ಸೆ. 22ರಿಂದ ಅ. 7ರವರೆಗೆ ಹಿಂದುಳಿದ ವರ್ಗಗಳ ಸಮೀಕ್ಷೆ – ಬಾಗಬಾನ ಸಮಾಜಕ್ಕೆ ಇಲಿಯಾಸ್ ಸೇಟ ಬಾಗಬಾನ ಮನವಿ

ಸೆ. 22ರಿಂದ ಅ. 7ರವರೆಗೆ ಹಿಂದುಳಿದ ವರ್ಗಗಳ ಸಮೀಕ್ಷೆ – ಬಾಗಬಾನ ಸಮಾಜಕ್ಕೆ- ಇಲಿಯಾಸ್ ಸೇಟ ಬಾಗಬಾನ ಮನವಿ
ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ರಾಜ್ಯಾದ್ಯಂತ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಬಾಗಬಾನ ಸಮಾಜ ಹಾಗೂ ಕಲಬುರಗಿ ಜಿಲ್ಲಾ ಬಾಗಬಾನ ಸಮಾಜದ ಅಧ್ಯಕ್ಷ ಇಲಿಯಾಸ್ ಸೇಟ ಬಾಗಬಾನ ತಿಳಿಸಿದ್ದಾರೆ.
ಅವರು ನೀಡಿದ ಮಾಹಿತಿಯಂತೆ, ಬಾಗಬಾನ ಸಮಾಜವು ಹಿಂದುಳಿದ ವರ್ಗಕ್ಕೆ ಸೇರಿದ ಸಮುದಾಯವಾಗಿದ್ದು, ಸಮೀಕ್ಷೆಯಲ್ಲಿ ಸಮಾಜದ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸುವುದು ಅತ್ಯಗತ್ಯ. ರಾಜ್ಯದಾದ್ಯಂತ ಜಿಲ್ಲೆ, ತಾಲೂಕು ಮತ್ತು ಹೂಬಳಿಗಳ ಮಟ್ಟದಲ್ಲಿ ಬಾಗಬಾನ ಸಮಾಜದ ಎಲ್ಲಾ ಮನೆಮಾತಿನ ಮಾಹಿತಿಯನ್ನು ಆಯೋಗದ ಆಪ್ ಮೂಲಕ ಸರ್ಕಾರಕ್ಕೆ ಒದಗಿಸಬೇಕು.
ಪ್ರತಿ ಮನೆಗಳಲ್ಲಿ 6 ವರ್ಷ ಮೇಲ್ಪಟ್ಟ ಸದಸ್ಯರ ವಿವರ ನೀಡುವುದು ಕಡ್ಡಾಯ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮುಂತಾದ ವಿವರಗಳ ಜೊತೆಗೆ ಇತರೆ ಅಗತ್ಯ ಮಾಹಿತಿಗಳನ್ನು ಸರಿಯಾಗಿ ಒದಗಿಸಬೇಕೆಂದು ಅವರು ತಿಳಿಸಿದ್ದಾರೆ.
ಆಯೋಗವು ಒಟ್ಟಾರೆ 60 ಪ್ರಶ್ನೆಗಳನ್ನು ಕೇಳಲಿದ್ದು, ಅದರಲ್ಲಿ ಪ್ರಮುಖವಾಗಿ ಧರ್ಮ (ಪ್ರ.ಸಂ. 8) – *ಇಸ್ಲಾಂ*, ಜಾತಿ (ಪ್ರ.ಸಂ. 9) – *ಮುಸ್ಲಿಂ*, ಉಪಜಾತಿ (ಪ್ರ.ಸಂ. 10) – *ಬಾಗಬಾನ (0089)*, ಮತ್ತು ಕುಲಕಸಬು (ಪ್ರ.ಸಂ. 30) – *ಹಣ್ಣು-ತರಕಾರಿ ಮಾರಾಟಗಾರರು (25)* ಎಂದು ನಮೂದಿಸುವಂತೆ ಇಲಿಯಾಸ್ ಸೇಟ ಬಾಗಬಾನ ಮನವಿ ಮಾಡಿದ್ದಾರೆ.
ಸಮಾಜದ ಪ್ರತಿಯೊಬ್ಬರೂ ಸಮೀಕ್ಷೆಯ ಮಹತ್ವವನ್ನು ಅರಿತು ತಮ್ಮ ಮನೆಮಾತಿನ ಮಾಹಿತಿಯನ್ನು ಸರಿಯಾಗಿ ಒದಗಿಸಬೇಕು. ಜೊತೆಗೆ ಸಮಾಜದ ಎಲ್ಲ ಸದಸ್ಯರಿಗೆ ಈ ವಿಷಯ ತಿಳಿಸಿ ಸಹಕಾರ ನೀಡುವುದರ ಮೂಲಕ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.