ಸಾವಳಗಿ(ಬಿ)ಯಲ್ಲಿ ಭಕ್ತಿಭಾವದಿಂದ ಮಕರ ಸಂಕ್ರಾಂತಿ ಜಾತ್ರಾಮಹೋತ್ಸವ

ಸಾವಳಗಿ(ಬಿ)ಯಲ್ಲಿ ಭಕ್ತಿಭಾವದಿಂದ ಮಕರ ಸಂಕ್ರಾಂತಿ ಜಾತ್ರಾಮಹೋತ್ಸವ

ಸಾವಳಗಿ(ಬಿ)ಯಲ್ಲಿ ಭಕ್ತಿಭಾವದಿಂದ ಮಕರ ಸಂಕ್ರಾಂತಿ ಜಾತ್ರಾಮಹೋತ್ಸವ

ಕಲಬುರಗಿ:ಕಲಬುರಗಿ ತಾಲೂಕಿನ ಐತಿಹಾಸಿಕ ಹಾಗೂ ಭಾವೈಕ್ಯತೆಗೆ ಪ್ರಸಿದ್ಧವಾದ ಕಲ್ಯಾಣ ನಾಡಿನ ಸಾವಳಗಿ(ಬಿ) ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಜಗದ್ಗುರು ಶಿವಲಿಂಗೇಶ್ವರ ಮಕರ ಸಂಕ್ರಾಂತಿ ಜಾತ್ರಾಮಹೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ.

ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಸಾವಳಗಿ(ಬಿ) ಗ್ರಾಮವು ಹಿಂದು–ಮುಸ್ಲಿಂ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗ್ರಾಮದ ಶಿವಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀಮ.ನಿ.ಪ್ರ.ಸ್ವ. ಗುರುನಾಥ ಮಹಾಸ್ವಾಮಿಗಳ ಘನ ನೇತೃತ್ವದಲ್ಲಿ ದಿನಾಂಕ 15-01-2026 ಹಾಗೂ 16-01-2026ರಂದು ಜಾತ್ರಾಮಹೋತ್ಸವ ಜರುಗಲಿದೆ.

ಜನವರಿ 15ರಂದು ಪಲ್ಲಕಿ ಉತ್ಸವ ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಂಡು ಗ್ರಾಮದ ಐತಿಹಾಸಿಕ ಪರಂಪರೆಯನ್ನು ಮೆರೆದ ಶ್ರೀ ಬಸವಣಪ್ಪ ದೇವಸ್ಥಾನಕ್ಕೆ ಸಂಜೆ 7 ಗಂಟೆಗೆ ತಲುಪಲಿದೆ. ಈ ಸಂದರ್ಭದಲ್ಲಿ ರೈತರು ಬೆಳೆದ ದವಸ ಧಾನ್ಯಗಳನ್ನು ಸಮರ್ಪಿಸಿ, ಜೋಳದ ಸೀತನಿ ಬೆಳಸಿ ಬಡಿಯುವ ಮೂಲಕ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುವುದು. ರಾತ್ರಿ 8 ಗಂಟೆಯ ನಂತರ ಶ್ರೀ ಬಸವಣಪ್ಪ ದೇವಸ್ಥಾನ ಸನ್ನಿಧಿಯಲ್ಲಿ ಇಡೀ ರಾತ್ರಿ ಭಜನೆ, ಗೀಗಿಪದಗಳೊಂದಿಗೆ ಜಾಗರಣೆ ಕಾರ್ಯಕ್ರಮ ನಡೆಯಲಿದೆ.

ಜನವರಿ 16ರಂದು ಬೆಳಗಿನ ಜಾವ ಸುಮಾರು 1 ಗಂಟೆಗೆ ಮಠದ ಪೀಠಾಧಿಪತಿಗಳಾದ ಶ್ರೀ ಗುರುನಾಥ ಮಹಾಸ್ವಾಮಿಗಳು ಪಾದಯಾತ್ರೆಯೊಂದಿಗೆ ಬಜಂತ್ರಿ, ಪಲ್ಲಕಿ ಉತ್ಸವದ ಮೆರವಣಿಗೆಯಲ್ಲಿ ಆಗಮಿಸಿ ಗ್ರಾಮದ ಎಲ್ಲಾ ರಾಜ್ಯಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ಆಶೀರ್ವಾದ ನೀಡಲಿದ್ದಾರೆ. ಪಲ್ಲಕಿ ಉತ್ಸವವು ಬೆಳಿಗ್ಗೆ ಸುಮಾರು 11 ಗಂಟೆಗೆ ಶ್ರೀ ಶಿವಲಿಂಗೇಶ್ವರ ಮಠಕ್ಕೆ ತಲುಪಲಿದೆ.

ಈ ಹಿನ್ನೆಲೆಯಲ್ಲಿ ಶ್ರೀ ಶಿವಲಿಂಗೇಶ್ವರರ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇರುವುದರಿಂದ ಭಕ್ತರು ಸುವ್ಯವಸ್ಥಿತವಾಗಿ ಭಾಗವಹಿಸಿ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ಗ್ರಾಮದ ಸದ್ಭಕ್ತಿ ಮಂಡಳಿ ಮನವಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರವರು ಪತ್ರಿಕಾಗೋಷ್ಠಿ ನಡೆಸಿದರು 

ವಿಶೇಷ ಸೂಚನೆ:ಸೂಪರ್ ಮಾರ್ಕೆಟ್‌ನಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಶ್ರೀ ರಮೇಶ ಆರ್. (ಗ್ರಾ.ಪಂ.ಅ.), ಮಲ್ಲಿಕ್ ಎಂ. ಮಿಂಚನ್, ಯಲ್ಲಾಲಿಂಗರ್, ರಾಘವೇಂದ್ರ, ಶಾಂತಕುಮಾರ್, ಚಂದ್ರಕಾಂತ ಎಂ. ಸಿಂಗೆ, ಸೋಮಲಿಂಗ, ಉಸ್ಮಾನ್ ಲದಾಫ್ ಘನಿ, ಯಮನಯ್ಯ ಗುತ್ತೇದಾರ, ರಾಹುಲ್ ಹಾವನು ಸೇರಿದಂತೆ ಹಲವರು ಉಪಸ್ಥಿತರಿದ್ದರು.