ಶರಣರ ನಾಡಿನಲ್ಲಿ ರಾಜ್ಯ ಮಟ್ಟದ 12 ನೇ ಕದಳಿ ಮಹಿಳಾ ಸಮಾವೇಶಕ್ಕೆ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳವರಿಗೆ ಅಧಿಕೃತ ಆಹ್ವಾನ
ಶರಣರ ನಾಡಿನಲ್ಲಿ ರಾಜ್ಯ ಮಟ್ಟದ 12 ನೇ ಕದಳಿ ಮಹಿಳಾ ಸಮಾವೇಶಕ್ಕೆ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳವರಿಗೆ ಅಧಿಕೃತ ಆಹ್ವಾನ
ಮೈಸೂರು : ಕಲಬುರಗಿರಯಲ್ಲಿ ರಾಜ್ಯ ಮಟ್ಟದ ಕದಳಿ ಸಮಾವೇಶ ನಡೆಯಲಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಮಲ್ಲಿಕಾರ್ಜುನ ವಡ್ಡನಕೇರಿ ತಿಳಿಸಿದರು.
ಇಂದು ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳವರಿಗೆ ಕಲ್ಬುರ್ಗಿಯಲ್ಲಿ ನಡೆಯಲಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ಕದಳಿ ಸಮಾವೇಶಕ್ಕೆ ಶ್ರೀ ಮಲ್ಲಿಕಾರ್ಜುನ ವಡ್ಡನಕೇರಿ ಹಾಗೂ ಪದಾಧಿಕಾರಿಗಳು ಆಹ್ವಾನ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಬಸವರಾಜ್ ಮರಬದ ಗಣಪತಿ ಶಿಂದೆ ಶ್ರೀ ಶಾಂತಲಿಂಗ ಪಾಟೀಲ್ ಕೋಳಕೂರ ಚನ್ನಬಸಪ್ಪ ರೇವೂರ್ ಉಪಸ್ಥಿತರಿದ್ದರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳಿಗೆ ಶ್ರೀಮಠದಿಂದ ಪೂಜ್ಯರು ಗೌರವಿಸಿ ಸನ್ಮಾನಿಸಿದರು