ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ದರ್ಶನ ಪ್ರವಚನ
ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ದರ್ಶನ ಪ್ರವಚನ
ಕಲಬುರಗಿ : ಸ್ವಾರ್ಥದ ಕಟ್ಟನ್ನು ಬಿಚ್ಚಿದರೆ ಸಮಾಜ ಉದ್ಧಾರವಾಗುತ್ತದೆ. ಜೋಳಿಗೆ ಮೂಲಕ ವಚನಗಳನ್ನು ಸಂಗ್ರಹಿಸಿ ಮುದ್ರಣ ಮಾಡುವುದರೊಂದಿಗೆ ಸಮಾಜಕ್ಕೆ ಉತ್ತಮ ವಚನಗಳನ್ನು ಕೊಟ್ಟವರು ಮಹಾಪುರುಷ ಹಾನಗಲ್ ಕುಮಾರಸ್ವಾಮಿಗಳು ಎಂದು ಅವರಾದ ಬಿ ಚರಂತಿಮಠದ ಪೂಜ್ಯಶ್ರೀ ಮರುಳಸಿದ್ದ ಶಿವಾಚಾರ್ಯರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕಲಬುರಗಿ ತಾಲೂಕಿನ ಅವರಾದ( ಬಿ) ಗ್ರಾಮದ ಚರಂತಿ ಮಠದ ಲಿಂ. ಗುರುಶಾಂತಲಿಂಗ ಶಿವಾಚಾರ್ಯರ 32ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಐದು ದಿನಗಳ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು
ಪುರಾಣ ಪ್ರವಚನಕಾರರಾದ ಸುಂಟನೂರಿನ ಶ್ರೀ ಬಂಡಯ್ಯ ಶಾಸ್ತ್ರಿಗಳು ಹಾನಗಲ್ಲ ಕುಮಾರಸ್ವಾಮಿಗಳು ಬಡತನದ ಬೇಗೆಯಲ್ಲಿ ಬೆಂದು ಮಠವನ್ನು ತೊರೆದು ಸಮಾಜದ ಸರ್ವರ ಉದ್ಧಾರಕ್ಕಾಗಿ ಶ್ರಮಿಸಿದರು. ಶರಣರ ವಚನಗಳು ಬೆಳಕು ಕಾಣುವುದಕ್ಕೆ, ಸಂಗೀತ ಕ್ಷೇತ್ರ ಉಜ್ವಲವಾಗಿ ಬೆಳೆಯಲು ಹಾನಗಲ್ಲು ಕುಮಾರ ಸ್ವಾಮಿಗಳ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ವಿವಿಧ ಪಂಗಡಗಳಲ್ಲಿ ಹರಿದು ಹಂಚಿಹೋಗಿದ್ದ ಜನರನ್ನೆಲ್ಲಾ ಮಹಾಸಭಾದ ಮೂಲಕ ಒಂದುಗೂಡಿಸಿ ಒಂದೇ ವೇದಿಕೆಗೆ ತಂದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. 20ನೇ ಶತಮಾನದಂಚಿನಲ್ಲಿ ಕುಮಾರ ಸ್ವಾಮಿಗಳು ಹರಿದು ಹಂಚಿ ಹೋಗಿದ್ದ ವೀರಶೈವ ಸಮಾಜವನ್ನು ಒಗ್ಗೂಡಿಸಲು ಹಾಗೂ ಸಮಾಜ ಸೇವೆಗೆ ವೈರಾಗ್ಯ ತಾಳಿ ಮುನ್ನಡೆದರು. ಈಗಲೂ ಶಿವಯೋಗಿ ಮಂದಿರದಲ್ಲಿ ದೇಶಿ ತಳಿಗಳಿಂದ ಭಸ್ಮ ತಯಾರಿಸುವ ಕಾರ್ಖಾನೆ ಇದೆ. ಕುಮಾರಸ್ವಾಮಿಗಳ ದೂರದೃಷ್ಟಿಯ ಹಿನ್ನೆಲೆಯಲ್ಲಿ ಸಪ್ತ ವಟುಗಳಿಂದ ಆರಂಭವಾಗಿ ಇಂದು ಅನೇಕ ಮಠಗಳಲ್ಲಿ ಸಮಾಜದ ನಿರ್ಮಾಣಕ್ಕೆ ಗುರು ವಿರಕ್ತರನ್ನು ತಯಾರು ಮಾಡಲಾಗುತ್ತಿದೆ ಎಂದು ಪ್ರವಚನ ಗೖದರು ಆನಂದಕುಮಾರ ನಂದಿಕೋಲ ಮಠ, ಬಸವರಾಜ ಚಲಗೇರಿ ಸಂಗೀತ ನೀಡಿದರು, ಗ್ರಾಮಸ್ಥರಾದ ಬಾಬುರಾವ್ ನರೂಣಿ, ಪೀರಪ್ಪ ತಳವಾರ್, ನಾಗೇಂದ್ರಪ್ಪ ಮಾಲಿ ಪಾಟೀಲ್, ಅಣ್ಣಪ್ಪ ಡುಕ್ಕಿ, ಮರುಗಯ್ಯ ಹಿರೇಮಠ,ಅನಿಲ್ ಕುಮಾರ್, ಚನ್ನವೀರಪ್ಪ ಮಾಲಿ ಪಾಟೀಲ ಮುಂತಾದವರಿದ್ದರು ಹಾಜರಿದ್ದರು ಅರುಣ್ ಕುಮಾರ್ ಕುಲಕರ್ಣಿ ನಿರೂಪಿಸಿದರು