ಯಡ್ರಾಮಿ ತಾಲೂಕು ಮಾದರಿ ತಾಲೂಕ ಘೋಷಣೆ ಮಾಡಲು ಶಾಸಕರಿಗೆ ಮಹೇಶ್ ಪಾಟೀಲ್ ಕಡಕೋಳ ಆಗ್ರಹ
ಯಡ್ರಾಮಿ ತಾಲೂಕು ಮಾದರಿ ತಾಲೂಕ ಘೋಷಣೆ ಮಾಡಲು ಶಾಸಕರಿಗೆ ಮಹೇಶ್ ಪಾಟೀಲ್ ಕಡಕೋಳ ಆಗ್ರಹ
ಯಡ್ರಾಮಿ .
ಯಡ್ರಾಮಿ ತಾಲೂಕ ಘೋಷಣೆಯಾಗಿ ಹಲವಾರು ವರ್ಷಗಳಾದರೂ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಹಿಂದುಳಿದ ತಾಲೂಕವೆಂಬ ಹಣೆಪಟ್ಟಿ ಹೊತ್ತು ತಾಲೂಕ ವೆಂದರೆ ಅದುವೇ ನಮ್ಮ ಯಡ್ರಾಮಿ ತಾಲೂಕವೆಂದೆ ಹೇಳಬಹುದು. ಯಾಕೆಂದರೆ ಆಡಳಿತಾತ್ಮಕ ದೃಷ್ಟಿಯಿಂದ ಯಡ್ರಾಮಿ ತಾಲೂಕಿನಲ್ಲಿ 42 ಇಲಾಖೆಯ ಸರ್ಕಾರಿ ಉಪ ಕಚೇರಿಗಳು ಇಷ್ಟೊತ್ತಿಗಾಗಲೆ ನಿರ್ಮಾಣವಾಗಿ ಸಿಂಗಾಪುರ ಸಿಟಿಯಂತೆ ಈ ನಮ್ಮ ಯಡ್ರಾಮಿ ತಾಲೂಕ ಕಂಗೊಳಿಸಬೇಕಾಗಿತ್ತು ಆದರೆ ಈ ನಮ್ಮ ಭಾಗದ ರಾಜಕೀಯ ಮುತ್ಸದಿಗಳ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದ ಅವಳಿ ತಾಲೂಕು ವೆಂದು ಪ್ರಸಿದ್ಧಿ ಪಡೆದ ಜೇವರ್ಗಿಯ ತಾಲೂಕ ಕೂಡ ಇದಕ್ಕೆ ಹೊರತಾಗಿಲ್ಲವೆಂದು ಹೇಳಬಹುದು ಆದಷ್ಟು ಶೀಘ್ರದಲ್ಲಿ 42 ಇಲಾಖೆಯ ಸರ್ಕಾರಿ ಉಪಕಚೇರಿಗಳನ್ನು ನಿರ್ಮಾಣ ಮಾಡಬೇಕು ಅದೇ ರೀತಿಯಾಗಿ ಯಡ್ರಾಮಿ ತಾಲೂಕವನ್ನು ಕೈಗಾರಿಕಾ ಸ್ಮಾರ್ಟ್ ಸಿಟಿಯು ಅಭಿವೃದ್ಧಿಗಾಗಿ ತಾಲೂಕಿನ ಶಾಸಕರಾದ ಡಾ ಅಜಯ್ ಸಿಂಗ್ ರವರು ಕೆಕೆಆರ್‌ಡಿಬಿ ಇಲಾಖೆಯಿಂದ ಹೆಚ್ಚಿನ ಅನುದಾನ ಮಂಜೂರು ಮಾಡಬೇಕು ಯಡ್ರಾಮಿ ತಾಲೂಕುವನ್ನು ರಾಜ್ಯದಲ್ಲಿಯೆ ಮಾದರಿ ತಾಲೂಕ ವನ್ನಾಗಿ ಪರಿವರ್ತನೆ ಮಾಡಬೆಕು ಎಂದು ನಮ್ಮ ಕರ್ನಾಟಕ ಸೇನಾ ಯಡ್ರಾಮಿ ಅಧ್ಯಕ್ಷರಾದ ಮಹೇಶ್ ಪಾಟೀಲ್ ಕಡಕೋಳ ಅವರು ತಿಳಿಸಿದ್ದಾರೆ
̊ವರದಿ ಜೆಟ್ಟೆಪ್ಪ ಎಸ್ ಪೂಜಾರಿ