ಸ್ಲಂ ಜನಾಂದೋಲನ ಕನಾಟಕ ಜಿಲ್ಲಾ ಘಟಕ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ

ಸ್ಲಂ ಜನಾಂದೋಲನ ಕನಾಟಕ ಜಿಲ್ಲಾ ಘಟಕ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ
ಕಲಬುರಗಿ: ಕಲಬುರಗಿ ಮತ್ತು ಯಾದಗೀರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ರಾಮ ನಗರ(ಭಾಗ-2) ಸಂಜುನಗರ (ಭಾಗ -2), ಮೋನೆಶ್ವರ ನಗರ, ಶಶಿಧರ ನಗರ, ಮದನಪೂರ (ಭಾಗ-2) ತಪ್ಪಡಗೇರಾ, ಗಂಗಾನಗರ, ಅಘೋಶಿತ ಸ್ಲಂ ಗಳನ್ನು ಸ್ಲಂ ಕಾಯ್ದೆ 1975 ರ ಕಲಂ 3 ಪಿ ಅಡಿಯಲ್ಲಿ ಸ್ಲಂ ಎಂದು ಘೋಷಿಸಿ ಮೂಲಭೂತ ಸೌಲಭ್ಯ ಒದಗಿಸಲು 3 ವರ್ಷಗಳ ಕಾಲ ವಿಳಂಬ ಮಾಡಿದ ಸ್ಲಂ ಬೋರ್ಡ ಅಧಿಕಾರಿಗಳಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರುಗಳಾದ ಶ್ರೀಧರ ಸಾರವಾಡ ಮತ್ತು ದೇವಿಂದ್ರಕುಮಾರ ಇವರುಗಳನ್ನು ಅಮಾನತ್ತು ಮಾಡಿ ಅಘೋಶಿತ ಸ್ಲಂ ಗಳನ್ನು ಸ್ಲಂ ಎಂದು ಘೋಷಣೆ ಮಾಡಬೇಕೆಂದು ಸ್ಲಂ ಜನಾಂದೋಲನ ಕನಾಟಕ ಜಿಲ್ಲಾ ಘಟಕ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಸ್ಲಂ ಗಳಲ್ಲಿ ಅಲೆಮಾರಿ ಜನಾಂಗ, ಎಸ್ ಸಿ ಜನಾಂಗದವರು ಹೆಚ್ಚು ಮಾಡುತ್ತಿದ್ದಾರೆ ಈ ಸ್ಲಂ ಗಳನ್ನು ಘೋಷಣೆ ಮಾಡಿ ನೀರು,ಚರಂಡಿ ಬೀದಿ ದೀಪ,ರಸ್ತೆ,ಮತ್ತು ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡಲು ಸುಮಾರು ಮೂರು ವರ್ಷಗಳಿಂದ ಹೋರಾಟದ ಮುಖಾಂತರ ಮನವಿ ನೀಡಿದರು ಕೂಡ ಸಹಾಯಕ ಕಾರ್ಯನಿರ್ವಾಹ ಅಭಿಯಂತರು ಗಳು ಇದುವರೆಗೂ ಯಾವುದೆ ಕ್ರಮ ಕೈ ಗೊಳ್ಳದೆ ನಿರ್ಲಕ್ಷ್ಯವಹಿಸಿ ಸ್ಲಂ ಜನರನ್ನು ವಂಚಿಸಿದ್ದಾರೆ. ಈ ಸ್ಲಂ ಗಳಲ್ಲಿ ಮಹಿಳಾ ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯ ವಿಲ್ಲದೆ ಇರುವುದರಿಂದ ಸ್ಲಂ ಜನರ ಬಹಳ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳಾದ ತಾವುಗಳು ಸಾಮಾಜಿಕ ನ್ಯಾಯದಡಿ ಸಂವಿಧಾನ ಬದ್ದ ಹಕ್ಕುಗಳಾದ ಅಘೋಷಿತ ಸ್ಲಂ ಗಳನ್ನು ಶೀಘ್ರದಲ್ಲಿ ಸ್ಲಂ ಎಂದು ಘೋಷಿಸಲು ಅಧಿಕಾರಿಗಳಿಗೆ ಆದೇಶಿಸ ಬೇಕು ಮತ್ತು ಸುಮಾರು ವರ್ಷಗಳಿಂದ ಸ್ಲಂ ಜನರಿಗೆ ಮೂಲಭೂತ ಸೌಲಭ್ಯಗಳಾದ ನೀರು ಚರಂಡಿ ಬೀದಿ ದೀಪ, ಮಹಿಳೆಯರಿಗೆ ಶೌಚಾಲಯಗಳನ್ನು ಒದಗಿಸದ ಸಹಾಯಕ ಕಾರ್ಯನಿರ್ವಾಕ ಅಭಿಯಂತರರನ್ನು ಕೂಡಲೆ ಅಮಾನತ್ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ಹಣಮಂತ ಶಹಾಪೂರಕರ್, ಉಪಾಧ್ಯಕ್ಷೆ ದ್ಯಾನಮ್ಮ, ಸಂಚಾಲಕಿ ರೇಣುಕಾ ಸರಡಗಿ ಇದ್ದರು.