ಸಿದ್ದಲಿಂಗಯ್ಯಸ್ವಾಮಿ ಕೋಡಗಿಮಠ ಮಲಕೂಡ
ಸಿದ್ಧಲಿಂಗಯ್ಯಸ್ವಾಮಿ ಕೋಡಗಿಮಠ ಮಲಕೂಡ
ಶ್ರೀ ಸಿದ್ದಲಿಂಗಯ್ಯ ಸ್ವಾಮಿ ಕೋಡಗಿಮಠ ಅವರು ಚಿತ್ತಾಪುರ ತಾಲೂಕಿನ ಮಲಕೂಡ ಗ್ರಾಮದ ಸುಸಂಸ್ಕೃತ ಕೋಡಗಿಮಠ ಮನೆತನದಲ್ಲಿ ಶ್ರೀ ಸೋಮಯ್ಯ ಹಾಗೂ ಶ್ರೀಮತಿ ಗೌರಮ್ಮ ದಂಪತಿಗಳ ಸುಪುತ್ರರಾಗಿ 27 ಡಿಸೆಂಬರ್ 1967 ರಲ್ಲಿ ಜನಿಸಿದರು.
ಸಿದ್ಧಲಿಂಗಯ್ಯನವರು ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ದಂಡೋತಿ, ಹಾಗೂ ರಾಷ್ಟ್ರಕೂಟರ ರಾಜಧಾನಿ ಮಳಖೇಡನಲ್ಲಿ ಪ್ರೌಢ ಶಿಕ್ಷಣ, ಕಲಬುರಗಿಯಲ್ಲಿ ಪಿಯುಸಿ ಶಿಕ್ಷಣ ಮುಗಿಸಿದರು. ಚಿಕ್ಕ ವಯಸ್ಸಿನಲ್ಲಿ ಹವ್ಯಾಸಿ ಬರಹಗಾರರಾಗಿ ನಾಟಕಕಾರರಾಗಿ ಆಸಕ್ತಿ ಹೊಂದಿದವರು.ಇವರು ರಂಗಭೂಮಿ ಕಲೆ ಮತ್ತು ಕಲಾವಿದರ ಮೇಲಿನ ಅಪಾರ ಗೌರವ, ಮಾನವೀಯ ಮೌಲ್ಯ, ಸಾಮಾಜಿಕ ಕಳಕಳಿಯೊಂದಿಗೆ ತಮ್ಮ ಗಟ್ಟಿ ಹಾಗೂ ತಮ್ಮ ವಿಶಿಷ್ಠ ಸಾಹಿತ್ಯದ ಮೂಲಕ ಸಮಾಜದಲ್ಲಿನ ಓರೆ ಕೋರೆಗಳನ್ನು ತಿದ್ದುವದ ನಿಟ್ಟಿನಲ್ಲಿ ನಾಗಾವಿ ನಾಡಿನಲ್ಲಿ ಅಷ್ಟೇ ಅಲ್ಲದೇ ಇಡೀ ಕರ್ನಾಟಕದ ರಂಗಭೂಮಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿ, ರಂಗಭೂಮಿಯ ಘನತೆ, ಗೌರವ ಧಾರೆ: ಹೆಚ್ಚಿಸಿ ರಂಗಲೋಕದಲ್ಲಿ ಕಳೆದ 35 ವರ್ಷಗಳಿಂದ ಮಲಕೂಡ ಕವಿ ಗಳೆಂದೇ ಪ್ರಖ್ಯಾತಿ ಪಡೆದವರು ಶ್ರೀಯುತ ಸಿದ್ದಲಿಂಗಯ್ಯ ಸ್ವಾಮಿ ಕೋಡಗಿಮಠ ಮಲಕೂಡ ಅವರು. ನಾಟಕ ಸಾಹಿತ್ಯಕ್ಕೆ ಹಾಗೂ ರಂಗಭೂಮಿಗೆ ಅದಮ್ಯ ಶಕ್ತಿಯಾಗಿದ್ದಾರೆ.
ಇವರು ರಚಿಸಿದ ಕೃತಿಗಳು,
ಹೆಣ್ಣು ಆಟದ ಗೊಂಬೆಯಲ್ಲ ,ಅಹಂಕಾರದ ಅಂತ್ಯ ,ಶೀಲ ಸುಟ್ಟರು ನೀತಿ ಬಿಡಲಿಲ್ಲ,ತ್ಯಾಗದ ತೊಟ್ಟಿಲು ,ಗೆಲುವು ಸಾಧಿಸಿದೆ ಗರತಿ ,ಸೋಲೊಪ್ಪದ ಸಾಧ್ವಿ ,ನೆಮ್ಮದಿಯ ನೆಲೆ ,ಯಾರದೋ ತಪ್ಪು ಯಾರಿಗೋ ಶಿಕ್ಷೆ ,ಕಲಿಯುಗದ ಕಲ್ಪವೃಕ್ಷ ,ವಿಶ್ವಗಂಗಾ ,ಭೀಷ್ಮ ಬ್ರಹ್ಮಚಾರಿ ಹಲವಾರು ಕೃತಿಗಳು ಕೃಷಿ ಗೈದಿದ್ದಾರೆ
ಇವರು ಪತ್ರಕರ್ತರಾಗಿ, ಸಾಹಿತಿಯಾಗಿ, ನಾಟಕಕಾರರಾಗಿ ರೂಪುಗೊಂಡಿರುವ ಶ್ರೀ ಸಿದ್ದಲಿಂಗಯ್ಯಸ್ವಾಮಿ ಕೋಡಗಿಮಠ ಅವರು ಜನಜಾಗೃತಿಗಾಗಿ ಸಮಾಜದ ವ್ಯವಸ್ಥೆಯ ಮೇಲೆ ಕಣ್ಣಿಡುವ ವಿಶೇಷ ಪ್ರಯೋಗಗಳನ್ನು ಮಾಡಿದ್ದಾರೆ. ನಾಟಕಗಳ ಮೂಲಕ ಕನ್ನಡಗರಿಗೆ ಕಣ್ಮಣಿಯಾಗಿ ಚಿರಪರಿಚಿತರಾಗಿದ್ದಾರೆ. ಹೀಗೆ ಇವರ ಸೇವೆ ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ಸಾಗಲಿ ಇವರಿಗೆ ಇನ್ನೂ ಅನೇಕ ಹುದ್ದೆಗಳು ದೊರಕಲಿ, ಎಂದು ಹಾರೈಸೋಣ.