ಸಾಸಬಾಳ ಜ್ಞಾನಭಾರತಿ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

ಸಾಸಬಾಳ ಜ್ಞಾನಭಾರತಿ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ
ಸಿಂದಗಿ: ಸಾಸಬಾಳ ಗ್ರಾಮದ ಜ್ಞಾನಭಾರತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 5ನೇ ವಾರ್ಷಿಕ ಸ್ನೇಹ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಕೋಚಿಂಗ್ ಸೆಂಟರ್‌ಗಳು ವಿಶೇಷ ಅನುಕೂಲವಾಗಿದ್ದು, ಗುಣಮಟ್ಟದ ಶಿಕ್ಷಣ ಈಗ ಊರಿನಲ್ಲೇ ಲಭ್ಯವಾಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಭರತ್ ಮನಗೂಳಿ ಅಭಿಪ್ರಾಯಪಟ್ಟರು.
ಶಾಲೆಯಿಂದ ಈ ವರ್ಷ 40 ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ಶಾಲೆ, ಆಳ್ವಾಸ್ ಸೈನಿಕ್ ಶಾಲೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದು, ಇದು ಶಾಲೆಯ ಶೈಕ್ಷಣಿಕ ಸಾಧನೆಯುಳ್ಳ ಪ್ರತಿಬಿಂಬವಾಗಿದೆ ಎಂದು ಶಾಲೆಯ ಕಾರ್ಯದರ್ಶಿ ಮಾಳಿಂಗರಾಯ ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಮಾಳಿಂಗರಾಯ ಮತ್ತು ಅಂಬಿಕಾ ದಂಪತಿಗಳು ಸೇರಿದಂತೆ ಶಾಲೆಯ ಅಧ್ಯಕ್ಷ ಹಣಮಂತರಾಯ ನಿಲವಂಜಿ, ನಿಂಗಣ್ಣ ಮುತ್ಯಾ, ಮಾಂತೇಶ್ ಸಾತಿಹಾಳ, ಸಿದ್ದಣ್ಣ ಪೂಜಾರಿ, ಗೌಡಣ್ಣ ಆಲಮೇಲ, ರವಿರಾಜ್ ದೇವರಮನಿ, ಭರತ್ ಮನಗೂಳಿ, ಬಾಬುಗೌಡ ಬಿರಾದರ್, ಶಾಂತಪ್ಪ ಕಲಕೇರಿ ಮತ್ತು ಭೀಮ ಹರಿಜನ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳು, ಪೋಷಕರು, ಊರಿನ ಗುರುಹಿರಿಯರು ಸೇರಿದಂತೆ ಅನೇಕರು ಭಾಗವಹಿಸಿ ಸಂಭ್ರಮಿಸಿದರು.
ವರದಿ: ಜೆಟ್ಟಪ್ಪ ಎಸ್. ಪೂಜಾರಿ