ರವಿ ಬಿರಾದಾರ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ

ರವಿ  ಬಿರಾದಾರ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ

ರವಿ ಬಿರಾದಾರ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ  

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ರಾಷ್ಟ್ರೀಯ ಘಟಕದಿಂದ ಶ್ರೀ ರವಿ ಚನ್ನವೀರಪ್ಪ ಬಿರಾದಾರ ಕಮಲಾಪುರ ಅವರನ್ನು ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ದಿನಾಂಕ 18-04-2025 ರಂದು ಅಧಿಕೃತವಾಗಿ ನೇಮಕ ಮಾಡಲಾಗಿದೆ.

ಸಂಘಟನೆಯ ತತ್ತ್ವಸಿದ್ಧಾಂತ ಹಾಗೂ ಶಿಸ್ತು, ಏಕತೆ, ಭದ್ರತೆಯ ತತ್ವಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಯನಿರ್ವಹಿಸುವ ದಿಟ್ಟ ಸಂಕಲ್ಪದೊಂದಿಗೆ ಈ ನೇಮಕಾತಿ ಮಾಡಲಾಗಿದೆ. ಸಂಘಟನೆಯ ಧ್ಯೇಯ ಮತ್ತು ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ, ಸಮುದಾಯದ ಸದಸ್ಯರನ್ನು ಒಗ್ಗೂಡಿಸಿ, ಸಂಘಟಿಸಿ, ಅವರ ಹಿತಕ್ಕಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಹೊಸ ಅಧ್ಯಕ್ಷರ ನೇಮಕಾತಿ ಮಹತ್ತರ ಹೆಜ್ಜೆಯಾಗಲಿದೆ.

ಶ್ರೀ ರವಿ ಬಿರಾದಾರ ಅವರು ತಮ್ಮ ಹೊಸ ಜವಾಬ್ದಾರಿಯನ್ನು ಹೆಮ್ಮೆಯೊಂದಿಗೆ ವಹಿಸಿಕೊಂಡು, ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಸಂಘಟನೆಯ ಮೂಲಕ ವೀರಶೈವ ಲಿಂಗಾಯತ ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯ ಹಾಗೂ ಏಕತೆಯನ್ನು ಗಟ್ಟಿತನದಿಂದ ಬೆಳೆಸಲು ಅವರು ಮುಂದಾಗಲಿದ್ದಾರೆ.

ಈ ಸಂದರ್ಭದಲ್ಲಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರದೀಪ ಕಂಕಣವಾಡಿ ಅವರು ಹೊಸ ಅಧ್ಯಕ್ಷರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿ, ಸಂಘಟನೆಯ ಉದ್ದೇಶಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಮರ್ಥ ನೇತೃತ್ವ ನಿರ್ವಹಣೆಗೆ ಆಶಯ ವ್ಯಕ್ತಪಡಿಸಿದ್ದಾರೆ. ಬಿರಾದಾರ ಅವರಿಗೆ ಅನೇಕ ಗಣ್ಯಮಾನರು ಅಭಿನಂದಿಸಿದ

-