ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕಾಳಜಿ ವಹಿಸಿ

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕಾಳಜಿ ವಹಿಸಿ
ಕಮಲನಗರ: ತಾಲೂಕಿನ ಸೋನಾಳ
ಪ್ರೌಢಶಾಲೆಗಳ ಶಿಕ್ಷಕರು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ವಿಶೇಷ ತರಗತಿ ನಡೆಸಲು ಶ್ರಮಿಸಬೇಕು ಎಂದು ಡಿಡಿಪಿಐ ಸಲೀಂ ಪಾಶಾ ಸಲಹೆ ನೀಡಿದರು. ತಾಲೂಕಿನ ಸೋನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ದಿಢೀರ್ ಭೇಟಿ ನೀಡಿದ ಅವರು 2023-24ನೇ ಸಾಲಿನಲ್ಲಿ ಬೀದರ್ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಕುಸಿದಿದೆ. ಇಂದಿನಿಂದಲೇ ವಿಷಯವಾರು ವಿಶೇಷ ತರಗತಿ ತೆಗೆದುಕೊಂಡು ಪ್ರಸ್ತುತ ಸಾಲಿನಲ್ಲಿ 70ಕ್ಕೂ ಹೆಚ್ಚು ಫಲಿತಾಂಶಕ್ಕೆ ಪ್ರಯತ್ನ ಮಾಡಿ ಎಂದು ಹೇಳಿದರು.
ಶಿಕ್ಷಕರು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಿ ಉತ್ತರ ಬರೆಯುವುದಕ್ಕೆ ಉತ್ತೇಜನ ನೀಡಿ, ಧೈರ್ಯ ತುಂಬವ ಕೆಲಸ ಮಾಡಬೇಕು ಎಂದರು. ಅಲ್ಲದೆ, ಕುಡಿಯುವ ನೀರು, ಶಾಲೆ ಕೋಣೆಗಳು, ಅಡುಗೆ ಕೋಣೆ ಸೇರಿದಂತೆ ಇನ್ನಿತರ ಕಚೇರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮುಖ್ಯಗುರು ಪ್ರಕಾಶ ಸ್ವಾಮಿ, ಅಂದನಗೌಡ, ಖರಾಬೆ, ರಮೇಶ ಭವರಾ, ಚಂದ್ರಮೂನಿ ಗೋಖಲೆ, ಸುಜಾತಾ ಡೋಂಬಾಳೆ, ವಸಂತ ಲಕ್ಷ್ಮಿ ಇದ್ದರು.