ವಿಶ್ವಕರ್ಮ ಜಯಂತಿ ಅದ್ದೂರಿ ಆಚರಣೆ

ವಿಶ್ವಕರ್ಮ ಜಯಂತಿ ಅದ್ದೂರಿ ಆಚರಣೆ
ಕಲಬುರಗಿ: ವಿಶ್ವಕರ್ಮ ಹೋರಾಟ ಸಮಿತಿ ಹಾಗೂ ವಿಶ್ವಕರ್ಮ ಸಮಾಜ ಕಲಬುರಗಿ ದಕ್ಷಿಣ ವಲಯದ ಸಂಯುಕ್ತಾಶ್ರಯದಲ್ಲಿ ವಿಶ್ವಕರ್ಮ ಜಯಂತಿಯ ನಿಮಿತ್ಯ ವಿಶ್ವಕರ್ಮರ ಭಾವಚಿತ್ರವನ್ನು ನಗರದ ರಾಮ ಮಂದಿರದಿಂದ ಕರುಣೇಶ್ವರ ನಗರದವರೆಗೆ ಭವ್ಯ ಮೆರವಣಿಗೆ ನಡೆಸಿ ಸಂಭ್ರಮದಿಂದ ಆಚರಿಸಲಾಯಿತು.
ಬೃಹತ್ ಮೆರವಣಿಗೆಗೆ ವಿಶ್ವಕರ್ಮ ಸಮಾಜದ ಪೂಜ್ಯ ಪ್ರಣವನಿರಂಜನ ಸ್ವಾಮಿಜಿ, ಪೂಜ್ಯ ಬ್ರಹ್ಮಾನಿ ಬೆಂದ ಸ್ವಾಮಿಜಿ ನೀಲಕಂಠರಾವ ಸ್ವಾಮೀಜಿ ಹಾಗೂ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಚಾಲನ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಅವರ ಮೋದಿಯವರು ಜನ್ಮದಿನದ ಪ್ರಯುಕ್ತ ಭಾವಚಿತ್ರವನ್ನು ಸಹ ನೂರಾರು ಮುತ್ತೈದೆಯರಿಂದ ಕುಂಭಕಳಸದೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯು ವಿಶ್ವಕರ್ಮ ಹೋರಾಟ ಸಮಿತಿಯ ಅಧ್ಯಕ್ಷರಾದ ದೇವಿಂದ್ರ ದೇಸಾಯಿ ಕಲ್ಲೂರ, ವಿಶ್ವಕರ್ಮ ಸಮಾಜದ ಮುಖಂಡರಾದ ಮನೋಹರ ಪೊದ್ದಾರ, ಕಮಲಾಕರ ಅಣಕಲ್, ಶಿವಾನಂದ ತೆಲ್ಲೂರ, ಭಗವಂತ ಸುತಾರ, ಗಂಗಾಧರ ಸುತಾರ, ರುದ್ರೇಶ ಸುತಾರ, ರಾಕೇಶ ಪೊದ್ದಾರ, ಲೊಕೇಶ ಶೀಲವಂತ, ಅಶೀಕ ಪೊದ್ದಾರ, ಗುಂಡಣ್ಣ ಸುತಾರ, ದಯಾನಂದ ಸುತಾರ, ಮೌನೇಶ ಸುತಾರ, ವಿಜಯಕುಮಾರ ಮಳ್ಳಿ, ಎಂ.ಕೆ. ಪಾಟೀಲ ಸೇರಿದಂತೆ ಅನೇಕರಿದ್ದರು.