ಶರಣೆ ಜಯದೇವಿತಾಯಿ ಲಿಗಾಡೆ- ಕನ್ನಡ ತಾಯ್ನುಡಿಯ ತಪಸ್ವಿನಿ

ಶರಣೆ ಜಯದೇವಿತಾಯಿ ಲಿಗಾಡೆ- ಕನ್ನಡ ತಾಯ್ನುಡಿಯ ತಪಸ್ವಿನಿ

ಶರಣೆ ಜಯದೇವಿತಾಯಿ ಲಿಗಾಡೆ- ಕನ್ನಡ ತಾಯ್ನುಡಿಯ ತಪಸ್ವಿನಿ 

 ಬೀದರ್ : ಅ.೩೦-ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ರಂಜನಾ ಪಾಟೀಲ್ ಅವರು ಮಾತನಾಡುತ್ತಾ ಕಲ್ಯಾಣ ಕರ್ನಾಟಕದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿರುವ ಶ್ರೀಮತಿ ಜಯದೇವಿತಾಯಿ ಲಿಗಾಡೆ ಅವರು ಕನ್ನಡ ನುಡಿಗೆ, ನಾಡಿಗೆ, ಸಾಹಿತ್ಯಕ್ಕೆ ಹಾಗೂ ಸಮಾಜ ಸೇವೆಗೆ ತಮ್ಮ ಸಂಪೂರ್ಣ ಜೀವನವನ್ನು ಅರ್ಪಿಸಿಕೊಂಡಿದ್ದಾರೆ ಎಂದು ನುಡಿದರು.

 ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಗಂಗಾಂಬಿಕಾ ಪಾಟೀಲ್ ಅವರು ಮಾತನಾಡುತ್ತಾ ಕನ್ನಡ ಭಾಷೆಯ ಸಾಹಿತಿ, ಆಧ್ಯಾತ್ಮ ಚಿಂತಕಿ, ಸಮಾಜಸೇವಕಿ, ಹಾಗೂ ಕುಟುಂಬವತ್ಸಲೆ ಎಂಬ ತ್ರಿವೇಣಿ ಸಂಗಮವಾಗಿರುವ ಈ ಜಂಗಮತಾಯಿ, ತಮ್ಮ ಸಾದಾ, ಧವಳವಸ್ತ್ರದ ನಿರಾಡಂಬರ ಜೀವನದಿಂದ ಜನಮನ ಗೆದ್ದಿದ್ದಾರೆ. ತಾಯ್ನುಡಿಯ ಪ್ರೇಮ, ಕನ್ನಡ ಸಂಸ್ಕೃತಿಯ ಪ್ರಚಾರ, ಶರಣ ಸಾಹಿತ್ಯದ ಪ್ರಸಾರ — ಇವೆಲ್ಲವೂ ಅವರ ಜೀವನದ ಧ್ಯೇಯವಾಗಿತ್ತು ಎಂದು ಹೇಳಿದರು.

  ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರೊ ಸಿ ಬಿ ದೇವರಾಜ ಅವರು ಮಾತನಾಡುತ್ತಾ ಎಪ್ಪತ್ತನಾಲ್ಕು ವರ್ಷಗಳ ಕಾಲ ಶರಣರ ಹಾಗೂ ಕನ್ನಡ ನಾಡಿನ ಸೇವೆಗೆ ತಮ್ಮನ್ನು ಮುಡುಪಾಗಿ ಅರ್ಪಿಸಿಕೊಂಡ ಜಯದೇವಿತಾಯಿ, ಹೆಣ್ಣುಮಕ್ಕಳ ಶಿಕ್ಷಣ, ಸಬಲೀಕರಣ ಹಾಗೂ ಸಾಮಾಜಿಕ ಜಾಗೃತಿ ಕ್ಷೇತ್ರಗಳಲ್ಲಿ ಮಹತ್ತರ ಸೇವೆ ಸಲ್ಲಿಸಿದ್ದಾರೆ. ಅವರ ಮಾತು, ವರ್ತನೆ ಮತ್ತು ಜೀವನವೇ ಶರಣ ತತ್ವದ ಬದುಕು ಪಾಠವಾಗಿತ್ತು ಎಂದು ಹೇಳಿದರು

 ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಭಾಲ್ಕಿ ಅವರು ಮಾತನಾಡುತ್ತಾ ಅವರಲ್ಲಿ ಕಂಡು ಬರುವ ಗಂಭೀರ ವರ್ಚಸ್ಸು, ತಪಸ್ಸು ಮತ್ತು ಸೇವಾ ಮನೋಭಾವ ಕೇವಲ ವ್ಯಕ್ತಿಗತ ಗುಣವಲ್ಲ — ಅದು ನಾಡಿನ ಆತ್ಮಸಾಕ್ಷಾತ್ಕಾರ. ಕನ್ನಡ ಭಾಷೆಯ ಬಾಂಧವ್ಯದ ಶರಣೆ ಜಯದೇವಿತಾಯಿ ಲಿಗಾಡೆ ಅವರ ಜೀವನವೇ ತಾಯ್ನುಡಿಯ ತಪಸ್ಸಿನ ಒಂದು ಯಶೋಗಾಥೆ ಎಂದು ಹೇಳಿದರು.