ಮುಖ್ಯ ಕಚೇರಿಯಲ್ಲಿ ಪ್ರವೀಣ್ ಪಾಟೀಲ್ ಹರವಾಳ ಪದಗ್ರಹಣ ಸೆ.೨೯.ರಂದು

ಮುಖ್ಯ ಕಚೇರಿಯಲ್ಲಿ ಪ್ರವೀಣ್ ಪಾಟೀಲ್ ಹರವಾಳ ಪದಗ್ರಹಣ ಸೆ.೨೯.ರಂದು
ಕಲಬುರಗಿ: ಗುಲ್ಬರ್ಗ ವಿದ್ಯುತ್ಛಕ್ತಿ ಸರಬರಾಜು ನಿಯಮಿತ ಕಂಪನಿಯ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ಪ್ರವೀಣ್ ಪಾಟೀಲ್ ಹರವಾಳ
ಆಯ್ಕೆ ಮಾಡಿದ ಕಾರಣಿ ಭೋತರಾದ ಮಾನ್ಯ ಂIಅಅ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ, ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅದೇ ರೀತಿ ವಿಶೇಷವಾಗಿ ಪಂಚಾಯತ್ ರಾಜ್ ಹಾಗು ಗ್ರಾಮೀಣಭಿವೃದ್ಧಿ ಸಚಿವರು ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಹಾಗು ಕಲಬುರಗಿ ಜಿಲ್ಲಾ ಸಂಸದರಾದ ರಾಧಾಕೃಷ್ಣ ದೊಡ್ಡಮನಿ, ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ ಪಾಟೀಲ್ ಅವರಿಗೂ ಸಹ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರಾದ ಅಜಯ ಧರಂಸಿAಗ್,. ಶ್ರೀ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ಬಿ ಆರ್ ಪಾಟೀಲ್ , ಮೇಡಂ ಕನೀಜ್ ಫಾತಿಮಾ ಹಾಗೂ ವಿಧಾನ ಪರಿಷತ್ ಸದಸ್ಯರುಗಳಾದ ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ ಮತ್ತು ಜಿಲ್ಲೆಯ ಎಲ್ಲ ಹಿರಿಯ ಮುಖಂಡರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಸೆ. ೨೯.ರಂದು ಸೋಮವಾರ ಬೆಳಗ್ಗೆ ೧೧.೨೦ ಗಂಟೆಗೆ ಉಇSಅಔಒ ಮುಖ್ಯ ಕಚೇರಿಯಲ್ಲಿ ಪದಗ್ರಹಣ ಮಾಡಲಿದ್ದಾರೆ. ಆದ್ದರಿಂದ ತಾವೆಲ್ಲರೂ ಬಂದು ಕಾರ್ಯಕ್ರಮಕ್ಕೆ ಮೇರಗನ್ನು ತುಂಬಬೇಕೆAದು ಕೇಳಿಕೊಳ್ಳುತ್ತೇನೆ ಹಾಗು ಕಲಬುರಗಿಯಲ್ಲಿ ಅಪಾರ ಮಳೆಯಿಂದಾಗಿ ರೈತರ ಪರಿಸ್ಥಿತಿ ಹದಗೆಟ್ಟಿದ್ದು, ಸಾರ್ವಜನಿಕರು ಅನೇಕ ಅಡಚಣೆಯನ್ನು ಎದುರಿಸುತ್ತಿರುವುದರಿಂದ ಯಾವುದೇ ಆಡಂಬರದ ಆಚರಣೆಗಳನ್ನು ಮಾಡದಂತೆ ಹಾಗೂ ಹಾರ-ಹೂ ಗುಚ್ಛಗಳನ್ನು ನೀಡದಂತೆ ಪ್ರವೀಣ್ ಪಾಟೀಲ್ ಹರವಾಳ ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.