ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ-ಡಾ. ಜಯದೇವಿ ಗಾಯಕವಾಡ
ರಾಯಚೂರಿನಲ್ಲಿ ನಡೆಯಲಿರುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ-ಡಾ. ಜಯದೇವಿ ಗಾಯಕವಾಡ
ಆಧುನಿಕ ಸಾಹಿತ್ಯದ ಹೊಸ ಪ್ರಕಾರಗಳ ಪ್ರಯೋಗಶೀಲ ಕವಯತ್ರಿ: ಡಾ.ಜಯದೇವಿ ಗಾಯಕವಾಡ*
ಮೂಲತಃ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದವರು. ರಾಜೇಶ್ವರದಲ್ಲಿಯೇ ಪ್ರಾಥಮಿಕ ಶಾಲೆಯಿಂದ ಪಿಯುಸಿವರೆಗೆ ಕಲಿತು, ಹುಮ್ನಾಬಾದಲ್ಲಿ ಬಿ.ಎ. ಪದವಿ ಕಲ್ಬುರ್ಗಿಯ ಗುಲಬರ್ಗಾದ ವಿಶ್ವವಿದ್ಯಾಲಯದಲ್ಲಿಯೇ ಪ್ರಥಮ ದರ್ಜೆಯಲ್ಲಿ ಎಂ.ಎ.ಪದವಿ ಪಡೆದರು. ಎಂಫಿಲ್., ಪಿಎಚ್.ಡಿ., ಬಿ.ಇಡಿಯನ್ನು ಚಾಂದ ಬೀಬಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪಡೆದರು. ಮೊದಲು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಮೇಲ್ವಿಚಾರಕರಾದರು 2002 ರಿಂದ 2009 ರವರೆಗೆ.
ನಂತರ 2009 ರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಟಗುಪ್ಪ ,ಹುಮ್ನಾಬಾದನಲ್ಲಿ ಸೇವೆ 2024ರಿಂದ ಯಾದಗಿರ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಸ್ನಾತಕೋತ್ತರ ಕೇಂದ್ರ ಮತ್ತು ಸಂಶೋಧನಾ ವಿಬಾಗ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉತ್ತಮ ಬೋಧಕರಾಗಿ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಕರಾಗಿದ್ದಾರೆ. ಬಾಲ್ಯದಿಂದಲೂ ಬುದ್ಧ, ಬಸವ, ಅಂಬೇಡ್ಕರ್, ಬಿ. ಶ್ಯಾಮಸುಂದರ ಬರಹ ಮತ್ತು ಚಿಂತನೆಗಳಿಂದ ಪ್ರಭಾವಿತರಾದ ಇವರು ಪ್ರಾಥಮಿಕ 6ನೇ ತರಗತಿಯಿಂದ ಭಾಷಣ ಮಾಡಿತ್ತಲೇ ಮತ್ತು ಪ್ರಥಮ ಸ್ಥಾನ ಹೊಂದಿದ್ದು ಅವರ ಭಾಷಣದ ಕುರಿತು ಆಸಕ್ತಿಯನ್ನು ಹೇಳುತ್ತದೆ.
ಇವರು ತಮ್ಮ ಪ್ರಮಾಣಿಕವಾದ ಬರಹ ಮತ್ತು ಚಿಂತನೆಗಳ ಮೂಲಕ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
ಪ್ರಮುಖವಾಗಿ ಹೇಗೆ ಹೇಳಲಿ, ನಾನು ಮರುಭೂಮಿ ಮಾಡದಿರಿ, ಮಣ್ಣು ಯಾವ ಕುಲ?, ಕಪ್ಪು ಹುಡುಗಿ ಹಾಡು, ಇವು ಪ್ರಮುಖ ಕವನ ಸಂಕಲನಗಳಾಗಿವೆ.
2008ರಲ್ಲಿ ಗಜಲ್ ಬರೆಯುವುದರ ಮೂಲಕ ಗಜಲ್ ಬರೆದ ಪ್ರಥಮ ದಲಿತ ಕವಿಯತ್ರಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
ಇವರ ಪ್ರಮುಖ ಗಜಲ್ ಗಳು 500 ಗಜಲ್. ಮೂವತ್ತೊಂದು ಗಜಲ್ಗಳು, ಪ್ರಜ್ಞೆ, ಶೀಲ, ಕರುಣೆಯ ಗಜಲ್, ವೈಶಾಖ ಪೂರ್ಣಿಮೆ ಗಜಲ್, ಕಾರುಣ್ಯದ ಗಜಲ್, ಅವರ ನಾಲ್ಕು ಅಪರೂಪದ ಸಮಾಜಮುಖಿ ಚಿಂತನೆಗಳು ಇರುವ ಗಜಲಗಳಾಗಿವೆ. ಬೋಧಿವೃಕ್ಷದ ಹಾಯ್ಕುಗಳು 501 ಹಾಯಕಗಳು ಬರೆದಿರುವ ಮೊದಲಿಗರಾಗಿದ್ದಾರೆ.
ಸಾಕಿ ಕೇಳಿದ ರುಬಾಯಿಗಳು,. ಆಧುನಿಕ ವಚನ 12ನೇ ಶತಮಾನದ ಶರಣರ ವಚನಗಳಂತೆ ಆಧುನಿಕ ಕವಿಗಳು ವಚನ ಬರೆದವರ ಸಾಲಿಗೆ ಜಯದೇವಿ ಗಾಯಕವಾಡ ಅವರು ಸೇರುತ್ತಾರೆ. ಬಯಲ ಬೆಳಕಿನ ವಚನಗಳು ಇವರ ವೈಚಾರಿಕ ಹಾಗೂ ನೈತಿಕ ಮೌಲ್ಯಗಳನ್ನು ಒಳಗೊಂಡಿರುವ ವಚನಗಳಾಗಿವೆ.ಬಯಲ ಬೆಳಕಿನ ಸಿದ್ಧಾರ್ಥ ವಚನಾಂಕಿತ,
ಜಯಾ, ಗಜಲ್ ಕಾವ್ಯನಾಮ. ತಾಂಕಾ ಜಪಾನಿನ ಹೈಕುಗಳಂತೆ ತಾಂಕಾ 500 ಬರೆದು ಪ್ರಸಿದ್ಧರಾಗಿದ್ದಾರೆ. ಹೋರಾಟದ ಹಾಡುಗಳು ದಲಿತ -ಬಂಡಾಯದ ಸಂದರ್ಭದಲ್ಲಿ ಹೊರಬಂದ ಹಾಡುಗಳನ್ನು ಬಹುಪಾಲು ಕವಿಗಳೆ ರಚಿಸಿದ್ದಾರೆ ಎನ್ನುವ ವಿಚಾರವಿದೆ. ಆದರೆ ಮಹಿಳೆಯರು ಅಲ್ಲಲ್ಲಿ ಹಾಡು ಬರೆದವರು ಇದ್ದಾರೆ. ಆದರೆ ಒಂದು ನೂರು ಹಾಡುಗಳನ್ನು ಬರೆದ ಏಕೈಕ ಕವಯತ್ರಿ ಆಗಿದ್ದಾರೆ. ಇವರ ಕೆಂಪು ನೆಲದ ಹೋರಾಟ ಹಾಡುಗಳು ಈಗಾಗಲೇ ಜನಪ್ರಿಯವಾಗಿದೆ. ಜೊತೆಗೆ 45ಕ್ಕೂ ಹೆಚ್ಚು ವಿದ್ವಾಂಸರ ಈ ಹಾಡುಗಳ ಕುರಿತು ವಿಮರ್ಶೆ ಬರೆದಿದ್ದಾರೆ. ಈ ಹಾಡುಗಳನ್ನು ಹಾಡುಗಾರರು ಹಾಡಿ ಸಮಾಜಕ್ಕೆ ತಲುಪಿಸಬೇಕಾಗಿದೆ.
ಸಂಶೋಧನೆಯಲ್ಲಿ ಬೌದ್ಧ ಸಾಹಿತ್ಯದ ಒಲವು ಹೊಂದಿ ಪ್ರಾಚೀನ ಬೌದ್ಧ ವಿದ್ಯಾಕೇಂದ್ರ ಸನ್ನತಿ ಎಂಬ ಸಂಶೋಧನಾ ಹೊಸ ನೆಲೆಗಳಲ್ಲಿ ನೋಡಿದ್ದಾರೆ. ಹೈದರಾಬಾದ ಕರ್ನಾಟಕ ವಿಮೋಚನೆ ಮತ್ತು ಕನ್ನಡ ಸಾಹಿತ್ಯ ಎಂಬ ಸಂಶೋಧನೆ 1724 ರಿಂದ 1948 ರವರೆಗೆ ಆದ ವಿಮೋಚನಾ ಚಳುವಳಿ ಇತಿಹಾಸ, ಚರಿತ್ರೆ ಪ್ರಭಾವ ಪ್ರೇರಣೆ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಬಂದ ಜನಪದ, ಕಾವ್ಯ, ಕಥೆ, ಕಾದಂಬರಿ, ನಾಟಕ, ಲೇಖನ ಮೊದಲಾದ ಸಾಹಿತ್ಯವನ್ನು ಆಯ್ದುಕೊಂಡು ವಿಮೋಚನೆ ಸಾಹಿತ್ಯ ಅಧ್ಯಯನ ಮಾಡಿದ್ದಾರೆ. ಅಲ್ಲದೆ ಪದ್ಯದಷ್ಟೇ ಗದ್ಯದಲ್ಲಿಯೂ ಕೂಡ ಕೃಷಿ ಮಾಡಿದ್ದಾರೆ. ವಚನ ಸಾಹಿತ್ಯ ವಚನದ ಪ್ರಗತಿಪರ ಆಲೋಚನೆಯಿಂದ ಬಸವಣ್ಣ -ಅಂಬೇಡ್ಕರ್ ತೌಲನಿಕ ಅಧ್ಯಯನ ಮಾಡಿ ಇಬ್ಬರ ಚಿಂತಕರ ಜೀವನ ಸಾಧನೆ, ಸಾಮಾಜಿಕ, ಧಾರ್ಮಿಕ, ಮಹಿಳಾ, ಸಾಂಸ್ಕೃತಿಕ ಚಿಂತನೆಗಳನ್ನ ಮುಖಾಮುಖಿಗಳಿಸಿದ್ದಾರೆ. ವಚನಕಾರ್ತಿಯರ ಸಾಕ್ಷಿ ಪ್ರಜ್ಞೆ ಎಂಬ ಕೃತಿಯಲ್ಲಿ 33 ವಚನಕಾರ್ತಿಯರ ವಚನಗಳ ಹಾಗೂ ಅವರ ಸಾಧನೆ ದಾಖಲಿಸುವ ಅಮೂಲ್ಯವಾದ ಕೃತಿ ಇವರದ್ದಾಗಿದೆ.
ಪುಣ್ಯ ಸ್ತ್ರೀ ಕಾಳವ್ವೆಯ ಹನ್ನೆರಡು ವಚನಗಳು ಆಕರವಾಗಿ ಬಳಸಿಕೊಂಡು ಒಂದು ಕೃತಿ ರಚಿಸಿದ್ದು ಇವರ ಬರವಣಿಗೆ ಶಕ್ತಿ ಹೇಳುತ್ತದೆ. ಉರಿಲಿಂಗಪೆದ್ದಿ ಮತ್ತು ಕಾಳವ್ವೆ ಡಾ. ಗವಿಸಿದ್ದಪ್ಪ ಪಾಟೀಲ ಅವರೊಂದಿಗೆ ಸಂಪಾದಿಸಿದ್ದಾರೆ.
ಇವರ ಪ್ರಮುಖವಾದ ಕೆಲವು ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ರಾಣಿ ಚೆನ್ನಮ್ಮ, ಅಬ್ದುಲ್ ಕಲಾಂ, ರಮಾಬಾಯಿ ಅಂಬೇಡ್ಕರ್ ಪ್ರಮುಖವಾಗಿವೆ.
ವಿಮರ್ಶಾ ಲೇಖನ ಸಂಕಲನಗಳು: ಹೈದರಾಬಾದ ಕರ್ನಾಟಕ ಮಹಿಳಾ ಸಾಹಿತ್ಯ, ಸಾಹಿತ್ಯ ಸಂಕ್ರಮಣ, ಜಾಗತೀಕರಣ ಮಹಿಳೆ ಮತ್ತು ಸವಾಲುಗಳು, ಬಯಲು ನಾಡಿನ ಬೆಡಗು, ಲೋಕ ಕಂಡ ಬೆಳಕು, ಸಾಹಿತ್ಯ ಸೃಷ್ಟಿ, ಮೊದಲಾದ ಕೃತಿಗಳನ್ನು ಹೊರ ತಂದಿದ್ದಾರೆ. ವೈಚಾರಿಕ ಬರವಣಿಗೆಯ ಚಿಂತಕರು ಮತ್ತು ಮಹಿಳೆ ಎಂಬ ಕೃತಿಯಲ್ಲಿ ಬುದ್ಧ , ಬಸವ, ವಚನಕಾರ್ತಿಯರು, ಸಾವಿತ್ರಿಬಾಯಿ ಪುಲೆ, ಶಾಹು ಮಹಾರಾಜ, ರಮಾಬಾಯಿ ಅಂಬೇಡ್ಕರ್ ಮಹಿಳಾ ಚಿಂತನೆಗಳನ್ನು ವಿಮರ್ಶಾತ್ಮಕವಾಗಿ ಹಿಡಿದಿಟ್ಟಿದ್ದಾರೆ.
ಮುಂದುವರೆದು ಕನ್ನಡ ಗಜಲ್ ಸಂಗ್ರಹ, ಮಧ್ಯಕಾಲಿನ ಕನ್ನಡ ಸಾಹಿತ್ಯ, ವೈಚಾರಿಕ ಲೇಖನಗಳ ಸಂಕಲನ, ಕಲಾ ಕಣಜ ನಾಲ್ಕು ಪಠ್ಯ ಸಂಪಾದನೆ ಮಾಡಿದ್ದಾರೆ. ಯಾಜ್ಞಸೇನಿಯ ಆತ್ಮ ಕಥನ ಕಾದಂಬರಿ ಬಿ.ಎ. ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು.
ಇವರ ಪ್ರಮುಖ ಸಂಪಾದನೆಗಳು ಮಕ್ಕಳ ಸಾಹಿತ್ಯ, ದಲಿತ ನಾಟಕಗಳು, ಮೊಹರಂ ಹಾಡುಗಳು, ಸೂಗಯ್ಯ ಹಿರೇಮಠ ವಾಚಿಕೆ, ಎಂಬ ಐದು ಸಂಪಾದನೆಗಳಾಗಿವೆ. ಹೀಗೆ ಕಾವ್ಯ, ಗಜಲ್, ಹಾಯಿಕು, ತಾಂಕಾ, ಆಧುನಿಕ ವಚನ, ರುಬಾಯಿಗಳು,ಹೋರಾಟದ ಹಾಡುಗಳು, ಸಂಶೋಧನೆ, ವಚನ ಸಾಹಿತ್ಯ ಚಿಂತನೆ, ಜೀವನ ಚರಿತ್ರೆ, ವ್ಯಕ್ತಿ ಚಿತ್ರಣ, ಕಾದಂಬರಿ, ಕಥೆ, ಪಠ್ಯಸಂಪಾದನೆ, ಸಂಪಾದನೆ ಸೇರಿ ನಲವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.
ಇವರ ಸಾಹಿತ್ಯ ಜೀವನ ಕಾರುಣ್ಯತೆ, ಬುದ್ಧ, ಬಸವ, ಅಂಬೇಡ್ಕರ ಹಾಗೂ ಸಂವಿಧಾನದ ಆಶಯದ ಜೀವಪರತೆಯಿಂದ ಕೂಡಿದ್ದಾಗಿವೆ. ತಾಂಕಾ, ಹಾಯಿಕು, ಗಜಲ್ ಗಳ ಬರೆದ ಮೊದಲ ಕವಿತ್ರಿ ಎಂಬ ಹೆಸರು ಕೂಡ ಇವರದ್ದಾಗಿದೆ. ಹೀಗೆ ಸಾಹಿತ್ಯದಲ್ಲಿ ಹಲವಾರು ಹೊಸ ಪ್ರಯತ್ನಗಳನ್ನು ಮಾಡುವುದರ ಮೂಲಕ ಹೊಸ ಪ್ರಕಾರದ ಸಾಹಿತ್ಯ ಒದಗಿಸುವ ಕಾರ್ಯವನ್ನು ಮಾಡಿದ್ದಾರೆ.
ಇಷ್ಟೇ ಅಲ್ಲದೆ ನಾಡಿನ ಹಲವಾರು ಸಮ್ಮೇಳನ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಮೌಲಿಕ ಪ್ರಬಂಧಗಳನ್ನು ಮಂಡನೆ ಮಾಡಿದ್ದಾರೆ. ರಾಜ್ಯದ ಹಲವಾರು ಗ್ರಾಮ, ಹಳ್ಳಿ ಮತ್ತು ನಗರಗಳಿಗೆ ಹೋಗಿ ತಮ್ಮದೇ ಆದ ವೈಚಾರಿಕ ಚಿಂತನೆಗಳ ಮೂಲಕ ಬುದ್ಧ - ಬಸವ -ಅಂಬೇಡ್ಕರ- ಶಾಮಸುಂದರ, ಜ್ಯೋತಿಬಾ ಪುಲೆ, ಸಾವಿತ್ರಿ ಬಾಯಿ ಫುಲೆ, ಶಾಹು ಮಹಾರಾಜ, ಸೈಯಾಜಿರಾವ ಗಾಯಕವಾಡ, ನಾಲ್ವಡಿ ಕೃಷ್ಣರಾಜ ಒಡೆಯರ, ನಾರಾಯಣ ಗುರು, ಪೆರಿಯಾರ, ಮಂತಾದವರ ಚಿಂತನೆ ಅವರ ವಿಚಾರಧಾರೆಗಳನ್ನು ಪ್ರಮುಖವಾಗಿ ಅವರ ಮಹಿಳಾ ಚಿಂತನೆಗಳನ್ನು ಜನಸಾಮಾನ್ಯರಿಗೆ ತಿಳಿಪಡಿಸುವ ಕಾರ್ಯವನ್ನು ಮಾಡುತ್ತಲೇ ಬರುತ್ತಿದ್ದಾರೆ.
ಇಂಥ ಅಪರೂಪದ ಬರಗಾರ್ತಿ ಹಾಗೂ ಅಷ್ಟೇ ಪ್ರಖರ ವಾಗ್ಮಿಯೂ ಕೂಡ ಆಗಿದ್ದಾರೆ. ಇವರು ಹಲವಾರು
ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಮುಖವಾಗಿ ಅಂತರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು 2002., ಸಾಹಿತ್ಯ ಪ್ರಶಸ್ತಿ, ವಿಚಾರ ವೇದಿಕೆ ರಾಯಚೂರು 2003, ಉತ್ತಮ ಕವಿಯತ್ರಿ ಪ್ರಶಸ್ತಿ ಜ್ಯೋತಿರ್ಲಿಂಗ ಆಶ್ರಮ ಯರಭಾಗ 2003, ರುಕ್ಮಿಣಿಬಾಯಿ ಮಹಿಳಾ ಪ್ರಶಸ್ತಿ,, ಪತ್ರಕರ್ತರ ವೇದಿಕೆಬೆಂಗಳೂರು 2004 ,
ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, ವಾರದ ಸ್ಪೋಟ ವಾರ ಪತ್ರಿಕೆ ಬೆಂಗಳೂರು 2006,, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾಡಳಿತ ಬೀದರ 2008, ಉರಿಲಿಂಗಪೆದ್ದಿ ಪ್ರಶಸ್ತಿ
ಉರಿಲಿಂಗ ಪೆದ್ದಿ ಮಠ ಬೇಲೂರು 2009, ನಾಡು ನುಡಿ ಸೇವೆಗೆ ಕರ್ನಾಟಕ ಗಡಿ ಹೋರಾಟ ಸಮಿತಿ ಬೀದರ 2009, ಡಾ. ಅಂಬೇಡ್ಕರ್ ನ್ಯಾಷನಲ್ ಪ್ರಶಸ್ತಿ,
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ 2010,
ಅಮ್ಮ ದಶಮಾನೋತ್ಸವ ಗೌರವ ಪ್ರಶಸ್ತಿ, ಮಾತೋಶ್ರೀ ಮಹದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನ ಸೇಡಂ 2010, ಅಂತರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು 2010, ಕವಯತ್ರಿ ರತ್ನ ಪ್ರಶಸ್ತಿ,
ಎಂ. ಜಿ ದೇಶಪಾಂಡೆ ಪ್ರತಿಷ್ಠಾನ ಬೀದರ 2012, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಜಿಲ್ಲಾ ಆಡಳಿತ ಬೀದರ 2013,
ಕಲ್ಯಾಣ ಶ್ರೀ ಪ್ರಶಸ್ತಿ,, ಶ್ರೀಚನ್ನಬಸವೇಶ್ವರ ಹಿರೇಮಠ ಸಂಸ್ಥಾನ ಹಾರಕೂಡ 2014, ರಾಜೋತ್ಸವ ಪ್ರಶಸ್ತಿ,
ಗುಲ್ಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗ 2014, ಗೌರವ ಪ್ರಶಸ್ತಿ ದಲಿತ ಸಾಹಿತ್ಯ ಪರಿಷತ್ತು, ಗದಗ 2015.
ಯಲ್ಲಾಲಿಂಗ ಪ್ರಶಸ್ತಿ,ಬೀದರ ಜಿಲ್ಲಾ ಮೂರನೇ ಆಧುನಿಕ ವಚನ ಸಾಹಿತ್ಯ ಸಮ್ಮೇಳನ ಸಸ್ತಾಪುರ 2015, ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿ, ಪ್ರೊ. ಮಲ್ಲೇಪುರಂ ವೆಂಕಟೇಶ್ ಸಾಂಸ್ಕೃತಿಕ ಪ್ರತಿಷ್ಠಾನ ಕಲಬುರ್ಗಿ 2015,
ಅತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಎಂ. ಜಿ ದೇಶಪಾಂಡೆ ಪ್ರತಿಷ್ಠಾನ ಬೀದರ 2015, ಡಾ. ಬಿ.ಆರ್. ಅಂಬೇಡ್ಕರ ರತ್ನ ಪ್ರಶಸ್ತಿ , ಬಿ.ಶಾಮಸುಂದರ ಮೆಮೊರಿಯಲ್ ಟ್ರಸ್ಟ್ ಕಲಬುರ್ಗಿ 2016, ಮಹಿಳಾ ಚೇತನ ಪ್ರಶಸ್ತಿ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವಕಲ್ಯಾಣ 2016, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಡಾ. ಅಂಬೇಡ್ಕರ್ ಸ್ವತಂತ್ರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ 2017,
ಕನಕಶ್ರೀ ಪ್ರಶಸ್ತಿ,ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಮತ್ತು ಚುಟುಕು ಸಾಹಿತ್ಯ ಪರಿಷತ್ ಹುಮ್ನಾಬಾದ್ 2017, ಉತ್ತಮ ಬರಹಗಾರ ಪ್ರಶಸ್ತಿ ಪುಸ್ತಕ ಪ್ರಾಧಿಕಾರ ಮತ್ತು ಸಿರಿಗನ್ನಡ ವೇದಿಕೆ ಬೀದರ 2017, ಶ್ರೀಚೆನ್ನ ರತ್ನ ಪ್ರಶಸ್ತಿ, ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನ ಹಾರಕೂಡ 2017, ಸಾಹಿತ್ಯ ಚೂಡಾಮಣಿ ಪ್ರಶಸ್ತಿ,ಶ್ರೀ ಎಂ.ಜಿ.
ದೇಶಪಾಂಡೆ ಪ್ರತಿಷ್ಠಾನ ಬೀದರ 2018, ಡಾ.ಜಯದೇವಿ ತಾಯಿ ಲಿಗಾಡೆ ರಾಷ್ಟ್ರೀಯ ಪ್ರಶಸ್ತಿ,, ಅನುಭವ ಮಂಟಪ,ಬಸವಕಲ್ಯಾಣ 2023, ಶ್ರೀಮತಿ ರಾಜಲಕ್ಷ್ಮಿ ರಾಮಚಂದ್ರಪ್ಪ ಬರಗೂರು ಕಾದಂಬರಿ ಪ್ರಶಸ್ತಿ, 2024,
ಕಲ್ಯಾಣ ಕರ್ನಾಟಕ ರತ್ನ ಬಸವ ಮಹಾಮನೆ ಗುಣತೀರ್ಥ
ವಾಡಿ ಬಸವಕಲ್ಯಾಣ 2025, ಸುವರ್ಣ ಕರ್ನಾಟಕ ಪ್ರಶಸ್ತಿ, ಅರಸು ಮತ್ತು ಬಂಗಾರಪ್ಪ ಸಾಂಸ್ಕೃತಿಕ ವೇದಿಕೆ ಕಲ್ಬುರ್ಗಿ,
ಕನ್ನಡ ಸಾಹಿತ್ಯ ಪ್ರಶಸ್ತಿ, ಕನ್ನಡಾಂಬೆ ಶಿಕ್ಷಣ ಸಂಸ್ಥೆ ಕಬಿರಾಬಾದ್ 2021, ಗುಲಬರ್ಗಾ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬೋಧಿವೃಕ್ಷದ ಹಾಯಿಕು ಕೃತಿಗೆ 2019, ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ, ವಿಶ್ವ ಕನ್ನಡಿಗರ ಸಂಸ್ಥೆ ಬೀದರ 2023,
ಶರಣ ಚೇತನ ಪ್ರಶಸ್ತಿ, ವಿಶ್ವಜ್ಯೋತಿ ಪ್ರತಿಷ್ಠಾನ ಕಲಬುರ್ಗಿ 2025, ಬಸವ ಸೇವಾ ರತ್ನ ಪ್ರಶಸ್ತಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಚಿಟುಗುಪ್ಪ 2023, ಸಂಶೋಧನಾ ಚೇತನ ಪ್ರಶಸ್ತಿ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಬೀದರ್ 2024,ಚಿನ್ನದ ಪದಕ ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯ ಮಟ್ಟದ ಕಥಾ ಸ್ಪರ್ಧೆ ಗುಲ್ಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗ ಕಲ್ಬುರ್ಗಿ 2024,
ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹಲವು ಇಲಾಖೆಗಳಲ್ಲಿ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಪ್ರಮುಖವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಕರ್ನಾಟಕ ಸರ್ಕಾರ ಬೆಂಗಳೂರು 2006 ರಿಂದ 2008ರವರೆಗೆ, ಸಾರ್ವಜನಿಕ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಬೆಂಗಳೂರು 2016 ರಿಂದ 2018 ರ ವರೆಗೆ, ಪ್ರಸ್ತುತ
ಕೇಂದ್ರ ಸಾಹಿತ್ಯ ಅಕಾಡಮಿ ಕನ್ನಡ ಸಲಹಾ ಸಮಿತಿ ನವ ದೆಹಲಿ 2021 ರಿಂದ 2027ರ ವರೆಗ. ಈಗಾಗಲೇ ಸಮ್ಮೇಳನದ ಸರ್ವಾಧ್ಯಕ್ಷರು:
೧. ಬಸವಕಲ್ಯಾಣ ತಾಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ
ಸಮ್ಮೇಳನ ಹುಲಸೂರು, ಕಸಾಪ, 2010.
೨. ಹೈದರಾಬಾದ್ ಕರ್ನಾಟಕ ಪ್ರಥಮ ಮಹಿಳಾ ಸಾಹಿತ್ಯ
ಸಮ್ಮೇಳನ, ಉರಿಲಿಂಗಪೆದ್ದಿ ಮಠ ಬೇಲೂರು 2015.
೩. ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಹುಮ್ನಾಬಾದ
2020.
೪. ಪ್ರಥಮ ಮಹಿಳಾ ಸಮಾವೇಶ, ಯಲ್ಲಾಲಿಂಗೇಶ್ವರ
ಮಠ ಸಸ್ತಾಪುರ, ಬಸವಕಲ್ಯಾಣ 2025.
ಇವರು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಶಸ್ಸಿಗೆ ಕಾರಣಿಕರ್ತರಾಗಿದ್ದಾರೆ. ಈಗ ಭಾರತ ಸಂವಿಧಾನ ಶೀರ್ಷಿಕೆ ಅಡಿಯಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ರಾಯಚೂರು 20 ಮತ್ತು 21, 2025 ರಂದು ನಡೆಯುವ ಸಮ್ಮೇಳನಕ್ಕೆ ಅವರ ಸಾಹಿತ್ಯ ಸೇವೆ ಹಾಗೂ ಸಮಾಜ ಸೇವೆ ಪರಿಗಣಿಸಿ ಆಯ್ಕೆ ಮಾಡಿರುವುದು ಸಾಹಿತ್ಯ ಆಸಕ್ತರಿಗೂ ಸಾಮಾಜಿಕ ಕಳಕಳಿ ಹೊಂದಿರುವ ಹಲವಾರು ಜನರಿಗೆ, ಅವರ ಅಪಾರ ವಿದ್ಯಾರ್ಥಿಗಳಿಗೆ ಅತೀವ ಸಂತಸ ತಂದಿದೆ.
ಡಾ.ಸಿದ್ಧಪ್ಪ ಎನ್.ಹೊಸಮನಿ
,ಕನ್ನಡ ಅತಿಥಿ ಉಪನ್ಯಾಸಕರು,ಸರಕಾರಿ ಪ್ರಥಮ ರ್ಜೆ ಕಾಲೇಜುಸೇಡಂ
