ಬೇಲಿಮಠ ಸಂಸ್ಥಾನದ ಅಧಿಪತಿಗಳಾದ ಪೂಜ್ಯ ಶ್ರೀ ಶಿವರುದ್ರ ಮಹಾಸ್ವಾಮಿಗಳಿಗೆ “ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ"

ಬೇಲಿಮಠ ಸಂಸ್ಥಾನದ ಅಧಿಪತಿಗಳಾದ ಪೂಜ್ಯ ಶ್ರೀ ಶಿವರುದ್ರ ಮಹಾಸ್ವಾಮಿಗಳಿಗೆ “ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ"
ಕಲಬುರಗಿ: ಬೆಂಗಳೂರು ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಕಲಬುರಗಿ ಬಸವ ಸಮಿತಿ ವತಿಯಿಂದ ಪ್ರತಿವರ್ಷ ನೀಡಲಾಗುವ “ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ-2025” ಈ ಬಾರಿ ಬೆಂಗಳೂರಿನ ಬೇಲಿಮಠ ಸಂಸ್ಥಾನದ ಅಧಿಪತಿಗಳಾದ ಪೂಜ್ಯ ಶ್ರೀ ಶಿವರುದ್ರ ಮಹಾಸ್ವಾಮಿಗಳಿಗೆ ಪ್ರದಾನ ನೀಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ವಿಲಾಸ ವತಿ ಖುಬಾ ಹೇಳಿದರು
ಸೆಪ್ಟೆಂಬರ್ 10 ರಂದು ಬಸವ ಸಮಿತಿ ಸಂಸ್ಥಾಪಕರಾದ ಭಾರತದ ಮಾಜಿ ರಾಷ್ಟ್ರಪತಿ ಡಾ. ಬಿ.ಡಿ. ಜತ್ತಿ ಅವರ ಜನ್ಮದಿನದ ಅಂಗವಾಗಿ, ಪ್ರತಿವರ್ಷ “ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ” ಆಯೋಜಿಸಲಾಗುತ್ತಿದೆ. 2017 ರಿಂದ ಪ್ರಾರಂಭವಾದ ಈ ಗೌರವ ಸಮಾರಂಭದಲ್ಲಿ, ಧರ್ಮ, ಸಾಹಿತ್ಯ, ಸಂಶೋಧನೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಹಾಗೂ ಸಂಸ್ಥೆಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಸಂಪ್ರದಾಯ ಇದೆ.
ಅತ್ಯಂತ ಸರಳತೆ, ಸಜ್ಜನತೆ ಮತ್ತು ವಿದ್ವತ್ತಿನಿಂದ ಪ್ರಸಿದ್ಧರಾಗಿರುವ ಪೂಜ್ಯ ಶಿವರುದ್ರ ಮಹಾಸ್ವಾಮಿಗಳು ಬಾಲ್ಯದಿಂದಲೇ ಬಸವತ್ತ್ವಗಳ ಅಧ್ಯಯನ ಮಾಡಿ, ತಮ್ಮ ಜೀವನವನ್ನು ಬಸವ ಧರ್ಮದ ಪ್ರಚಾರಕ್ಕೆ ಅರ್ಪಿಸಿದ್ದಾರೆ. ಅವರ ನಿರಂತರ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ, ಈ ವರ್ಷದ ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿಗೆ ಶ್ರೀ ಗಳು ಭಾಜನರಾಗಿ ಆಯ್ಕೆಗೊಂಡಿದ್ದಾರೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಇಂದು ದಿನಾಂಕ 14-09-2025 , ಕಲಬುರಗಿಯ ಜಯನಗರದ ಅನುಭವ ಮಂಟಪದಲ್ಲಿ ಜರುಗಲಿದೆ ಎಂದು ಡಾ ಆನಂದ ಸಿದ್ದಾಮಣಿ ತಿಳಿಸಿದರು