"ವಿಶ್ವ ಆತ್ಮಹತ್ಯೆ ನಿಗ್ರಹ ದಿನ"

"ವಿಶ್ವ ಆತ್ಮಹತ್ಯೆ  ನಿಗ್ರಹ ದಿನ"

"ವಿಶ್ವ ಆತ್ಮಹತ್ಯೆ ನಿಗ್ರಹ ದಿನ"

ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಮನೋವಿಜ್ಞಾನ ವಿಭಾಗದ ವತಿಯಿಂದ 'ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಸಿಗೆ ನೀರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯ ಮನೋವಿಜ್ಞಾನದ ಮುಖ್ಯಸ್ಥರಾದ ರಬಿಯಾ ಅಲಿ ಪ್ರತಿಜ್ಞಾವಿಧಿಯನ್ನ ನೆರವೇರಿಸಿ ಕೊಟ್ಟರು. ಇನ್ನೋರ್ವ ಮುಖ್ಯಅತಿಥಿಗಳಾದ ಡಾ|| ಮಲ್ಲಿಕಾರ್ಜುನ್ ಎಚ್. ಕೃಷ್ಣಕರ್ ವೈಜ್ಞಾನಿಕ ಪ್ರಾದೇಶಿಕ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಮನೋವಿಜ್ಞಾನದ ಅಧಿಕಾರಿಗಳು ಆತ್ಮಹತ್ಯೆ ತಡೆಗಟ್ಟುವ ಕುರಿತು ಪ್ರಾಯೋಗಿಕವಾಗಿ ಮಾತನಾಡಿದರು. ಪ್ರಾಚಾರ್ಯರಾದ ಡಾ|| ರಾಜೇಂದ್ರ ಬಿ. ಕೊಂಡ ಪ್ರಾಸ್ತವಿಕ ನುಡಿಗಳನ್ನಾಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಪನ್ಮೂಲ ವ್ಯಕ್ತಿಯಾದ ಅದ್ರಾ ರೇಗು ಸಹಾಯಕ ಪ್ರಾಧ್ಯಾಪಕರು ಮನೋ ವಿಜ್ಞಾನ ವಿಭಾಗ ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯ ವಿಶೇಷ ಉಪನ್ಯಾಸ ನೀಡಿದರು. ಆತ್ಮಹತ್ಯೆಗೆ ಹಲವಾರು ಕಾರಣಗಳಿವೆ. ಮಾನಸಿಕ ಒತ್ತಡಕ್ಕೊಳಗಾಗದೆ ನಾವೆಲ್ಲಾ ಸಬಲರಾಗಿರಬೇಕು. ಎಂತಹ ಬಿಕ್ಕಟ್ಟಿನ ಪರಸ್ಥಿತಿಯಲ್ಲಿಯೂ ಕೂಡ ದೃತಿಗೆಡದೆ, ಸಮಸ್ಯೆಗಳನ್ನು ಸವಾಲಾಗಿ ತೆಗೆದುಕೊಂಡು, ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಉಪನ್ಯಾಸ ನೀಡಿದರು. ಇತಿಹಾಸ ವಿಭಾಗದ ಶಿವಲೀಲಾ ದೋತ್ರೆ ಅಧ್ಯಕ್ಷೀಯ ಭಾಷಣ ಮಾಡಿದರು. ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಛಾಯಾ ಪಾಟೀಲ್ ಉಪಸ್ಥಿತರಿದ್ದರು. ಮನೋವಿಜ್ಞಾನದ ವಿದ್ಯಾರ್ಥಿಗಳಾದ ಕುಮಾರಿ ಸುಮಿತ್ರಾ ಮತ್ತು ವಿದ್ಯಾಶ್ರೀ ಪ್ರಾರ್ಥನಾ ಗೀತೆಯನ್ನು ಹಾಡಿದರು. ಕು. ಸೌಂದರ್ಯ ಅತಿಥಿಗಳ ಪರಿಚಯ ಮತ್ತು ಸ್ವಾಗತಿಸಿದರು. ಕು. ಅಮ್ಮೀರಾ ವಿಶ್ವ ಆತ್ಮಹತ್ಯೆ ತಡೆಗಟ್ಟುವ ಕುರಿತು ಮಾತಾಡಿದರು. ಕುಮಾರಿ ನುಶ್ರತ್ ವಂದಿಸಿದರು. ಕು. ಕೋಮಲ್ ಚೌದ್ರಿ ನಿರೂಪಿಸಿದರು.ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.