ಬಿದಿ ವ್ಯಾಪಾರಿಗಳ ಸಂಘದಿಂದ: ಯುಗಾದಿ ಮತ್ತು ರಂಜಾನ್ ಸೌಹಾರ್ದ ಆಹಾರ ಕಿಟ್ ವಿತರಣೆ

ಬಿದಿ ವ್ಯಾಪಾರಿಗಳ ಸಂಘದಿಂದ: ಯುಗಾದಿ ಮತ್ತು ರಂಜಾನ್  ಸೌಹಾರ್ದ ಆಹಾರ ಕಿಟ್ ವಿತರಣೆ

ಬಿದಿ ವ್ಯಾಪಾರಿಗಳ ಸಂಘದಿಂದ: ಯುಗಾದಿ ಮತ್ತು ರಂಜಾನ್ ಸೌಹಾರ್ದ ಆಹಾರ ಕಿಟ್ ವಿತರಣೆ

ಕಲಬುರಗಿ: ಬಡವರು ಕೂಡ ಎಲ್ಲರಂತೆ ತಮ್ಮ ಹಬ್ಬಗಳನ್ನು ಉತ್ಸಹದಿಂದ ಆಚರಿಸಲು ನೆರವಿನ ಅಗತ್ಯವಿದೆ ಈ ನಿಟ್ಟಿನಲ್ಲಿ ಬೀದಿ ವ್ಯಾಪಾರಿಗಳ ಸಂಘ ಆಹಾರ ಕಿಟ್ ವಿತರಣೆ ಮಾಡುತ್ತಿರುವುದು ಸಮಾಜಕ್ಕೆ ಮಾದರಿ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜೀ. ನಮೋಶಿ ಅವರು, ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಗುರುವಾರ ಮಾ. ೧೯ ರಂದು ಅಖಿಲ ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘ ಆಯೋಜಿಸಿದ್ದ ಸೌಹಾರ್ದ ಯುಗಾದಿ ಮತ್ತು ರಂಜಾನ್ ಕಿಟ್ ಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು, ಮಾತನಾಡಿದರು.

ಮಳಖೇಡ ಮುತ್ತ್ಯ ಹಜರತ್ ಸೈಯದ್ ಷಾ ಮುಸ್ತಾಕ್ ಸಾಹೇಬರು ಹಾಗು ಹಿರಿಯ ನ್ಯಾಯವಾದಿ ಎ.ಕೆ. ಕಲಬುರಗಿ ಅವರು, ಬಡ ಹಿಂದೂ ಮತ್ತು ಮುಸ್ಲೀಮರಿಗೆ ಕಿಟ್ ವಿತರಣೆ ಮಾಡುವ ಮೂಲಕ ಸೌಹಾರ್ದ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೀದಿ ವ್ಯಾಪಾರಿಗಳ ಸಂಘ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ಅವರು, ಪ್ರತಿ ವರ್ಷ ಸಂಘದ ವತಿಯಿಂದ ಯುಗಾದಿ ದಸರಾ ದೀಪಾವಳಿ ಮತ್ತು ಪವಿತ್ರ ರಂಜಾನ್ ಹಬ್ಬಗಳಂದು ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಲು ಇಲ್ಲಿ ನೆರೆದಿರುವ ಅಕ್ಕ ತಂಗಿಯರು ಮತ್ತು ತಾಯಿಯಂದಿರ ಆಶೀರ್ವಾದವೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಮಹಾದೇವಪ್ಪ ನಿಲಕೋಡ, ಮಾಜಿ ಮೇಯರ್ ಭೀಮರೆಡ್ಡಿ ಪಾಟೀಲ್ ಕುರಕುಂದ, ಕಸಾಪ ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್ ತೇಗಲತಿಪ್ಪಿ, ಹಿರಿಯ ಪತ್ರಕರ್ತ ಭವಾನಿ ಸಿಂಗ್ ಠಾಕೂರ್, ಅಮೃತ ಸಿ.ಪಾಟೀಲ ಸಿರನೂರ, ರವಿ ಒಂಟಿ, ಶಿವ ಜಟ್ಟೆಪ್ಪ, ಜಂಗಲ್ ಸಿಂಗ್, ಚಂದ್ರಹಾಸ ಜೀತ್ರಿ, ಚಂದ್ರಕಾAತ ಪಾಟೀಲ್, ಶಿವಾನಂದ ಚಿಟ್ಟಾಣಿ, ಸುಧೀರ್, ಬಾ. ಮೃನೂದ್ದೀನ ,ವೀರಣ್ಣ ಪಟ್ಟೆದಾರ್, ಫಾತಿಮಾ ಶೆಕ್, ಗುರುರಾಜ್ ತೆಳಗೊಳ, ಅಣ್ಣಾರಾವ ಪಾಟೀಲ್, ಹಣಮಂತ ಮಂದರಗಿ, ಮಹೇಶ್ ಸೂರ್ಯವಂಶಿ ಸಂಘದ ಪ್ರಮುಖರು ಮತ್ತು ಬೀದಿ ವ್ಯಾಪಾರಿಗಳು ಭಾಗವಹಿಸಿದ್ದರು.