ಪೊಲೀಸ್ ಠಾಣೆಗಳಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತನೆ ಕಡ್ಡಾಯ – ಮಾನವ ಹಕ್ಕು ಆಯೋಗದ ಆದೇಶದ ಹಿನ್ನೆಲೆಯಲ್ಲಿ ನಿರ್ದೇಶನ

ಬೆಂಗಳೂರು, ಮೇ 15:ಮಾನ್ಯ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶದ ಹಿನ್ನೆಲೆ ಮೇಲೆ, ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ಜಾರಿಗೆ ಬಂದಿದೆ. ಈಗಿನಿಂದ ಸಾರ್ವಜನಿಕರು ಪೊಲೀಸ್ ಠಾಣೆಗೆ ಬೇಟಿ ನೀಡಿದಾಗ, ಅವರೊಂದಿಗೆ ಶಿಷ್ಟಚರಣೆ ಹಾಗೂ ಸೌಜನ್ಯದಿಂದ ವರ್ತಿಸುವುದು ಕಟ್ಟುನಿಟ್ಟಾಗಿ ಕಡ್ಡಾಯಗೊಳಿಸಲಾಗಿದೆ.

ಆಯೋಗದ ಆದೇಶ ಸಂಖ್ಯೆ 2313/10/31/2023(ಬಿ-2), ದಿನಾಂಕ 05.04.2025ರಲ್ಲಿ ನೀಡಲ್ಪಟ್ಟ ಸೂಚನೆಯಂತೆ, ಯಾವುದೇ ಸಾರ್ವಜನಿಕರ ಮಾನವ ಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಪೊಲೀಸ್ ಇಲಾಖೆಯ ಪ್ರಾಥಮಿಕ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾ ನಿರೀಕ್ಷಕರ ಪರವಾಗಿ ದೇವಜೋತಿ ರೇ, ಐಪಿಎಸ್ ಅವರು, ಎಲ್ಲಾ ಪೊಲೀಸ್ ಆಯುಕ್ತರು, ವಲಯಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು (ಕೆ.ಜಿ.ಎಫ್ ಮತ್ತು ರೈಲ್ವೇಸ್ ಸೇರಿದಂತೆ) ಅವರಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ.

“ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಬರುವಾಗ, ಅವರೊಂದಿಗೆ ಅನುಚಿತವಾಗಿ ವರ್ತಿಸದಂತೆ, ಗೌರವಪೂರ್ವಕವಾಗಿ ಹಾಗೂ ಮಾನವೀಯ ದೃಷ್ಟಿಕೋಣದಿಂದ ನಡೆದುಕೊಳ್ಳಬೇಕು” ಎಂದು ಆದೇಶದಲ್ಲಿದೆ.

ಈ ಹೊಸ ನಿರ್ದೇಶನವು ಸಾರ್ವಜನಿಕರ ಮೇಲೆ ಪೊಲೀಸ್ ಇಲಾಖೆ ಭರವಸೆ ಮೂಡಿಸಲು ಹಾಗೂ ನೈತಿಕ ಹಾಗೂ ಮಾನವೀಯ ಮೌಲ್ಯಗಳಿಗೆ ಅನುಗುಣವಾಗಿ ಕಾನೂನು ಅಳವಡಿಸಲು ಸಹಕಾರಿ ಆಗಲಿದೆ ಎಂಬ ನಿರೀಕ್ಷೆಯಿದೆ.