ಪಹಣಿ ಸಮಸ್ಯೆ ಬಗೆಹರಿಸದಿದ್ದರೆ ನಮ್ಮ ಗ್ರಾಮಗಳನ್ನು ತೆಲಂಗಾಣ ರಾಜ್ಯಕ್ಕೆ ಸೇರಿಸಿ,ಇಲ್ಲದಿದ್ದರೆ ವಿಷ ಕೊಟ್ಟು ಸಾಯಿಸಿ - ಶಿವಪುರ ಮತ್ತು ಗೋನಾಲ ರೈತರ ಆಗ್ರಹ

ಪಹಣಿ ಸಮಸ್ಯೆ  ಬಗೆಹರಿಸದಿದ್ದರೆ ನಮ್ಮ ಗ್ರಾಮಗಳನ್ನು ತೆಲಂಗಾಣ ರಾಜ್ಯಕ್ಕೆ ಸೇರಿಸಿ,ಇಲ್ಲದಿದ್ದರೆ ವಿಷ ಕೊಟ್ಟು ಸಾಯಿಸಿ - ಶಿವಪುರ ಮತ್ತು ಗೋನಾಲ ರೈತರ ಆಗ್ರಹ

(ವಡಗೇರಾ ತಾಲೂಕ ವರದಿಗಾರರು : ಮಹಾದೇವಪ್ಪ ಗಂಗಣ್ಣೋರ್)

ಪಹಣಿ ಸಮಸ್ಯೆ ಬಗೆಹರಿಸದಿದ್ದರೆ ನಮ್ಮ ಗ್ರಾಮಗಳನ್ನು ತೆಲಂಗಾಣ ರಾಜ್ಯಕ್ಕೆ ಸೇರಿಸಿ,ಇಲ್ಲದಿದ್ದರೆ ವಿಷ ಕೊಟ್ಟು ಸಾಯಿಸಿ - ಶಿವಪುರ ಮತ್ತು ಗೋನಾಲ ರೈತರ ಆಗ್ರಹ :

 ಯಾದಗಿರ/ವಡಗೇರಾ : ತಾಲೂಕಿನ ಶಿವಪುರ ಮತ್ತು ಗೋನಾಲ್ ಗ್ರಾಮಸ್ಥರು ಮಾನ್ಯ ಜಿಲ್ಲಧಿಕಾರಿಗಳು ಯಾದಗಿರಿ ರವರಿಗೆ ಸುಮಾರು 65 ವರ್ಷಗಳಿಂದ 825 ಅರ್ಜಿಗಳು ಕೊಟ್ಟರು ಈ ಗ್ರಾಮಗಳ ರೈತರ ಆಕಾರ್ ಬಂದಿ ಟಿಪ್ಪಣಿ ,ಪಹಣಿ, ಹೊಂದಾಣಿಕೆ ಆಗಿರುವುದಿಲ್ಲ. ಇಲ್ಲಿಯವರೆಗೂ ಅಧಿಕಾರಿಗಳಿಗೆ ಎಷ್ಟೋ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನ ವಾಗಿಲ್ಲ. ಮಾನ್ಯ ಸಹಾಯಕ ಆಯುಕ್ತರು ಯಾದಗಿರ ರವರು ನಮ್ಮ ಗ್ರಾಮದ ವಿಶೇಷ ಅಧಿಕಾರಿಗಳಾಗಿದ್ದು ಇವರನ್ನು ಬದಲಾವಣೆ ಮಾಡಿ ಮಾನ್ಯ ತಹಸೀಲ್ದಾರರು ವಡಗೇರಾ ಇವರನ್ನು ನೇಮಿಸಬೇಕು. ಇಲ್ಲವಾದರೆ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಾಜ್ಯ ಹೆದ್ದಾರಿ ತಡೆದು ದಿನಾಂಕ : 25/09/2024 ರಿಂದ 893 ರೈತರಿಂದ ಅನಿರ್ಧಿಷ್ಟ ಮುಷ್ಕರ ನಡೆಸಲಾಗುವುದು. ಒಂದು ವೇಳೆ ಪಹಣಿ ಸಮಸ್ಯೆ ಪರಿಹರಿಸದಿದ್ದರೆ ನಮ್ಮ ಗ್ರಾಮಗಳನ್ನು ತೆಲಂಗಾಣ ರಾಜ್ಯಕ್ಕೆ ಸೇರಿಸಿ ಅದು ನಿಮ್ಮಿಂದ ಆಗದಿದ್ದರೆ ನಮಗೆ ವಿಷ ಕೊಟ್ಟು ಸಾಯಿಸಿ ಎಂದೂ ಸರಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ರೈತರು ಅರ್ಜಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾಗರಾಜ,ನರಸಪ್ಪ ಮಲ್ಲಿಪಲ್ಲಿ, ಮರೆಪ್ಪ ಹಂಪಯ್ಯನ್ನರ, ಮಲ್ಲು ಅಂಗಡಿ ,ಸೈದಪ್ಪ ರಾಮದುರ್ಗ, ಬಾಬು ಮಲ್ಲಿಪಾಲಿ, ಊರಿನ ಇತರರು ಇದ್ದರು.