2 ಕೋಟಿ 12 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೋಳುತ್ತಿರುವ ಮೌಲಾನಾ ಆಜದ್ ಶಾಲೆಯ ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆ : ಕ್ರಮಕ್ಕೆ ಜಗನ್ನಾಥ ಕೊಡಂಬಲ್ ಆಗ್ರಹ

ಚಿಂಚೋಳಿ : ತಾಲೂಕಿನ ಪೋಲಕಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಆದರ್ಶ ವಿದ್ಯಾಲಯ ಹತ್ತಿರ ರಾಜ್ಯ ಅಲ್ಪ ಸಂಖ್ಯಾತ ಇಲಾಖೆಯ 2 ಕೋಟಿ 12 ಲಕ್ಷ ರು ಅನುದಾನದಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES) ವು ನಿರ್ಮಾಣಗೊಳಿಸುತ್ತಿರುವ ಮೌಲಾನ ಆಜಾದ್ ಶಾಲೆಯ ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿಕೊಂಡಿರುವ ಕಾಮಗಾರಿ ನಡೆಸಲಾಗುತ್ತಿದೆ ಎಂದು ಪೋಲಕಪಳ್ಳಿ ಗ್ರಾಮದ ಮುಖಂಡ ಜಗನ್ನಾಥ ಕೊಡಂಬಲ್ ಆರೋಪಿಸಿ, ದೂರಿದ್ದಾರೆ.

ಜಿಲ್ಲೆಯಲ್ಲಿಯೇ ಹಿಂದುಳಿದ ತಾಲೂಕು ಚಿಂಚೋಳಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸರಕಾರ ಕೋಟಿ ಗಟ್ಟಲೆ ಹಣ ಸುರಿಯುತ್ತಿರುವ ಸಂಧರ್ಭದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದಕ್ಕಾಗಿ 2ಕೋಟಿ 12 ಲಕ್ಷ ಬಿಡುಗಡೆಗೊಂಡ ಮೌಲಾನಾ ಆಜದ್ ಶಾಲೆಯ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸೇರಿಕೊಂಡು ಸಂಪೂರ್ಣ ಕಳಪೆ ಮಟ್ಟದಲ್ಲಿ ನಿರ್ಮಾಣಗೋಳಿಸುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಮರಳು ಸಿಮೆಂಟ್ ಉಪಯೋಗಿಸದೆ ಕಪ್ಪು ಬುಸಾದಿಂದ ಕಟ್ಟಡ ನಿರ್ಮಾಣ ಮಾಡುತ್ತಿರುವ ಇಂಜಿನಿಯರ ಮತ್ತು ಗುತ್ತಿಗೆದಾರನ ವಿರುದ್ದ ಸೂಕ್ತ ಕ್ರಮಕೈಗೊಂಡು ಅವರ ಗುತ್ತಿಗೆ ಪರವಾನಿಗೆ ರದ್ದುಪಡಿಸಿ ಕಪ್ಪು ಪಟ್ಟಿಗೆ ಹಾಕಬೇಕು. ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಕಟ್ಟಡ ಕಾಮಗಾರಿ ಗುಣಮಟ್ಟದಿಂದ ನಡೆಯಲು ಬೇರೊಬ್ಬ ಗುತ್ತಿಗೆದಾರರಿಗೆ ವಹಿಸಬೇಕೆಂದು ಪೋಲಕಪಳ್ಳಿ ಗ್ರಾಮದ ಮುಖಂಡ ಜಗನ್ನಾಥ ಕೊಡಂಬಲ್ ಆಗ್ರಹಿಸಿದ್ದಾರೆ. ಅಲ್ಲದೆ ಗುಣಮಟ್ಟ ಕಾಮಗಾರಿ ನಡೆಯಲು ಬೇರೊಬ್ಬ ಗುತ್ತಿಗೆದಾರರನ್ನು ವಹಿಸದೆ ಇದ್ದ ಸಂದರ್ಭದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.