ಪ್ರತ್ಯೇಕ ಆಹಾರ ಶಾಖೆಯು ಪ್ರಾರಂಭಿಸಬೇಕು ಎಂದು ಒತ್ತಾಯ

ಪ್ರತ್ಯೇಕ ಆಹಾರ ಶಾಖೆಯು ಪ್ರಾರಂಭಿಸಬೇಕು ಎಂದು ಒತ್ತಾಯ
ಕಮಲನಗರ:ಕಮಲನಗರ ತಹಶೀಲ್ ಕಾರ್ಯಾಲಯದಲ್ಲಿ ಪ್ರತ್ಯೇಕ ಆಹಾರ ಶಾಖೆಯ ಪ್ರಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಅಧ್ಯಕ್ಷ ಸುಭಾಷ್ ಗಾಯಕ ವಾಡ ನೇತೃತ್ವದ ನಿಯೋಗವು ಗ್ರೇಡ್ -2ತಹಸೀಲ್ದಾರ್ ರಮೇಶ್ ಪೇದ್ದೆ ಅವರಿಗೆ ಸೋಮವಾರ ಸಲ್ಲಿಸಿದ್ದಾರೆ.
ತಹಸಿಲ್ ಕಾರ್ಯಲಯ ಆರಂಭಗೊಂಡು ಏಳು ವರ್ಷ ಗತಿಸಿದೆ. ಇದುವರೆಗೆ ಆಹಾರ ಶಾಖೆ ಆರಂಭವಾಗಿಲ್ಲ. ಸರಕಾರ ಆಹಾರ ನಿರೀಕ್ಷಕರ ಹುದ್ದೆಯನ್ನು ಮಂಜೂರು ಮಾಡಿ ನೇಮಿಸಲಾಗಿದೆ. ಸ್ಟಾಫ್ ವೇರ್ ಕೂಡಾ ಅಳವಡಿಸಲಾಗಿದೆ ಆದರೆ ತಹಸಿಲ್ದಾರ್ ಅಧೀನದಲ್ಲಿರುವ ಆಹಾರ ಇಲಾಖೆಯ ಕಚೇರಿ ಸ್ಥಾಪನೆಯಾಗಿರುವುದಿಲ್ಲ. ಇದರಿಂದ ತಾಲೂಕಿನ ಜನತೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. 35 ಕಿ.ಮೀ. ದೂರದ ಔರಾದ್( ಬಾ) ಪಟ್ಟಣ ಕಾರ್ಯಾಲಯಕ್ಕೆ ತೆರಳಿ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವಾರದೊಳಗೆ ಕಮಲ್ನಗರ್ ತಾಲೂಕ ಕಾರ್ಯಲಯದಲ್ಲಿ ಪ್ರತ್ಯೇಕ ಆಹಾರ ಶಾಖೆ ಪ್ರಾರಂಭಿಸಬೇಕು. ಇಲ್ಲದಿದ್ದರೆ ತಹಸಿಲ್ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ವಲಯ ಅಧ್ಯಕ್ಷ ಆನಂದ್ ಬಿರಾದಾರ್, ಉಪಾಧ್ಯಕ್ಷ ಮಂಜುನಾಥ ಸ್ವಾಮಿ ,ಪ್ರಮುಖರಾದ ಪ್ರಶಾಂತ್ ಖಾನಾಪುರೆ, ಮಹೇಶ್ ಸಜ್ಜನ್, ಸಾಯಿನಾಥ್ ಕಾಂಬ್ಳೆ, ರಾಜಕುಮಾರ್ ಗಾಯಕವಾಡ,ಅಯೂಬ್ ಖುರೇಶಿ,ಸಂಜು ವಡೆಯಾರ ಇದ್ದರು.