ಸರಕಾರಿ ಮಹಾವಿದ್ಯಾಲಯದ ಜಮೀನು ಖಾಸಗಿಯವರಿಗೆ ಪರಭಾರೆ ಮಾಡಿದ್ದು ಖಂಡಿನೀಯ.

ಸರಕಾರಿ ಮಹಾವಿದ್ಯಾಲಯದ ಜಮೀನು ಖಾಸಗಿಯವರಿಗೆ ಪರಭಾರೆ ಮಾಡಿದ್ದು ಖಂಡಿನೀಯ.

ಸರಕಾರಿ ಮಹಾವಿದ್ಯಾಲಯದ ಜಮೀನು ಖಾಸಗಿಯವರಿಗೆ ಪರಭಾರೆ ಮಾಡಿದ್ದು ಖಂಡಿನೀಯ.

ಕಲಬುರಗಿ : ಕಲಬುರಗಿ ಜಿಲ್ಲೆಯು ಪ್ರತಿ ಬಾರಿ ಪರೀಕ್ಷಾ ಫಲಿತಾಂಶದಲ್ಲಿ ಅತ್ಯಂತ ಕೊನೆಯ ಸ್ಥಾನದಲ್ಲಿ ಬರುವುದು ನೋಡುತ್ತಿರುವಿರಿ. ಶೈಕ್ಷಣಿಕ ಗುಣಮಟ್ಟ ಎತ್ತರಿಸಿ ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಕ್ರಮವಹಿಸಬೇಕಾದ ಈ ಸಂದರ್ಭದಲ್ಲಿ ಸರಕಾರವೇ ಮಹಾವಿದ್ಯಾಲಯಕ್ಕೆ ಸಂಬಂಧಪಟ್ಟ ಜಾಗವನ್ನು ಖಾಸಗಿ ಸಂಘಕ್ಕೆ ಪರಭಾರೆ ಮಾಡುವ ನಿರ್ಣಯ ಮಾಡಿದ್ದು.ಸರ್ಕಾರಕ್ಕೆ ವಿರೋಧಿಸುತ್ತೇವೆ ಎಂದು ಭಾರತ್ ವಿದ್ಯಾರ್ಥಿ ಫೆಡರೇಷನ್ sfi ಕಲ್ಬುರ್ಗಿ ಜಿಲ್ಲಾ ಸಮಿತಿ ಸಂಚಾಲಕಿ ಸುಜಾತಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳ ಸವಾರ್ಂಗೀಣ ಅಭಿವೃದ್ಧಿಯಲ್ಲಿ ವಿಶಾಲವಾದ ಕ್ರೀಡಾಂಗಣ, ವಾಚನಾಲಯ, ಪ್ರಯೋಗಾಲಯಗಳು ಮತ್ತು ಮಕ್ಕಳು ಏಕಾಗ್ರತೆಯಿಂದ ಅಧ್ಯಯನ ಮಾಡಲು ವಿಶಾಲವಾದ ಓದು ಕೋಣೆಗಳು, ಕಾರ್ಯಕ್ರಮ ನಡೆಸಲು ಸ್ಥಳಗಳು ಬೇಕಿಲ್ಲವವೇ ಎಂದು ಪ್ರಶ್ನಿಸಿದರು. 

 ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹವುಗಳಿಗಾಗಿ ವ್ಯವಸ್ಥೆ ಇರುವ ಸಾಧ್ಯತೆಗಳಿರುತ್ತವೆ.

ಆದರೆ ಬಡವರ ಮಕ್ಕಳು ಬರುವುದು ಸರಕಾರಿ ಶಿಕ್ಷಣ ಕೇಂದ್ರಗಳಿಗೆ. ಕಲಬುರಗಿ ನಗರದಲ್ಲಿ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಐದು ಸಾವಿರದಷ್ಟು ವಿದ್ಯಾರ್ಥಿಗಳು ಓದುತಿದ್ದಾರೆ .ಈ ಕಾಲೇಜಿನ ವ್ಯಾಪ್ತಿಗೆ ಸೇರಿದ್ದ 3 ಎಕರೆ 7 ಗುಂಟೆ ಜಾಗವನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ ಕಲಬುರಗಿ ಶಾಖೆಗೆ ಪರಭಾರೆ ಮಾಡಲು ಸಚಿವ ಸಂಪುಟ ತೀರ್ಮಾನ ಮಾಡಿದ್ದು ತೀವ್ರ ಖಂಡನಾರ್ಹವಾದದ್ದಾಗಿದೆ. ಎಂದು ದೂರಿದರು 

  ಸರಕಾರಿ ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸುವ ಬದಲಿಗೆ ಅಲ್ಲಿಂದಲೇ ಜಾಗ ಕಿತ್ತುಕೊಳ್ಳುವ ಸರಕಾರದ ನಿಲುವು ಶಿಕ್ಷಣ ವಿರೋಧಿ ನೆಲೆಯಿಂದ ಕೂಡಿದೆ. ಇದನ್ನು ಎಸ್ ಎಫ್ ಐ ತೀವ್ರವಾಗಿ ಖಂಡಿಸುತ್ತದೆ. ಮತ್ತು ಕೂಡಲೇ ಈ ಆದೇಶವನ್ನು ರದ್ದು ಮಾಡಬೇಕು. ಮತ್ತು ಸರಕಾರಿ ಮಹಾವಿದ್ಯಾಲಯದ ಶೈಕ್ಷಣಿಕ ಉನ್ನತಿಗಾಗಿ ಆ ಜಾಗವನ್ನು ಬಳಸಲು ಯೋಜನೆ ರೂಪಿಸಬೇಕೆಂದರು. ಒಂದು ವೇಳೆ

ಸರಕಾರವು ತನ್ನ ನಿಲುವಿನಿಂದ ಹಿಂದೆ ಸರಿಯದಿದ್ದಲ್ಲಿ ಹೋರಾಟವು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಭರತ್ ಕುಮಾರ್ ಅನ್ವರ್, ಅಭಿಷೇಕ್ ಮೇತ್ರಿ, ಕುಶಲ್ ರಾಠೋಡ್, ಯುವರಾಜ್ ರಾಠೋಡ್, ಅಣ್ಣಾರಾಯ ಪಾಟೀಲ್, ಚಂದ್ರಕಾಂತ್ ರಾಠೋಡ್ ಉಪಸ್ಥಿತರಿದ್ದರು