ನರೇಗಲ್ಲದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ - ಕರ್ನಾಟಕ ರಾಜ್ಯೋತ್ಸವ
ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ ನರೇಗಲ್ಲದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ
ನರೇಗಲ್ಲ (ಗದಗ):ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ *ಶ್ರೀ ಅನ್ನದಾನೇಶ್ವರ ಸಂಸ್ಥೆಯ ಆಡಳಿತದಡಿಯಲ್ಲಿ ನಡೆಯುತ್ತಿರುವ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ*ಯಲ್ಲಿ ಇಂದು ಕರ್ನಾಟಕ ರಾಜ್ಯೋತ್ಸವವನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ರಾಜ್ಯೋತ್ಸವ ಗೀತೆಗಳನ್ನು ಹಾಡಿ, ಕನ್ನಡ ರಾಜ್ಯೋತ್ಸವದ ಮಹತ್ವದ ಕುರಿತು ಭಾಷಣಗಳನ್ನು ಮಾಡಿದರು. ಮಕ್ಕಳಿಂದ ಘೋಷಣೆಗಳು ಮೊಳಗಿದವು ಮತ್ತು ಶಾಲಾ ಆವರಣವು “ಜೈ ಕರ್ನಾಟಕ ಮಾತೆ” ಘೋಷಣೆಯಿಂದ ಮಾರ್ಮರಿಸಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬಿ. ಜಿ. ಶಿರ್ಸಿ ಅವರು, “ಕನ್ನಡ ನಮ್ಮ ಅಸ್ತಿತ್ವದ ನಾಡಿ — ಭಾಷೆಯ ಗೌರವ ಉಳಿಸಲು ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸಬೇಕು” ಎಂದು ಕರೆ ನೀಡಿದರು.
ಕನ್ನಡ ಶಿಕ್ಷಕರಾದ ಶ್ರೀ ಕೆ. ಆಯ್. ಕೋಳಿವಾಡ ಅವರು ಕನ್ನಡದ ಇತಿಹಾಸ ಮತ್ತು ಕನ್ನಡ ನಾಡಿನ ವೈಭವ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಶ್ರೀಮತಿ ವಿ.ಪಿ. ಗ್ರಾಮಪುರೋಹಿತ, ಎಸ್.ವಿ. ಹಿರೇಮಠ, ವಿ.ಎಸ್. ಜಾದವ್, ಎಸ್.ಕೆ. ಕುಲಕರ್ಣಿ, ಸಾವಿತ್ರಿ ಮಾನ್ವಿ, ಎಂ.ಎಂ. ಸಿಳ್ಳಿನ್, ಗೀತಾ ಶಿಂಧೆ, ಶಿಕ್ಷಕರು ಆಯ್.ಬಿ. ಒಂಟೇಲಿ, ಎನ್.ಜೆ. ಸಂಗನಾಳ, ಜೆ.ವಿ. ಕೆರಿಯವರ, ಹಾಗೂ ಅಕ್ಕಮಹಾದೇವಿ ಅಯ್ಯನಗೌಡ್ರ, ರಾಜೇಶ್ವರಿ ಈಟಿ, ಗೀತಾ ಕಂಬಳಿ, ರಜಿಯಾಬೇಗಂ, ವಿದ್ಯಾ ಮುಗಳಿ, ಜಯಶ್ರೀ ಮೆಣಸಗಿ, ಎಂ.ಎಸ್. ಧರ್ಮಾಯತ, ಎಸ್.ಎ. ಚೋಳಿನ, ಕುಮಾರಿ ಪಿ.ಎಸ್. ಅಂಗಡಿ, ಪದ್ಮಾವತಿ ಅಂಬಿಗೇರ, ಶ್ವೇತಾ ಶಿ. ಹಿರೇಮಠ, ನೇತ್ರಾ ಸೋಬಾನ, ನಂದಿತಾ ಎಂ. ರಾಜೂರ ಸೇರಿದಂತೆ ಅನೇಕರು ಹಾಜರಿದ್ದರು.
ಕಾರ್ಯಕ್ರಮವು ರಾಷ್ಟ್ರಭಕ್ತಿ ಮತ್ತು ಕನ್ನಡಾಭಿಮಾನದಿಂದ ಕಂಗೊಳಿಸಿತು.
ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ
ಕಲ್ಯಾಣ ಕಹಳೆ, ಗದಗ
