ಶ್ರೀನಿವಾಸ ಸರಡಗಿ ಮಹಾಲಕ್ಷ್ಮಿ ಶಕ್ತಿ ಪೀಠದಲ್ಲಿ ಅ.02ರಂದು 13ನೇ ದಸರಾ ದರ್ಬಾರ

ಶ್ರೀನಿವಾಸ ಸರಡಗಿ ಮಹಾಲಕ್ಷ್ಮಿ ಶಕ್ತಿ ಪೀಠದಲ್ಲಿ ಅ.02ರಂದು 13ನೇ ದಸರಾ ದರ್ಬಾರ
ಕಲಬುರಗಿ: ತಾಲೂಕಿನ ಶ್ರೀನಿವಾಸ್ ಸರಡಗಿ ಗ್ರಾಮದ ಮಹಾಲಕ್ಷ್ಮಿ ಶಕ್ತಿ ಪೀಠದ 13ನೇ ದಸರಾ ದರ್ಬಾರದ ಪ್ರಯುಕ್ತ 2ನೇ ಮೈಸೂರು ಮಾದರಿಯಲ್ಲಿ ಜಂಬೂ ಸವಾರಿ ಭವ್ಯ ಮೆರವಣಿಗೆ ಹಾಗೂ ತುಲಾಭಾರ ಮತ್ತು ಭಾವೈಕ್ಯ ಧರ್ಮಸಭೆ ಅ. 02 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗುವವು.
ಶಕ್ತಿಪೀಠಾಧಿಪತಿಗಳಾದ ಡಾ. ಅಪ್ಪಾರಾವ ದೇವಿ ಮುತ್ಯಾ ಇವರ ಅಪ್ಪಣೆಯ ಮೇರೆಗೆ ಜರಗಲಿದೆ. ಅ.02 ರಂದು ವಿಜಯದಶಮಿ ಗುರುವಾರ ಬೆಳಗ್ಗೆ 6 ಗಂಟೆಗೆ ದೇವಿಯ ಮಹಾಭಿಷೇಕ ಮಹಾಅಲಂಕಾರ, ಮಹಾನೈವಿದ್ಯ ಮಧ್ಯಾಹ್ನ 12.30 ಗಂಟೆಗೆ ಜಂಬೂ ಸವಾರಿ ಭವ್ಯ ಮೆರವಣಿಗೆಯನ್ನು ಗ್ರಾಮೀಣ ವಿಭಾಗದ ಡಿ.ವಾಯ್.ಎಸ್.ಪಿ ಡಿ.ಜಿ.ರಾಜಣ್ಣ ಹಾಗೂ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಪೊಲೀಸ್ ಸರ್ಕಲ್ ಇನ್ಸಪೆಕ್ಟರ್ ಸುಶೀಲಕುಮಾರ ಉದ್ಘಾಟಿಸುವರು. ನಂತರ ಮೈಸೂರು ಮಾದರಿಯಲ್ಲಿ ಗ್ರಾಮದ ಪ್ರಮುಖ ರಾಜ ಬೀದಿಯಿಂದ ಶ್ರೀ ದೇವಿಯ ಶಕ್ತಿಪೀಠದವರೆಗೆ ಆನೆ ಅಂಬಾರಿ ಮೇಲೆ ಜಂಬೂ ಸವಾರಿ ಹಾಗೂ ಈ ನಾಡಿನ ಅನೇಕ ನುರಿತ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗುವುದು.
ಸಾಯಂಕಾಲ 5. 45 ಗಂಟೆಗೆ ಪರೇಡ್ ಕವಾಯತ್ ಮುಖಾಂತರ ಬನ್ನಿ ಮುಡಿಯುವ ಕಾರ್ಯಕ್ರಮ ಸಾಯಂಕಾಲ 6 ಗಂಟೆಗೆ ಭಾವೈಕ್ಯ ಧರ್ಮಸಭೆ ಜರುಗವುದು. ವಿವಿಧ ಕ್ಷೇತ್ರದಲ್ಲಿ ಶ್ರಮಿಸಿದ ಗಣ್ಯರಿಗೆ ಸುಕ್ಷೇತ್ರ ಶ್ರೀನಿವಾಸ ಸರಡಗಿ ಶ್ರೀ ಶಕ್ತಿಪೀಠದ ವತಿಯಿಂದ ಪ್ರಶಸ್ತಿ ಪ್ರದಾನದೊಂದಿಗೆ ಗೌರವಿಸಲಾಗುವದು.
ಭಾವೈಕ್ಯ ಧರ್ಮಸಭೆ ಸಾ. 6 ಗಂಟೆಗೆ ಶ್ರೀ ಸರಡಗಿ ಅನ್ನಪೂರ್ಣೇಶ್ವರಿ ಬಸವಕಲ್ಯಾಣ ಸಂಸ್ಥಾನ ಮಕ್ಕಳಿಂದ ಹಾಗೂ ಶ್ರೀ ಸರಡಗಿ ಶಕ್ತಿ ಇಂಗ್ಲೀಷ್ ಮಿಡಿಯಮ್ ಸ್ಕೂಲ್ ಕಲಬುರಗಿ ರೂಪಕ ಸಾಂಸ್ಕೃತಿಕ ಕಾರ್ಯಕ್ರಮ ವಿರಕ್ತಮಠ ಭರತನೂರದ ಶ್ರೀ ಮ.ನಿ.ಪ್ರ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಇವರು ಸಾನಿಧ್ಯ ವಹಿಸುವರು.
ಶ್ರೀ ಷ.ಬ್ರ ವೀರಭದ್ರ ಶಿವಾಚಾರ್ಯರು ಇವರು ಉಪಸ್ಥಿತಿ ಇರುವರು. ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು.
ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆ ವಹಿಸುವರು. ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ಕಮಕನೂರ, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ, ಸ.ನೌ.ಸಂಘದ ಅಧ್ಯಕ್ಷ ರಾಜು ಲೇಂಗಟಿ, ಬಿಜೆಪಿ ಮುಖಂಡ ಶಿವಕಾಂತ ಮಹಾಜನ್, ಕಾಂಗ್ರೇಸ್ ಮುಖಂಡ ನೀಲಕಂಠರಾವ ಮೂಲಗೆ, ಉದ್ದಿಮೇದಾರ ಯುವರಾಜ ಚಿಂಚೋಳಿ, ಬಿಜೆಪಿ ಮುಖಂಡ ಪ್ರದೀಪ ವಾತಡೆ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ, ವೀ.ಲಿಂ.ಸಂಘಟನಾ ವೇದಿಕೆ ರಾಜ್ಯಾಧ್ಯಕ್ಷ ರವಿ ಬಿರಾದಾರ ಕಮಲಾಪೂರ, ಮಾಜಿ ತಾ.ಪಂ.ಅಧ್ಯಕ್ಷ ಸಂಗಮೇಶ ನಾಗನಳ್ಳಿ, ಮಾಜಿ ಪಾಲಿಕೆ ಸದಸ್ಯ ಆರ್.ಎಸ್.ಪಾಟೀಲ, ಉದ್ದಿಮೇದಾರ ಸುನೀಲ ಪಾಟೀಲ, ಶ್ರೀನಿವಾಸ ಸರಡಗಿ ಗ್ರಾ.ಪಂ.ಅಧ್ಯಕ್ಷೆ ಅನುಸೂಬಾಯಿ ರಾಠೋಡ, ವೀರಶೈವ ಲಿಂಗಾಯತ ರಾಷ್ಟಿçÃಯ ಉಪಾಧ್ಯಕ್ಷೆ ದಿವ್ಯಾ ಹಾಗರಗಿ, ದಾಲ ಇಂಡಸ್ಟ್ರೀಜ್‌ನ್ ರವಿ ಪಾಟೀಲ ಸರಡಗಿ, ಮಾಜಿ ಎ.ಪಿ.ಎಂ.ಸಿ.ಅಧ್ಯಕ್ಷ ಶಾಂತಕುಮಾರ ಬಿರಾದಾರ, ಬಿಜೆಪಿ ಮುಖಂಡ ವಿನೋದ ಪಾಟೀಲ, ಕಾಂಗ್ರೇಸ್ ಮುಖಂಡ ಆನಂದ ಪಾಟೀಲ ಸೇರಿದಂತೆ ವಿವಿಧ ರಾಕೀಯ ಮುಖಂಡರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮದ್ದು ಸುಡುವ ಕಾರ್ಯಕ್ರಮವನ್ನು ಸೋಲಾಪೂರ ಸದ್ಭಕ್ತರಿಂದ ಜರುಗುವುದು. ಮಹಾಲಕ್ಷ್ಮಿ ಶಕ್ತಿ ಪೀಠದ ದೇವಸ್ಥಾನದ ವಿದ್ಯುತ್ ದೀಪದಿಂದ ಅಲಕಾಂರ ಮಾಡಲಾಯಿತು.
ಶ್ರೀ ದೇವಿಯ ಪವಿತ್ರ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟç, ಆಂಧ್ರಪ್ರದೇಶ ಹಾಗೂ ಗ್ರಾಮಸ್ಥರು, ಸಕಲ ಸದ್ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶಕ್ತಿ ಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ್ ಬೆನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.