ಪುರಾಣ ಪ್ರವಚನಗಳಿಂದ ಸನ್ಮಾರ್ಗದಡಿಗೆ: ಡಾ. ಶಿವಶಂಕರ ಬಿರಾದಾರ

ಪುರಾಣ ಪ್ರವಚನಗಳಿಂದ ಸನ್ಮಾರ್ಗದಡಿಗೆ: ಡಾ. ಶಿವಶಂಕರ ಬಿರಾದಾರ

ಪುರಾಣ ಪ್ರವಚನಗಳಿಂದ ಸನ್ಮಾರ್ಗದಡಿಗೆ: ಡಾ. ಶಿವಶಂಕರ ಬಿರಾದಾರ

ಶಹಾಪುರ, ಏಪ್ರಿಲ್ 20: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಸಂಸ್ಕಾರವನ್ನು ಮರೆತು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರು ಶರಣರ ಆಚಾರ-ವಿಚಾರಗಳನ್ನು ಪಾಲಿಸಿದರೆ ಜೀವನವೇ ಸ್ವರ್ಗವಾಗಬಹುದು ಎಂದು ಡಾ. ಶಿವಶಂಕರ ಬಿರಾದಾರ ಹೇಳಿದರು.

ನಗನೂರ ಶರಣಬಸವೇಶ್ವರ ಮಹಾ ಮಠದಲ್ಲಿ ನಡೆದ 17 ದಿನಗಳ ಶರಣಬಸವೇಶ್ವರ ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೊಬೈಲ್ ಮತ್ತು ಟಿವಿಗಳ ಅತಿಯಾಗಿ ಬಳಸುವುದರಿಂದ ಮಕ್ಕಳು ನಾಗರಿಕತೆಯನ್ನೂ, ತಾಯಿ-ತಂದೆಗಳ ಮೌಲ್ಯವನ್ನೂ ಮರೆತು, ದಿಕ್ಕು ತಪ್ಪಿದ ಜೀವನ ನಡೆಸುತ್ತಿದ್ದಾರೆ. ಶರಣರ ಪುರಾಣ ಪ್ರವಚನಗಳು ಮಕ್ಕಳಿಗೆ ಸಂಸ್ಕಾರದ ಮಾರ್ಗ ತೋರಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಶರಣಗೌಡ ಪಾಟೀಲ ಪಾಳಾ ಅವರು ಮಾತನಾಡಿ, “ಮಕ್ಕಳಿಗೆ ವಿದ್ಯೆಯ ಜತೆಗೆ ಸಂಸ್ಕಾರ ಅತೀ ಅವಶ್ಯಕ. ನಯ, ವಿನಯ ಮತ್ತು ಶಿಸ್ತಿನಿಂದ ಬೆಳೆಸಿದರೆ ಅವರು ದೇಶದ ಅಮೂಲ್ಯ ಆಸ್ತಿ ಆಗಬಹುದು” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ನಗನೂರ ಶರಣಬಸವೇಶ್ವರ ಪೀಠಾಧಿಪತಿಗಳಾದ ಶರಣಪ್ಪಾ ಅಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಅವರು ಈವರೆಗೂ 75 ನವಜೋಡಿಗಳ ಉಚಿತ ಸಾಮೂಹಿಕ ವಿವಾಹವನ್ನು ಯಶಸ್ವಿಯಾಗಿ ಹಮ್ಮಿಕೊಂಡಿರುವುದು ವಿಶೇಷ.

ರುದ್ರಯ್ಯ ಶಾಸ್ತ್ರಿಗಳು ಪುರಾಣ ಪ್ರವಚನ ನೀಡಿದರು, ಜಗದೀಶ ಶರಣರು ನಗನೂರ ಸಂಗೀತ ಸೇವೆ ಸಲ್ಲಿಸಿದರು ಹಾಗೂ ನಾಗರಾಜಅವರು ತಬಲಾ ಸೇವೆ ಸಲ್ಲಿಸಿದರು.