ಒಳ ಮೀಸಲಾತಿ ವರ್ಗೀಕರಣ ಶೀಘ್ರ ಅನುಷ್ಠಾನಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣ ಗೆ
ಒಳ ಮೀಸಲಾತಿ ವರ್ಗೀಕರಣ ಶೀಘ್ರ ಅನುಷ್ಠಾನಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಗೆ
ಕಲಬುರಗಿ: ಒಳಮೀಸಲಾತಿ ವರ್ಗೀಕರಣ ಶೀಘ್ರವಾಗಿ ಅನುಷ್ಠಾನಗೊಳಿಸಲು ಮತ್ತು ವಿವಿಧ ಇಲಾಖೆಯ ಸರ್ಕಾರಿ ನೇಮಕಾತಿಗಳನ್ನು ತಡೆ ಹಿಡಿಯಲು ಆಗ್ರಹಿಸಿ ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟದಿಂದ ನಗರದ ಡಾ.ಬಾಬಾಸಾಹೇಬ ಅಂಬೇಡ್ಕರ್ ವೃತ್ತ (ಜಗತ್ ವೃತ್ತ)ದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಗೆ ನಡೆಸಲಾಯಿತು.
ಸರ್ವೋಚ್ಛನ್ಯಾಯಾಲದಯದ ತೀರ್ಪಿನಂತೆ ಕೂಡಲೇ ಸುಗ್ರಿವಾಜ್ಞೆ ಮೂಲಕ ಒಳ ಮೀಸಲಾತಿಯನ್ನು ಜಾರಿಗೊಳಿಸುವುದರ ಮೂಲಕ ಮತ್ತು ವಿವಿಧ ಇಲಾಖೆಯ ಸರ್ಕಾರಿ ನೇಮಕಾತಿಗಳನ್ನು ತಡೆ ಹಿಡಿಯುವುದರ ಮೂಲಕ ಮಾದಿಗ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು. ಸಮಾಜದ ಮುಖಂಡರಾದ ಪರಮೇಶ್ವರ ಖಾನಾಪೂರ, ಶ್ಯಾಮ್ ನಾಟೇಕರ್, ಗೋಪಾಲ ಕಟ್ಟಿಮನಿ, ರಾಜು ವಾಡೇಕರ್, ನಾಗರಾಜ ಗುಂಡಗುರ್ತಿ, ರಮೇಶ ವಾಡೇಕರ್, ದಶರಥ ಕಲಗುರ್ತಿ, ಮಲ್ಲಿಕಾರ್ಜುನಜಿನ್ನಕೇರಿ, ಗೋಪಾಲಕೃಷ್ಣ, ವಿಜಯಕುಮಾರ ಅಡಕಿ, ರಂಜೀತ್ ಮೂಲಿಮನಿ, ಚಂದ್ರಕಾಂತ ನಾಟೀಕರ್, ಯುವ ಮುಖಂಡರಾದ ದತ್ತು ಭಾಸಗಿ, ರಾಜು ಕಟ್ಟಿಮನಿ, ಮಲ್ಲಿಕಾರ್ಜುನ ಎಂ.ಸರಡಗಿ, ಸಚಿನ್ ಕಟ್ಟಿಮನಿ, ಮಲ್ಲಿಕಾರ್ಜುನ ದಿನ್ನಿ, ಶ್ರೀಕಾಂತ ಮಾಶಳ, ಶ್ರೀಮಂತ ಭಂಡಾರಿ, ಶಂಭುಲಿಂಗ, ಬಾಗಪ್ಪ, ಮಲ್ಲಿಕಾರ್ಜುನ ಬಮ್ಮನಹಳ್ಳಿ, ವಿಜಯಕುಮಾರ ಅಡಕೆ, ರಾಜು ಮುಕಣ್ಣ, ಮಾರುತಿ ಮುಗಚಿ, ಮಲ್ಲಪ್ಪ ಚಿಗನೂರ, ಅಮೃತ ಸಾಗರ, ರೇವಣಸಿದ್ದ, ವಿಠ್ಠಲ್, ರವಿ ಬೇಳಮಂಗಿ, ಪ್ರಕಾಶ, ಬಂಡೇಶ, ರಂಜಿತ್, ಮನೋಹರ, ಗುಂಡಪ್ಪ, ಶಿವುಕುಮಾರ, ಹಣಮಂತ, ಅನೀಲ, ರಾಜು, ಸಚೀನ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
.