ತೆಹರಿಕ್-ಇ-ಖುದದಾದ ಸಂಘಟನೆಯ ಉಚಿತ ನೇತ್ರ ತಪಾಸಣೆ

ತೆಹರಿಕ್-ಇ-ಖುದದಾದ ಸಂಘಟನೆಯ ಉಚಿತ ನೇತ್ರ ತಪಾಸಣೆ

ತೆಹರಿಕ್-ಇ-ಖುದದಾದ ಸಂಘಟನೆಯ ಉಚಿತ ನೇತ್ರ ತಪಾಸಣೆ 

ಆಳಂದ: ತೆಹರಿಕ್-ಇ-ಖುದದಾದ ಸಂಘಟನೆ ಮತ್ತು ಆಳಂದ ಯುವಕರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.

ಸಕಾಲದಲ್ಲಿ ಆರಂಭವಾದ ಈ ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರು ತಮ್ಮ ಕಣ್ಣುಗಳ ತಪಾಸಣೆ ಮಾಡಿಸಿಕೊಂಡರು. ಕಲಬುರ್ಗಿ ಜಿಮ್ಸ್ ಆಸ್ಪತ್ರೆಯ ನೇತ್ರ ರೋಗ ತಜ್ಞರು ಹಾಗೂ ಸಿಬ್ಬಂದಿಗಳು ಆಗಮಿಸಿ, ಎಲ್ಲರಿಗೂ ವೈಜ್ಞಾನಿಕ ತಪಾಸಣೆ ನಡೆಸಿ, ಅಗತ್ಯವಿರುವವರಿಗೆ ಉಚಿತ ಕನ್ನಡಕಗಳನ್ನು ವಿತರಿಸುವ ಭರವಸೆ ನೀಡಿದರು. ಮತ್ತು ಗಂಭೀರ ಕಣ್ಣಿನ ಸಮಸ್ಯೆಗಳಿಗೆ ಉಚಿತ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಟ್ಟರು.

ಇದೇ ಶಿಬಿರದಲ್ಲಿ ನಡೆದ ರಕ್ತದಾನ ಕಾರ್ಯಕ್ರಮದಲ್ಲಿ 25 ಮಂದಿ ಯುವಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ, ಆಸ್ಪತ್ರೆಯ ರಕ್ತ ನಿಕ್ಷೇಪ ಕೇಂದ್ರವನ್ನು ಬಲಪಡಿಸಿದರು. 

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಉಮಾಕಾಂತ ರಾಜಗಿರಿ ಅವರು, ಇಂತಹ ಸಾಮಾಜಿಕ ಸೇವಾ ಕಾರ್ಯಕ್ರಮಗಳು ಸರ್ಕಾರಿ ಆಸ್ಪತ್ರೆಗಳ ಜವಾಬ್ದಾರಿಯನ್ನು ಹಂಚಿಕೊಳ್ಳುವಲ್ಲಿ ಮಹತ್ತ್ವದ ಪಾತ್ರ ವಹಿಸುತ್ತವೆ. ತೆಹರಿಕ್ ಸಂಘಟನೆಯ ಈ ಉಪಕ್ರಮ ಆಳಂದ ತಾಲೂಕಿನ ಜನರಿಗೆ ವರದಾನವಾಗಿದೆಹಿ ಎಂದು ಶ್ಲಾಘಿಸಿದರು.

ತೆಹರಿಕ್-ಇ-ಖುದದಾದ್ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಮಹಮ್ಮದ್ ರಫಿಕ್ ಮುಲ್ಲಾ ಅವರು ಮಾತನಾಡಿ, ಈ ಒಂದು ದಿನದ ಶಿಬಿರವಲ್ಲ, ಇದು ನಮ್ಮ ಸ್ಥಿರವಾದ ಸಾಮಾಜಿಕ ಬದ್ಧತೆಯ ಭಾಗ. ಆಳಂದದ ಜನರ ಪ್ರೀತಿ-ವಿಶ್ವಾಸಕ್ಕೆ ಇದು ಸಣ್ಣ ಕಾಣಿಕೆಹಿ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಚೌಕ ಅಧ್ಯಕ್ಷ ಸೈಯದ್ ಜಾಕೀರ್, ಮುಖಂಡ ಮಹಾದೇವ ಕಾಂಬಳೆ, ಚಾಂದಪಾಷಾ ಜಮಾದಾರ, ಪರ್ವೇಜ್ ಅನ್ಸಾರಿ, ಅರಬಾಜ್ ಶೇಖ, ಅಕೀಲ್ ಪಟೇಲ, ಸುಬಾನ್ ಪಟೇಲ, ರಫಿಕ್ ಕಿಂಗ್, ಅತಿಕ್ ಅನ್ಸಾರಿ, ಉಮರ ಶೇಖ, ರಜಾಕ್ ಶೇಖ, ಅಕ್ರಮ ಕರಜಗಿ, ನಾಗರಾಜ ದೇವನೂರ, ಮಹೆಬೂಬ ಮುರುಮವಾಲೆ, ತಾನಾಜಿ ಲವಟೆ, ಮಹೆಬೂಬ ತಂಬೋಳಿ ಸೇರಿದಂತೆ ಶಿಬಿರದಲ್ಲಿ ಆಸ್ಪತ್ರೆ ಸಿಬ್ಬಂದಿಗಳು, ತೆಹರಿಕ್ ಸ್ವಯಂ ಸೇವಕರು ಹಾಗೂ ಆಳಂದದ ಜನತೆ ಸಕ್ರಿಯವಾಗಿ ಭಾಗವಹಿಸಿದ್ದರು.