವಿಗೆ ಭೌತಿಕ ದೇಹಕ್ಕೆ ಜೀವ ಕೊಟ್ಟರೆ ಶಿಕ್ಷಕ ಬೌದ್ಧಿಕ ಪ್ರಗತಿಗೆ ಅಡಿಪಾಯ ಆಗಿದ್ದಾನೆ ಅಜ್ಞಾನ ಅಂಧಕಾರದಿಂದ ಬೆಳಕಿನ ಕಡೆ ಕೊಂಡೊಯ್ಯುವ ವ್ಯಕ್ತಿ ಶಿಕ್ಷಕನಾಗಿದ್ದಾನೆಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸೋಮಶೇಖರ್ ಗೋಯನಾಯಕ ಅವರು ಹೇಳಿದರು . ವೇದಿಕೆಯ ಮೇಲೆ ಶರಣಬಸವ ವಿಶ್ವವಿದ್ಯಾಲಯದ ಡಾ ಲಕ್ಷ್ಮಿ ಪಾಟೀಲ್ ಮಾಕಾ, ಸೆಂಟ್ ಮೇರಿ ಚರ್ಚ್ ನ ಫಾದರ್ ಪ್ರವೀಣ್ ಹಾಗೂ ಸಿಪಿಐ ಮಾಂತೇಶ್ ಪಾಟೀಲ್ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಯ್ಯ ಗುತ್ತೇದಾರ್ ವಹಿಸಿದರು.ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.75 ಶಿಕ್ಷಕರಿಗೆ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನ ಹೆಚ್ಚು ಜನ ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆ ಡಾ. ಶರಣಬಸಪ್ಪ ವಡ್ಡನಕೇರಿ ಮಾಡಿದರು ವಂದನಾರ್ಪಣೆ ಡಾ ಚಿ.ಸಿ. ನಿಂಗಣ್ಣ ಪ್ರಾರ್ಥನೆ ಕಿರಣ್ ಪಾಟೀಲ್ ಕನ್ನಡ ಗೀತ ಗಾಯನ ಡಾ. ರಾಜಶೇಖರ್ ಮಾಂಗ್ ಹಾಗೂ ಗೋದಾವರಿ ಪಾಟಿಲ್. ಕಾರ್ಯಕ್ರಮದಲ್ಲಿ ಶಿವಾನಂದ ಖಜೂರಿ ಡಾ. ಪ್ರಲಾದ್ ಬುರ್ಲಿ ಡಾ. ವಿಜಯಕುಮಾರ್ ಪರುತೆ ರೇವಣಸಿದ್ದಪ್ಪ ದುಃಖಾನ್ ಡಾ ಆನಂದ್ ಸಿದ್ದಾಮಣಿ ,ಸಿದ್ದರಾಮ ಬೇತಾಳೆ ,ಶಿವಶರಣಪ್ಪ ಉದನೂರ್, ಅಂಬಾರಾಯ ಕೋಣೆ, ಬಿಎಸ್ ಮಾಲಿಪಾಟೀಲ್,ನಾಗಲಿಂಯ್ಯ ಮಠಪತಿ ಮಲ್ಲಿಕಾರ್ಜುನ್ ಪಾಲಮಾರ್, ಸಿದ್ದಪ್ಪ ತಳ್ಳಳ್ಳಿ ರಾಜೇಂದ್ರ ಜಳಕಿ ಎಸ್ ಎಸ್ ಹೂಗಾರ ಮುಂತಾದವರು.

ಲಕ್ಷ್ಮಿಕಾಂತ್ ದೇವಕರ್. ಸಿ.ಆರ್ ಪಿ . ದಕ್ಷಿಣ ವಲಯ ಕಲಬುರ್ಗಿ ಇವರಿಗೆ ಸಿದ್ದಾರಾಮ ರಾಜಮಾನೆ ಅಭಿನಂದಿಸಿದರು.