ಪ್ರತಿ ಎಕರೆಗೆ 25,000/ ರೂಪಾಯಿ ಪರಿಹಾರಕ್ಕೆ ಆಗ್ರಹ

ಪ್ರತಿ ಎಕರೆಗೆ 25,000/ ರೂಪಾಯಿ ಪರಿಹಾರಕ್ಕೆ ಆಗ್ರಹ
ಕಲಬುರಗಿ: ಜಿಲ್ಲೆಯು ತುಂಬಾ ಹಿಂದುಳಿದ ಪ್ರದೇಶವಾಗಿದ್ದು, ಈ ಭಾಗದ ರೈತರ ಪ್ರಮುಖ ಬೆಳೆಗಳಾದ ಹೆಸರು, ಉದ್ದು, ತೊಗರಿ, ಸಜ್ಜಿ, ಹತ್ತಿ, ಬಾಳೆ, ಕಬ್ಬು, ತರಕಾರಿ ಬೆಳೆಗಳು ಈಗಾಗಲೇ ಸುರಿಯುತ್ತಿರುವ ಭಾರಿ ಮಳೆಗೆ ಸಂಪೂರ್ಣ ಬೆಳೆಗಳು ಹಾಳಾಗಿ ರೈತ ಕಂಗಾಲಾಗಿದ್ದು ಕೂಡಲೇ ಪ್ರತಿ ಎಕರೆಗೆ 25,000/ ರೂ. ಪರಿಹಾರ ಧನ ನೀಡಬೇಕೆಂದು ಕರವೇ(ಕನ್ನಡಿಗರ ಸಾರಥ್ಯ) ಸಂಘಟನೆಯ ಜಿಲ್ಲಾಧ್ಯಕ್ಷ ಶರಣು ಹೊಸಮನಿ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.
ಈಗಾಗಲೇ ಸಾಲ ಸುಲ ಮಾಡಿ ತನ್ನ ಜಮೀನಿನಲ್ಲಿ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಆದರೆ ಸಂಪೂರ್ಣ ಬೆಳೆ ಹಾಳಾಗಿರುವುದರಿಂದ ಅವರ ಕುಟುಂಬದ ಉಪಜೀವನ ನಡೆಸುವುದು ತುಂಬಾ ದುಸ್ಥರವಾಗಿದೆ.ಜಿಲ್ಲೆಯ ರೈತರ ಬೆಳೆ ಹಾನಿ ಬಗ್ಗೆ ಕೂಡಲೇ ಸಮೀಕ್ಷೆ ಕೈಕೊಂಡು ಪ್ರತಿ ಎಕರೆಗೆ ರೂ: 25,000/- ಸೂಕ್ತ ಪರಿಹಾರ ಧನ ಘೋಷಣೆ ಮಾಡಿ ನಷ್ಟಕ್ಕೆ ಒಳಗಾದ ಪ್ರತಿಯೊಬ್ಬ ರೈತರಿಗೆ ಈ ಪರಿಹಾರ ಧನ ಸಿಗುವ ವ್ಯವಸ್ಥೆ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿಕೊಂಡರು
.