ಕೇಂದ್ರದ ಏಕಿಕೃತ ಪಿಂಚಣಿಗೆ ಸ್ವಾಗತ, ಕೂಡಲೆ ರಾಜ್ಯ ಸರ್ಕಾರವು ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಪಿಂಚಣಿ ನೀಡಲು ಆಗ್ರಹ- ಶ್ರೀ ಶಶೀಲ್ ಜಿ ನಮೋಶಿ

ಕೇಂದ್ರದ ಏಕಿಕೃತ ಪಿಂಚಣಿಗೆ ಸ್ವಾಗತ, ಕೂಡಲೆ ರಾಜ್ಯ ಸರ್ಕಾರವು ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಪಿಂಚಣಿ ನೀಡಲು ಆಗ್ರಹ- ಶ್ರೀ ಶಶೀಲ್ ಜಿ ನಮೋಶಿ

ಕೇಂದ್ರದ ಏಕಿಕೃತ ಪಿಂಚಣಿಗೆ ಸ್ವಾಗತ, ಕೂಡಲೆ ರಾಜ್ಯ ಸರ್ಕಾರವು ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಪಿಂಚಣಿ ನೀಡಲು ಆಗ್ರಹ- ಶ್ರೀ ಶಶೀಲ್ ಜಿ ನಮೋಶಿ

ಕೇಂದ್ರ ಸರ್ಕಾರ ಶನಿವಾರ ನಡೆಸಿದ ಸಂಪುಟ ಸಭೆಯಲ್ಲಿ ಏಕಿಕೃತ ಪಿಂಚಣಿ ಯೋಜನೆ (UPS) ಜಾರಿಗೆ ಮಾಡುವದರ ಮುಖಾಂತರ ಕೇಂದ್ರ ಸರ್ಕಾರಿ ನೌಕರರ ಹಿತ ಕಾಪಾಡುವ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ನಿವೃತ್ತ ನೌಕರರಿಗೆ ಖಚಿತ ಪಿಂಚಣಿ ದೊರೆಯಲಿದ್ದು ಅವರ ನಿವೃತ್ತಿ ಜೀವನಕ್ಕೆ ಒಳ್ಳೆಯ ಕೊಡುಗೆ ನೀಡಿದ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನಿರ್ಧಾರವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ ನಮೋಶಿ ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದರು.

ಬಹಳ ವರ್ಷಗಳಿಂದ ಸರ್ಕಾರಿ ನೌಕರರು ಹಳೆಯ ನಿಶ್ಚಿತ ಪಿಂಚಣಿಗಾಗಿ (OPS) ಹೋರಾಟ ನಡೆಸಿದ್ದರು ಈಗ ಕೇಂದ್ರ ಸರ್ಕಾರ ಏಕಿಕೃತ ಪಿಂಚಣಿ ಯೋಜನೆ ಜಾರಿಗೆ ತರಲು ಮುಂದಾಗಿದ್ದು ಬಹುತೇಕ ಭಾಗಶಃ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಮಾದರಿಯು ಇದಾಗಿದ್ದು ಇದರಿಂದಾಗಿ ಕೇಂದ್ರ ಸರ್ಕಾರದ ಸುಮಾರು 23 ಲಕ್ಷ ಸರ್ಕಾರಿ ನೌಕರರಿಗೆ ಖಚಿತ ಪಿಂಚಣಿ, ಕುಟುಂಬ ಪಿಂಚಣಿ, ಖಚಿತವಾದ ಕನಿಷ್ಠ ಪಿಂಚಣಿ ದೊರೆಯಲಿದ್ದು ಸರ್ಕಾರಿ ನೌಕರರ ಇಳಿ ವಯಸ್ಸಿನ ಜೀವನಕ್ಕೆ ನೆಮ್ಮದಿ ಒದಗಿಸಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ 2000 ರಲ್ಲಿ ಜಾರಿಗೆ ತಂದಿದ್ದ ಹೊಸ ಪಿಂಚಣಿ ರಾಷ್ಟ್ರೀಯ ಪಿಂಚಣ ಯೋಜನೆಗೆ ಇಡಿ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಖಚಿತ ಪಿಂಚಣಿ ಇಲ್ಲ ಎನ್ನುವುದು ಮುಖ್ಯ ಆರೋಪವಾಗಿತ್ತು. ಇದನ್ನರಿತ ಕೇಂದ್ರ ಸರ್ಕಾರ ಸಂಪುಟ ಕಾರ್ಯದರ್ಶಿ ಟಿ ವಿ ಸೋಮನಾಥ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಸಮಿತಿಯ ನಿರ್ಣಯದಂತೆ ಕ್ರಮ ಕೈಗೊಂಡು ಸರ್ಕಾರಿ ನೌಕರರ ಹಿತ ಕಾಪಾಡಲು ಮುಂದಾಗಿರುವುದು ಸಂತಸದ ವಿಷಯವಾಗಿದೆ.

ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣೆಯ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಹಳೆಯ ನಿಶ್ಚಿತ ಪಿಂಚಣಿ ಜಾರಿಗೆ ತರುತ್ತೇವೆ ಎಂದು ಪ್ರಮುಖ ವಿಷಯವಾಗಿ ಘೋಷಣೆ ಮಾಡಿತು. ಇದರಿಂದ ಸರ್ಕಾರಿ ಹಾಗೂ ಅನುದಾನಿತ ನೌಕರರು ಓಟ್ ಪಾರ್ ಓಪಿಎಸ್ ಎಂದು ಕಾಂಗ್ರೆಸ್ ಪಕ್ಷ ಕ್ಕೆ ಮತ ನೀಡಿ ಅಧಿಕಾರಕ್ಕೆ ತಂದಿದ್ದು ಆಯಿತು. ಈಗ ಅಧಿಕಾರಕ್ಕೆ ಬಂದು ಒಂದು ವರೆ ವರ್ಷವಾದರೂ ಪಿಂಚಣಿ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿರುವುದು ಇದು ಸರಕಾರಿ ನೌಕರರು ಹಾಗೂ ಅನುದಾನಿತ ನೌಕರರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಹಿಂದೆ ರಾಜ್ಯ ಸರ್ಕಾರ ಪಿಂಚಣಿಯ ವಿಷಯ ಬಂದಾಗ ಕೇಂದ್ರ ಸರ್ಕಾರ ಕಡೆಗೆ ಬೊಟ್ಟು ಮಾಡುತ್ತಿತ್ತು ಈಗ ಕೇಂದ್ರ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳದೆ ನೌಕರರ ಹಿತ ಕಾಪಾಡಲು ದಿಟ್ಟ ನಿರ್ಧಾರ ಕೈಗೊಂಡಿದೆ. ಅದರಂತೆ ರಾಜ್ಯ ಸರ್ಕಾರವು ಕೇಂದ್ರದಂತೆ ರಾಜ್ಯ ಸರ್ಕಾರಿ ನೌಕರರು ಹಾಗೂ ಅನುದಾನಿತ ನೌಕರರ ಹಿತ ಕಾಪಾಡಲು ಕೂಡಲೆ ಕೇಂದ್ರದ ಮಾದರಿಯಂತೆ ಏಕಿಕೃತ ಪಿಂಚಣಿ ವ್ಯವಸ್ತೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸುತ್ತೇನೆ.