ಡೊಂಗರಗಾಂವ ಗ್ರಾಮದ ಮನೆಗಳಿಗೆ ನುಗ್ಗಿದ ನೀರು, ಜನರು ಹೈರಾಣ

ಡೊಂಗರಗಾಂವ ಗ್ರಾಮದ ಮನೆಗಳಿಗೆ ನುಗ್ಗಿದ ನೀರು, ಜನರು ಹೈರಾಣ
ಕಮಲಾಪುರ: ತಾಲ್ಲೂಕಿನ ಡೊಂಗರಗಾಂವನಲ್ಲಿ ಸುರಿದ ಧಾರಾಕಾರ ಮಳೆಗೆ ಮನೆಗಳಿಗೆ ನೀರು ಹೊಕ್ಕು ಅಪಾರ ಪ್ರಮಾಣದ ಹಾನಿಯಾಗಿದೆ.
ತಾಲೂಕಿನ ಡೊಂಗರಗಾಂವ ಗ್ರಾಮದ ಜಮೀನುಗಳಿಂದ ಹರಿದು ಬಂದ ನೀರಿನ ಪ್ರವಾಹ ಊರೊಳಗೆ ಹೊಕ್ಕಿದೆ. ಹೀಗಾಗಿ ಮನೆಗಳಿಗೆ ನೀರು ನುಗ್ಗಿದೆ. ಇನ್ನುಳಿದ ಮನೆಯ ಗೊಡೆಗಳಿಂದ ನೀರು ಜಿನುಗುತ್ತಿದ್ದವು. ಹೀಗಾಗಿ ಶೇಖರಿಸಿ ಇಟ್ಟ ಧವಸ ಧಾನ್ಯಗಳೆಲ್ಲ ತೊಯ್ದು ತೊಪ್ಪೆಯಾಗಿ ಅಪಾರ ಹಾನಿಯಾಗಿದೆ.
ತಹಶೀಲ್ದಾರರಾದ ಮೊಹಮ್ಮದ ಮೋಸಿನ ಅಹಮ್ಮದ ಭೇಟಿ ನೀಡಿ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರಿದಿದ್ದು, ಸದ್ಯ ಕೆಲವರಿಗೆ ಅಲ್ಲಿಯೇ ಆಶ್ರಯ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡೊಂಗರಗಾಂವ ಗ್ರಾಮ ಪಂಚಾಯತ ಅಧ್ಯಕ್ಷ ಅನೀಲಕುಮಾರ ಪಿ ಬೆಳಕೇರಿ,ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಮಂಜುನಾಥ ಶಿಂಧೆ, ಶಿವುಕುಮಾರ ಜನಕಟ್ಟಿ ಗ್ರಾಮ ಪಂಚಾಯತ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಇದ್ದರು.