ಪ್ರೋ ಸತೀಶ್ ಧವನ್ ಪ್ರಶಸ್ತಿ ಪಡೆದ ಡಾ ಜಯಶ್ರೀ ಅಗರಖೇಡ ಅವರಿಗೆ ಸಂಸ್ಥೆಯಿಂದ ಸನ್ಮಾನ

ಪ್ರೋ ಸತೀಶ್ ಧವನ್ ಪ್ರಶಸ್ತಿ ಪಡೆದ ಡಾ ಜಯಶ್ರೀ ಅಗರಖೇಡ ಅವರಿಗೆ ಸಂಸ್ಥೆಯಿಂದ ಸನ್ಮಾನ

ಪ್ರೋ ಸತೀಶ್ ಧವನ್ ಪ್ರಶಸ್ತಿ ಪಡೆದ ಡಾ ಜಯಶ್ರೀ ಅಗರಖೇಡ ಅವರಿಗೆ ಸಂಸ್ಥೆಯಿಂದ ಸನ್ಮಾನ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನ ಕಂಪ್ಯೂಟರ್ ಸಾಯಿನ್ಸ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ ಜಯಶ್ರೀ ಅಗರಖೇಡ ಅವರಿಗೆ 2022 ನೇ ಸಾಲಿನ ವಿಜ್ಞಾನಿಗಳಿಗೆ ಹಾಗೂ ಇಂಜಿನಿಯರ್ ಗಳಿಗೆ ನೀಡುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಷ್ಠಿತ ಪ್ರೋ ಸತೀಶ್ ಧವನ್ ಪ್ರಶಸ್ತಿ ಲಭಿಸಿದ್ದಕ್ಕಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಸಂಸ್ಥೆಯ ಪರವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಎನ್ ಪಿ ಟಿ ಇ ಎಲ್ ಹಿರಿಯ ವ್ಯವಸ್ಥಾಪಕರು ಹಾಗೂ ಐಐಟಿ ಮದ್ರಾಸ್ ನ ಮುಖ್ಯಸ್ಥರಾದ ಶಿವಶಂಕರ್ ದಾಸ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಲಬುರ್ಗಿ ವಿಭಾಗದ ನಿರ್ದೇಶಕರಾದ ಡಾ ಶಂಭುಲಿಂಗ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯರಾದ ಡಾ ಮಹಾದೇವಪ್ಪ ರಾಂಪೂರೆ, ಡಾ ಶರಣಬಸಪ್ಪ ಹರವಾಳ, ಸಾಯಿನಾಥ ಪಾಟೀಲ್, ಡಾ ಕಿರಣ್ ದೇಶಮುಖ್, ನಾಗಣ್ಣ ಘಂಟಿ ಕಾಲೇಜಿನ ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್ ಉಪ ಪ್ರಾಚಾರ್ಯರಾದ ಡಾ ಎಸ್ ಆರ್ ಹೊಟ್ಟಿ ಉಪ ಪ್ರಾಚಾರ್ಯರಾದ ಡಾ ಭಾರತಿ ಹರಸೂರ ಹಾಗೂ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು