ಹಳ್ಳಿಗಳೇ ದೇಶಿ ಸಂಸ್ಕøತಿಯ ತವರು : ಎಂ.ಎಸ್.ಹಿರೇಮಠ
ಹಳ್ಳಿಗಳೇ ದೇಶಿ ಸಂಸ್ಕೃತಿಯ ತವರು : ಎಂ.ಎಸ್.ಹಿರೇಮಠ
ಕಮಲನಗರ: ಜನಪದದಂತಹ ಕರುಳಿನ ಸಾಹಿತ್ಯ, ವಚನಗಳಂತಹ ವೈಚಾರಿಕ ಸಾಹಿತ್ಯ, ತತ್ವಪದಗಳಂತಹ ಅನುಭಾವ ಸಾಹಿತ್ಯದ ಸಮೃದ್ಧಿಯನ್ನು ಹೊಂದಿರುವ ಪ್ರತಿ ಹಳ್ಳಿಗಳಲ್ಲಿಯೇ ದೇಶಿ ಸಂಸ್ಕøತಿಯ ತವರು ನೆಲವಾಗಿದೆ ಎಂದು ರಂಭಾಪುರಿ ಪೀಠದ ಅಧಿನದ ಹಿರೇಮಠ ಟ್ರಸ್ಟ್‍ನ ಸಂಸ್ಥಾಪಕ ಎಂ.ಎಸ್.ಹಿರೇಮಠ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಡಿಗ್ಗಿ ಗ್ರಾಮದ ಮಡಿವಾಳೇಶ್ವರ ಮಂದಿರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸಂಜೀವಕುಮಾರ ಪಾಟೀಲ್ ನೇತೃತ್ವದಲ್ಲಿ ಚೈತ್ರ ಮಾಸದ ವರ್ಷಾರಂಭದ ಸ್ವಾಗತ ಸಮಾರಂಭದಲ್ಲಿ ಅವರು ಸಾನಿಧ್ಯ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಪಂಚಾಂಗದಂತೆ ಚೈತ್ರ ಮಾಸವು ವರ್ಷಾರಂಭದ ಮೊದಲ ಮಾಸವಾಗಿದೆ. ಹಾಗೇಯೇ ಯುಗದ ಆದಿಯಿಂದ ಯುಗಾದಿಯ ವಸಂತ ಖುತುವಿನ ಚೈತ್ರ ಮಾಸ ಶುದ್ಧ ಪಾಡ್ಯಮಿಯ ಹೊಸ ವರ್ಷದ ಮೊದಲು ಆಚರಿಸುವ ಹಬ್ಬ ಇದಾಗಿದೆ ಎಂದು ವಿವರಿಸಿದರು.
ಯುಗಾದಿ ಹಬ್ಬದಂದು ಪ್ರತಿಯೊಬ್ಬ ರೈತ ಸಮುದಾಯ ಜನ ಸಾಮನ್ಯರು ಬೆಲಿಗ್ಗೆ ಶುದ್ಧ ಜಳಕವನ್ನು ಮಾಡಿ ಮಾವು-ಬೇವಿನಿಂದ ಮಾಡಿದ ಕಸಾಯಿ, ಬೇವು ತಿನ್ನುವುದು. ಬೇವು ತಿಂದು ಕೂಂಟಿ, ಕೂರಿಗೆ, ನೇಗಿಲು ಉಪಕರಣಗಳಿಗೆ ಪೂಜೆ ಸಲ್ಲಿಸಿ ಒಂದೇರಡು ಗಂಟೆ ಹೊಲದಲ್ಲಿ ಮಣ್ಣನ್ನು ತಿರುವುಗೊಳಿಸುವುದು ಅಥವಾ ಮಣ್ಣನ್ನು ಹದಮಾಡುವ ಕಾರ್ಯಕ್ಕೆ ತೊಡಗಿಸಿಕೊಂಡು ಮನೆಗೆ ತೆರಳಿ ಇಷ್ಟ ದೇವತಾ ಪೂಜೆ ಸಲ್ಲಿಸಿ ಮನೆಯಲ್ಲಿ ಮಾಡಿದ ಸಿಹಿತಿಂಡಿ ತಿನಿಸುಗಳನ್ನು ಸವಿದು ಸೃಷ್ಟಿಕೃತನಾದ ಬ್ರಹ್ಮದೇವನ ಕಾಲಪುರುಷನ ಹಾಗೂ ವರ್ಷಾಧಿಪತಿ ಆರಾಧನೆ ಚಂದ್ರದರ್ಶನ ಇವು ಯುಗಾದಿಯ ವೈಶಿಷ್ಯಗಳನ್ನು ಅಚ್ಚುಕಟ್ಟಾಗಿ ಆಚರಿಸಿ ಸಂಭ್ರಮಿಸುವುದಾಗಿದೆ ಎಂದರು.
ಪುಜಾರಿ ಚಂದ್ರಕಾಂತ ಸ್ವಾಮಿ, ಮಾದಯ್ಯ ಸ್ವಾಮಿ, ಮಹೇಶ ಸ್ವಾಮಿ, ಮುಖಂಡ ವಿಜಯಕುಮಾರ ಪಾಟೀಲ, ದೇವೇಂದ್ರ ಪಾಟೀಲ, ಮಡಿವಾಳಪ್ಪ ಮುರ್ಕೆ, ಸೂರ್ಯಕಾಂತ ಬಿರಾದಾರ, ಸತೀಷ ರಾಂಪುರೆ, ಮನ್ಮಥಪ್ಪ, ಬಾಲಾಜಿ, ಆಕಾಶ, ಸಂದೀಪ ಪಾಟೀಲ, ಶಿವಪ್ಪ, ಧನರಾಜ, ನೀಲಕಂಠ, ಸಿದ್ರಾಮ ಸೇರಿದಂತೆ ಗ್ರಾಮದ ಗಣ್ಯರು ಇದ್ದರು.
